Friday 28 October 2016

ಸ್ವತಂತ್ರ ಕರ್ನಾಟಕದ ಹರಿಕಾರ, ಹುತಾತ್ಮ ಟಿಪ್ಪು ಸುಲ್ತಾನ್ : 4


October 27, 2016
ಪರ ವಿರೋಧಗಳಿಂದ ಹೊರತಾದ  ಟಿಪ್ಪು ಸುಲ್ತಾನ್ ಕುರಿತ  ವಾಸ್ತವ ಸಂಗತಿಗಳನ್ನು ತಿಳಿಸುವ ಬರೆಹ ಇದಾಗಿದೆ. ಟಿಪ್ಪುಸುಲ್ತಾನ್ ಜಯಂತಿಯನ್ನು  ಮತೀಯ ನೆಲೆಯಲ್ಲಿ ವಿರೋಧಿಸಲಾಗುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಮುನ್ನೆಲೆಗೆ ತರಲು ಬಯಸುವ  ಚರ್ಚೆಯಲ್ಲಿ ನೆರವಾಗುವ ಉದ್ದೇಶ ಈ ಬರಹದ ಹಿಂದಿದೆ. ಈ ಅಂಶಗಳನ್ನು ನಿಮ್ಮ ಚರ್ಚೆಯಲ್ಲಿ ಉಲ್ಲೇಖಿಸುವ, ಬರೆಹಗಳಲ್ಲಿ ತರುವ ಪ್ರಯತ್ನಗಳಾಗುವುದು ಈ ಹೊತ್ತಿನ ಅಗತ್ಯ ಎಂಬ ಅಭಿಪ್ರಾಯ ನಮ್ಮದು. ನಾವು ಈ ಕುರಿತು ಮಾತಾಡೋಣ, ಬರೆಯೋಣ. ಚರಿತ್ರೆಯನ್ನು ತಿರುಚುವ, ಆ ಮೂಲಕ ದ್ವೇಷ ಹರಡುವ ಕೋಮುವಾದಿ ಹುನ್ನಾರವನ್ನು ವಿಫಲಗೊಳಿಸೋಣ.
~ ಬಿ.ಪೀರ್‌ಬಾಷ

ಅಧ್ಯಾಯ ~ 2 : ಹೊಸ ಯುಗದ ಹರಿಕಾರ : ಭಾಗ 2

ಟಿಪ್ಪು ಪ್ರಭುತ್ವ ಜಾರಿ ಮಾಡಿದ ಸೈನಿಕರಿಗೆ ಭೂಮಿ ಇತ್ಯಾದಿ ಕ್ರಮಗಳಿಂದ ಸುಮಾರು ೫ ಲಕ್ಷದಷ್ಟು ಎಂದರೆ ಸಂಸ್ಥಾನದ ಒಟ್ಟಾರೆ ಜನಸಂಖ್ಯೆಯ ಶೇ.೧೫ ಭಾಗದಷ್ಟು ರೈತರೇ ಭೂ-ಒಡೆಯರೂ ಆಗಿದ್ದ ಸಣ್ಣ  ರೈತಾಪಿ ವರ್ಗ ಸೃಷ್ಟಿಯಾಯಿತು. "ಈ ವರ್ಗದೊಳಗೆ ಮತ್ತೆ ಶ್ರೀಮಂತ, ಮಧ್ಯಮ ಹಾಗೂ ಬಡ ರೈತ ವರ್ಗಗಳು ರೂಪು ಗೊಂಡವು. ಅದರಲ್ಲಿನ ಶ್ರೀಮಂತ ರೈತ ವರ್ಗವು ಸಂಪೂರ್ಣವಾಗಿ ಮಾರುಕಟ್ಟೆಗಾಗಿ ಉತ್ಪಾದಿಸುತ್ತಿತ್ತು. ಬಂಡವಾಳಶಾಹಿ ವಿಧಾನ ಹಾಗೂ ಕೃ ಕಾರ್ಮಿಕರನ್ನು ಆಧರಿಸಿ ಉತ್ಪಾದಿಸುತ್ತಿದ್ದ ಈ ವರ್ಗಗಳು ಶ್ರೀರಂಗಪಟ್ಟಣ ಹಾಗೂ ಬೆಂಗಳೂರಿನ ಸುತ್ತಮುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದರು....

ಬೀಳು ಬಿದ್ದಿದ್ದ ಸಾವಿರಾರು ಎಕರೆ ಭೂಮಿಯನ್ನು ಟಿಪ್ಪು ಕೃಷಿ ಯೋಗ್ಯ ಮಾಡಲು ಶ್ರಮಿಸಿದ. ನಿಕಿಲಸ್ ಗುಹಾ ಎಂಬುವವರು ಬರೆಯುವಂತೆ "ಟಿಪ್ಪು ತನ್ನ ಸಾಮ್ರಾಜ್ಯದಲ್ಲಿ ಕೃಷಿ ವಿಸ್ತರಣೆಯ ಬಗ್ಗೆಯೂ ಹಲವಾರು ಕ್ರಮಗಳನ್ನು ಕೈಗೊಂಡ. ಹತ್ತು ಹಲವು ವರ್ಷಗಳಿಂದ ಬೀಳು ಬಿದ್ದಿದ್ದ ಭೂಮಿಯನ್ನು ರೈತರಿಗೆ ಕೂಲಿಯ ಆಧಾರದಲ್ಲಿ ಉಳಲು ನೀಡಲಾಗುತ್ತಿತ್ತು. ಮೊದಲ ವರ್ಷದಲ್ಲಿ ಅದರ ಮೇಲೆ ಯಾವುದೇ ತೆರಿಗೆಯನ್ನು ವಿಧಿಸುತ್ತಿರಲಿಲ್ಲ. ಅದೇ ರೀತಿ ಬೆದ್ದಲು ಹಾಗೂ ಬೆಟ್ಟ-ಗುಡ್ಡಗಳ ಜಮೀನನ್ನು ರೈತರಿಗೆ ಹಂಚಿ ತೆರಿಗೆ ರಹಿತವಾಗಿ ಉಳುಮೆಗೆ ಅವಕಾಶ ನೀಡಿ ಉತ್ತೇಜಿಸಲಾಗುತ್ತಿತ್ತು.
ಒಂದು ಅಂದಾಜಿನಂತೆ ಹೈದರಾಲಿಯೊಬ್ಬನೇ ಯುದ್ದದ ನಂತರ ಮದ್ರಾಸಿನ ಪ್ರಾಂತ್ಯಗಳಿಂದ ೬೦,೦೦೦ ಕುಟುಂಬಗಳನ್ನು ಈ ಹೊಸ ವಿಸ್ತರಣಾ ಭೂಮಿಯಲ್ಲಿ ನೆಲೆಗೊಳಿಸಿ ಕೃಷಿ ವಿಸ್ತರಣೆಗೆ ಕಾರಣನಾಗಿದ್ದ. ಹೀಗೆ ಪಾಳೆಗಾರಿ ದಮನ, ಜಾಗೀರು ರದ್ದತಿ, ಮಠ-ಮಾನ್ಯಗಳ ಭೂಮಿಯ ವಂಶ ಪಾರಂಪರ್ಯ ಪಟೇಲಗಿರಿ-ಶಾನುಭೋಗಗಿರಿಯ ಬದಲಾವಣೆ, ಸೈನಿಕರಿಗೆ ಜಮೀನು, ಶೋಷಿತ-ದಮನಿತ ರೈತರು ವಲಸೆ ಬಂದು ಸ್ವತಂತ್ರವಾಗಿ ಕೃ ಚಟುವಟಿಕೆ ಕೈಗೊಳ್ಳಲು ಉತ್ತೇಜನ-ಇವುಗಳು ಕರ್ನಾಟಕದ ಬದುಕಿನಲ್ಲಿ ಬೃಹತ್ ಪ್ರಗತಿಪರ ಬದಲಾವಣೆ ತಂದು ಕರ್ನಾಟಕವನ್ನು ಐತಿಹಾಸಿಕ ಪ್ರಗತಿಯೆಡೆ ಮುನ್ನಡೆಸಿದವು ಹಾಗೂ ನೇರವಾಗಿ ರೈತಾಪಿಯನ್ನು ಊಳಿಗಮಾನ್ಯ ಶೋಷಣೆಂದ ಪಾರುಮಾಡಿ ಸ್ವತಂತ್ರಗೊಳಿಸಿದವು. ಕರ್ನಾಟಕದ ಇತಿಹಾಸದಲ್ಲೇಕೆ ಇಡೀ ಭಾರತದ ಇತಿಹಾಸದಲ್ಲಿ ಪ್ರಭುತ್ವವೊಂದು ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಾಗೂ ಅಮೂಲಾಗ್ರವಾಗಿ ರೈತಾಪಿಯ ಬದುಕನ್ನೇ ಬದಲಾಸಿದ ಮತ್ತೊಂದು ಉದಾಹರಣೆಲ್ಲ".
ಇದಲ್ಲದೇ ಉದ್ಯಮಶೀಲ ಟಿಪ್ಪುಪ್ರಭುತ್ವ, ಯುದ್ದದ ನಡುವೆಯೂ ಕೈಗೊಂಡ ಹಲವಾರು ಕ್ರಮಗಳು ಆಧುನಿಕ ಯುಗದ ಲಕ್ಷಣಗಳನ್ನು ನೀಡಿ ಆರ್ಥಿಕತೆಗೆ ಬಂಡವಾಳಶಾಹಿಸ್ವರೂಪವನ್ನು ಪ್ರಾರಂಭಿಸಿದವು.

ಕೃಷಿಯ ತ್ವರಿತ ವಾಣಿಜ್ಯೀಕರಣ
ಹೈದರ್-ಟಿಪ್ಪೂ ಕಾಲದಲ್ಲಿ ಕೃಯಲ್ಲಿ ವಾಣಿಜ್ಯೀಕರಣ ತೀವ್ರಗೊಂಡಿತು. ಇದರಿಂದಾಗಿ ವ್ಯಾಪಾರಿ ಆರ್ಥಿಕತೆ ಹಳ್ಳಿಗಳಿಗೂ ಕಾಲಿಟ್ಟು ಊಳಿಗಮಾನ್ಯ ಶಕ್ತಿಗಳ ಹಿಡಿತ ಮತ್ತಷ್ಟು ಸಡಿಲಗೊಂಡಿತು. ಉದಾಹರಣೆಗೆ ಬುಕಾನನ್ ಗುರುತಿಸಿದಂತೆ ಆಗ ದೇಶದ ಇತರೆಡೆ ಭೂಕಂದಾಯವನ್ನು ಧಾನ್ಯದ ರೂಪದಲ್ಲಿ ತೆರುತ್ತಿದ್ದರೆ ಮೈಸೂರು ಪ್ರಾಂತ್ಯದಲ್ಲಿ ರೈತರು ಕಂದಾಯವನ್ನು ಸಂಪೂರ್ಣವಾಗಿ ಹಣದಲ್ಲೇ ಪಾವತಿ ಮಾಡುತ್ತಿದ್ದರು. ಆ ತೆರಿಗೆಯೂ ತುಂಬಾ ಪ್ರಗತಿಪರವಾಗಿದ್ದು, ಒಟ್ಟಾರೆ ಉತ್ಪಾದನೆಯ ೧/೬ ಭಾಗದ್ಟದ್ದು ರೈತರ ಮೇಲೆ ಹೊರೆಯಾಗಿರಲಿಲ್ಲ. ಅದರರ್ಥ ಉತ್ಪಾದನೆಯ ೧/೬ ಭಾಗದಷ್ಟಾದರೂ ಮಾರಾಟವಾಗಿ ಸರಕಿನ ರೂಪ ಪಡೆಯುತ್ತಿತ್ತು.
ಪ್ರತಿ ಎರಡು ಮೂರು ಮೈಲಿಗೊಂದು ವಾರದ ಸಂತೆ ಸೇರುತ್ತಿತ್ತು. ಇದರಲ್ಲಿ ರೈತರು ತಮ್ಮ ಸರಕನ್ನು ತಂದು ಸಗಟಾಗಿ ಅಥವಾ ಚಿಲ್ಲರೆಯಾಗಿ ಮಾರುತ್ತಿದ್ದರು. ವಸ್ತು ವಿನಿಮಯ ಬಹಳಷ್ಟು ಕಡಿಮೆಯೇ ಆಗಿತ್ತು.
ಇದೇ ಸಮಯದಲ್ಲಿ ವಾಣಿಜ್ಯ ಬೆಳೆಗಳ ಉತ್ಪಾದನೆಯೂ ತೀವ್ರಗತಿಯಲ್ಲಿ ಹೆಚ್ಚಿತು. ಕಬ್ಬು, ಅಡಿಕೆ, ವೀಳ್ಯೆದೆಲೆ, ರೇಷ್ಮೆ, ತಂಬಾಕು, ನೀಲಿ, ಮಾವು, ಹುಣಸೆ, ಹತ್ತಿ ಹಾಗೂ ಮೆಣಸುಗಳ ಕೃಯನ್ನು ಟಿಪ್ಪು ಪ್ರಭುತ್ವ ವಿಶೇಷವಾಗಿ ಪ್ರೋತ್ಸಾಹಿಸಿತು. ತೋಟಗಾರಿಕೆಯೂ ಕೃ ಸರಕು ಉತ್ಪಾದನೆಗೆ ಮತ್ತಷ್ಟು ಸಹಾಯ ಮಾಡಿತು. ಉದಾಹರಣೆಗೆ ಬುಕಾನನ್ ಗುರುತಿಸಿರುವಂತೆ ಬೆಂಗಳೂರಿನ ಬಳಿ ನಾಲ್ಕು ಬಗೆಯ ತೋಟಗಳಿದ್ದವು. ತರಕಾರಿ ತೋಟ, ತೆಂಗಿನ ತೋಟ, ಎಲೆ ತೋಟ ಮತ್ತು ಹೂವಿನ ತೋಟ. ಇದಲ್ಲದೆ ಟಿಪ್ಪುವಿನ ಆಳ್ವಿಕೆಯಡಿ ಕರಾವಳಿ ಪ್ರಾಂತ್ಯದಲ್ಲಿ ವೀಳ್ಯದೆಲೆ, ಗೋಡಂಬಿ, ತಂಬಾಕು ಮತ್ತು ಹಲವು ಬಗೆಯ ಭತ್ತದ ಉತ್ಪಾದನೆ ವಿಶೇಷ ಪ್ರೋತ್ಸಾಹ ಪಡೆದುಕೊಂಡಿತು.
ಈ ಬಗೆಯ ವಾಣಿಜ್ಯ ಬೆಳೆಗಳ ಉತ್ಪಾದನೆಂದ ನಿಧಾನವಾಗಿ ಕೃಯಲ್ಲಿ ಗ್ರಾಮೀಣ ಆರ್ಥಿಕತೆಯಲ್ಲಿ ಬಂಡವಾಳ ಶಾಹಿ ಸಂಬಂಧಗಳು ಕಾಣಿಸಿಕೊಳ್ಳಲು ಪ್ರಾರಂಭವಾಗಿ ಉಳಿಗಮಾನ್ಯ ಶೋಷಣಾ ವಿಧಾನಗಳು ನಿಧಾನವಾಗಿ ಕಣ್ಮರೆಯಾಗಲು ಪ್ರಾರಂಭಿಸಿದವು ಮತ್ತು ಈ ಪ್ರಕ್ರಿಯೆ ಕೃಷಿಯಲ್ಲಿ ಬಂಡವಾಳಶಾಹಿ ವಿಧಾನಗಳಿಗೆ ದಾರಿ ಮಾಡಿಕೊಡುತ್ತಿತ್ತು.

ಈ ರೀತಿಯಲ್ಲಿ ಕೃಷಿ ಸುಧಾರಣೆ, ನೀರಾವರಿ, ಹೊಸ ತಳಿಗಳ ಪ್ರಚಾರ, ವಾಣಿಜ್ಯ ಕೃಷಿ ವಿಸ್ತರಣೆ ಹಾಗೂ ರೈತರಿಗೆ  ಕೃಷಿ ಸಾಲ ಇವುಗಳ ಭೂ-ಆಸ್ತಿ ಸಂಬಂಧಗಳಲ್ಲೂ ವಿಶೇಷ ಪರಿಣಾಮ ಹಾಗೂ ಪ್ರಭಾವವನ್ನು ಉಂಟುಮಾಡಿದವು. ಕರ್ನಾಟಕದ ಜನತೆಯ ಹೋರಾಟಗಳ ಇತಿಹಾಸವನ್ನು ಸಮಗ್ರವಾಗಿ ಕಟ್ಟಿಕೊಟ್ಟಿರುವ "ಮೇಕಿಂಗ್ ಹಿಸ್ಟರಿ" ಎಂಬ ಪುಸ್ತಕದಲ್ಲಿ ವಿವರಿಸುವಂತೆ, ಟಿಪ್ಪುವಿನ  ಈ ಎಲ್ಲಾ ಕ್ರಮಗಳಿಂದ "ಕರ್ನಾಟಕದಲ್ಲಿ ಊಳಿಗೆಮಾನ್ಯತೆಯ ಆಧಾರವಾಗಿದ್ದ  ಭೂಮಿಯ ಒಡೆತನದ ಮೇಲೆ ಊಳಿಗಮಾನ್ಯ ವರ್ಗಗಳ ಸಂಪೂರ್ಣ   ಏಕಸ್ವಾಮ್ಯವನ್ನು ಮುರಿಯಿತು. ಅದರ ಜಾಗದಲ್ಲಿ ೩ರಿಂದ ೪ಲಕ್ಷ ರೈತರೇ ಭೂ ಒಡೆಯರಾಗಿ ಸಣ್ಣ ರೈತ ಹಿಡುವಳಿಗಳು ಹುಟ್ಟಿಕೊಂಡು  ಕೃ-ಸರಕು ಆರ್ಥಿಕತೆ ತೀವ್ರಗತಿ ಪಡೆದುಕೊಂಡಿತು. "ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಭೂಮಿಯನ್ನು ಹಸ್ತಾಂತರ ಮಾಡಬಹುದಿತ್ತು. ಟಿಪ್ಪುವಿನ ಕಾನೂನಿನಂತೆ ಆ ಭೂಮಿಯಿಂದ ಯಾರೂ ರೈತರನ್ನು ಸ್ಥಳಾಂತರಿಸುವಂತಿರಲಿಲ್ಲ. ಸಾಕಿಯವರು ಗುರುತಿಸುವಂತೆ "ಈ ಬಗೆಯ, ರೈತ ಖಾಸಗಿ ಆಸ್ತಿ ಹಿಡುವಳಿಯು ಭೂ-ಮಾಲೀಕ ವರ್ಗಗಳ ರಾಜಕೀಯ-ಆರ್ಥಿಕ ಏಕಸ್ವಾಮ್ಯಕ್ಕೆ ಬಲವಾದ ಪೆಟ್ಟು ಕೊಟ್ಟಿತು. ಈ ಬಗೆಯ ಖಾಸಗಿ ಆಸ್ತಿ ಊಳಿಗಮಾನ್ಯ ಖಾಸಗಿ ಆಸ್ತಿಯ ಸ್ವರೂಪಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು. ಈ ರೈತ ಖಾಸಗಿ ಆಸ್ತಿಯು ಗ್ರಾಮೀಣ ಪ್ರದೇಶದಲ್ಲಿ ಬಂಡವಾಳಶಾಹಿ ಆಸ್ತಿ ಸಂಬಂಧ ಬೆಳೆಯಲು ಪೂರ್ವಶರತ್ತಾಗಿತ್ತು. ಈ ಬಗೆಯ ರೈತ ಖಾಸಗಿ ಆಸ್ತಿ ಬಂಡವಾಳದ ಯುಗಕ್ಕೆ ಸಂಬಂಧಿಸಿದ್ದು. ಕೃಯಲ್ಲಿ ಊಳಿಗಮಾನ್ಯ ಸಂಬಂಧಗಳು ಅರೆ ಊಳಿಗಮಾನ್ಯ ಸಂಬಂಧಗಳಾಗಿ ಪರಿವರ್ತನೆಗೊಳ್ಳುತ್ತಿದ್ದುದನ್ನು ಸೂಚಿಸುತ್ತದೆ."

ಸಾಕಿಯವರು ಬಹಳ ದೀರ್ಘ ಹಾಗೂ ಸಮಗ್ರ ಅಧ್ಯಯನದಿಂದ ಸ್ಪಷ್ಟಪಡಿಸುವಂತೆ "ಈ ಬಗೆಯ ಹೊಸ ಆಸ್ತಿ ಸಂಬಂಧಗಳು ಕೃಷಿಯಲ್ಲಿ ಹೊಸ ಉತ್ಪಾದನಾ ಸಂಬಂಧಗಳಿಗೆ ದಾರಿ ಮಾಡಿಕೊಟ್ಟವು. ಇದರಿಂದಾಗಿ ಕೃಷಿ ರಂಗದಲ್ಲಿ ಊಳಿಗಮಾನ್ಯ ವ್ಯವಸ್ಥೆಗೆ ಹೊರತಾದ ಹೊಸ ಮಾರ್ಗಗಳು ಹುಟ್ಟಿಕೊಂಡವು. ಜೀತಗಾರ ಪದ್ದತಿ, ಕ್ರಮೇಣ ಬದಲಾಗುತ್ತಾ ವಾರ ಅಥವಾ ದಿನಗೂಲಿ ಅಧಾರದ "ಚೆಂಗೂಲಿ" ಕೃಕಾರ್ಮಿಕ ವರ್ಗ ಅಸ್ತಿತ್ವಕ್ಕೆ ಬಂದಿತು. ಇದರೊಡನೆ ಜೀತಗಾರರನ್ನು ತಿಂಗಳ ಅಥವಾ ರ್ವಾಕ ಲೆಕ್ಕದಲ್ಲಿ ಇಟ್ಟುಕೊಳ್ಳುವ ವ್ಯವಸ್ಥೆ ಬಂದಿತು. ಇದು ಆಜೀವ ಪರ್ಯಂತ ಭೂ-ಮಾಲೀಕರ ಸೇವೆಯಲ್ಲಿ ಜೀವ ತೇಯಬೇಕಾಗಿದ್ದ ಜೀತಗಾರರ ಬದುಕಿಗೆ ಒಂದಷ್ಟು ಬಿಡುಗಡೆಯನ್ನೇ ತಂದುಕೊಟ್ಟಿತು. ಇದಲ್ಲದೇ ಸ್ವತಂತ್ರ ಗೇಣಿದಾರ ವರ್ಗವೂ ಉದಿಸಿತು".
ಎಲ್ಲಕ್ಕಿಂತ ಹೆಚ್ಚಾಗಿ ಟಿಪ್ಪು ಪ್ರಭುತ್ವ ಜಾರಿ ಮಾಡಿದ ಸೈನಿಕರಿಗೆ ಭೂಮಿ ಇತ್ಯಾದಿ ಕ್ರಮಗಳಿಂದ ಸುಮಾರು ೫ ಲಕ್ಷದಷ್ಟು ಎಂದರೆ ಸಂಸ್ಥಾನದ ಒಟ್ಟಾರೆ ಜನಸಂಖ್ಯೆಯ ಶೇ.೧೫ ಭಾಗದಷ್ಟು ರೈತರೇ ಭೂ-ಒಡೆಯರೂ ಆಗಿದ್ದ ಸಣ್ಣ  ರೈತಾಪಿ ವರ್ಗ ಸೃಷ್ಟಿಯಾಯಿತು. "ಈ ವರ್ಗದೊಳಗೆ ಮತ್ತೆ ಶ್ರೀಮಂತ, ಮಧ್ಯಮ ಹಾಗೂ ಬಡ ರೈತ ವರ್ಗಗಳು ರೂಪು ಗೊಂಡವು. ಅದರಲ್ಲಿನ ಶ್ರೀಮಂತ ರೈತ ವರ್ಗವು ಸಂಪೂರ್ಣವಾಗಿ ಮಾರುಕಟ್ಟೆಗಾಗಿ ಉತ್ಪಾದಿಸುತ್ತಿತ್ತು. ಬಂಡವಾಳಶಾಹಿ ವಿಧಾನ ಹಾಗೂ ಕೃ ಕಾರ್ಮಿಕರನ್ನು ಆಧರಿಸಿ ಉತ್ಪಾದಿಸುತ್ತಿದ್ದ ಈ ವರ್ಗಗಳು ಶ್ರೀರಂಗಪಟ್ಟಣ ಹಾಗೂ ಬೆಂಗಳೂರಿನ ಸುತ್ತಮುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದರು".
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಸಾಕಿಯವರು 'ಮೇಕಿಂಗ್ ಹಿಸ್ಟರಿ' ಪುಸ್ತಕದಲ್ಲಿ ಪ್ರತಿಪಾದಿಸಿರುವಂತೆ ಬ್ರಿಟಿಷರ ಆಕ್ರಮಣಕ್ಕೆ ಸಾಕಷ್ಟು ಮುಂಚೆಯೇ ಕನಿಷ್ಟ ಪಕ್ಷ ಮೈಸೂರು ಪ್ರಾಂತ್ಯದಲ್ಲಿ ಊಳಿಗಮಾನ್ಯತೆ ಬಿರುಕು ಬಿಟ್ಟ ಸಮಾಜವು ಅರೆ-ಊಳಿಗಮಾನ್ಯತೆಯೆಡೆಗೆ ಸರಿಯುತ್ತಿತ್ತು. ಈ ಪ್ರಕ್ರಿಯೆಯನ್ನು ಕೃಯನ್ನು, ಕ್ರಾಂತಿಕಾರಿ ಬದಲಾವಣೆ ತರುವ ಮೂಲಕ ತ್ವರಿತಗೊಳಿಸಿದ್ದು ಟಿಪ್ಪು ಹಾಗೂ ಹೈದರಾಲಿಗಳು. ಈ ಅರ್ಥದಲ್ಲಿ ಶೋಷಿತ ರೈತ ಸಮುದಾಯದ ದ್ಟೃಂದ ಅವರು ದೊರೆಗಳು ಮಾತ್ರವಲ್ಲ ಊಳಿಗಮಾನ್ಯ ವಿರೋಧಿ ಶಕ್ತಿಗಳೂ ಆಗಿದ್ದರು.


ಎರಡನೇ ಯುದ್ದರಂಗ : ವ್ಯಾಪಾರ-ವಾಣಿಜ್ಯ
ಕರ್ನಾಟಕವನ್ನಾಳಿದ ಇತರ ದೊರೆಗಳಂತೆ ಟಿಪ್ಪು-ಹೈದರರು ಊಳಿಗಮಾನ್ಯ ಶಕ್ತಿಗಳ ಪ್ರತಿನಿಧಿಗಳಾಗಿರಲಿಲ್ಲ. ಅವರು ಊಳಿಗಮಾನ್ಯತೆಯೊಂದಿಗೆ ಸಂರ್ಘಸುತ್ತಾ ಉದುಸಿ ಬರುತ್ತಿದ್ದ ಹೊಸ ವ್ಯಾಪಾರೋದ್ಯಮಿ ವರ್ಗದ ಪ್ರತಿನಿಧಿಗಳಾಗಿದ್ದರು. ಆದ್ದರಿಂದಲೇ, ಟಿಪ್ಪು-ಹೈದರರು ಬ್ರಿಟಿಷ್ ಆಕ್ರಮಣವನ್ನು ರಾಜಕೀಯವಾಗಿ ಮಾತ್ರವಲ್ಲದೇ ಆರ್ಥಿಕವಾಗಿಯೂ ಹಿಮ್ಮೆಟ್ಟಿಸಲು ಪ್ರಯತ್ನಿಸಿದರು. ವ್ಯಾಪಾರಿ ಬಂಡವಾಳಿಗರಾಗಿ ಭಾರತ ಪ್ರವೇಶಿಸಿದ ಬ್ರಿಟಿಷರು ಕರ್ನಾಟಕದಲ್ಲೂ ಒಟ್ಟಾರೆ ವ್ಯಾಪಾರಿ ಆರ್ಥಿಕತೆಯನ್ನು, ನಿಯಂತ್ರಿಸುವ ಉದ್ದೇಶವನ್ನು ಹೊಂದಿದ್ದರು. ಆದರೆ ಮೈಸೂರು ಸಂಸ್ಥಾನದ ಬೃಹತ್ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವ ಬ್ರಿಟಿಷ್ ವಸಾಹತುಶಾಹಿ ಸಂಚುಗಳನ್ನು ವಿರೋಧಿಸುತ್ತಲೇ ಟಿಪ್ಪು-ಹೈದರರು ಸ್ಥಳೀಯ ಮಾರುಕಟ್ಟೆ ಹಾಗೂ ವಾಣಿಜ್ಯೋದ್ಯಮವನ್ನು ಬೆಳೆಸಿದರು. ಬ್ರಿಟಿಷರ ಈ ಆರ್ಥಿಕ ಆಕ್ರಮಣದ ವಿರುದ್ದ ಟಿಪ್ಪು-ಹೈದರರು ಬ್ರಿಟಿಷ್ ವಾಣಿಜ್ಯ ಬ"ಷ್ಕಾರ ಹಾಗೂ ಗೃಹ ಮಾರುಕಟ್ಟೆಯ ರಕ್ಷಣೆ ಎಂಬ ಎರಡೂ "ಸ್ವದೇಶಿ" ವಿಧಾನಗಳನ್ನು ಬಳಸಿದರು. ಮತ್ತೊಂದೆಡೆ ಸಂಸ್ಥಾನದೊಳಗಡೆ ವ್ಯಾಪಾರ ಮತ್ತು ವಾಣಿಜ್ಯವು ವಿಸ್ತೃತಗೊಳ್ಳಲು ಎಲ್ಲಾ ಉತ್ತೇಜನಗಳನ್ನು ನೀಡಿದರು.

೧೭೮೪ರ ಎರಡನೇ ಯುದ್ಧದಲ್ಲಿ ವಿಜಯ ಪಡೆದ ನಂತರ ಬ್ರಿಟಿಷರೊಡನೆ ಎಲ್ಲಾ ವಾಣಿಜ್ಯ ಸಂಬಂಧಗಳನ್ನೂ ಕೊನೆಗಾಣಿಸಿದ್ದಲ್ಲದೆ ಅದೇ ಸಮಯದಲ್ಲಿ ಸರ್ಕಾರಿ ವಾಣಿಜ್ಯ ರಂಗವನ್ನು ಉದ್ಘಾಟಿಸಲಾಯಿತು. ಇವೆರಡು ನೀತಿಗಳೂ ವಸಾಹತುಶಾಹಿ ಆಕ್ರಮಣದ ವಿರುದ್ದ ಮೈಸೂರು ಹೂಡಿದ ವಾಣಿಜ್ಯ ಯುದ್ದವೇ ಆಗಿತ್ತು. ಕರಾವಳಿಯಲ್ಲಿ ನಡೆದ ಎರಡು ಶತಮಾನಗಳ ವಸಾಹತುಶಾಹಿ ವಾಣಿಜ್ಯ ವಹಿವಾಟುಗಳಿಂದ ಇಲ್ಲಿಯ ಸ್ಥಳೀಯ ವ್ಯಾಪಾರಿ ವರ್ಗ ಬಲಹೀನವಾಗಿದ್ದು ಸ್ವತಂತ್ರ ಅಭಿವೃದ್ದಿ ಕಂಡುಕೊಳ್ಳಲು ಕಷ್ಟವಾಗಿತ್ತು. ಹೀಗಾಗಿ ಈ ಬಲಹೀನ, ಆದರೆ ಎಲ್ಲಾ ಅಭಿವೃದ್ಧಿ ಸಾಧ್ಯತೆ ಹೊಂದಿದ್ದ ವ್ಯಾಪಾರಿ ವರ್ಗವು ತನ್ನ ಬೆಳವಣಿಗೆಗೆ ಪ್ರಭುತ್ವವನ್ನು ಬಳಸಿಕೊಂಡರೆ ಟಿಪ್ಪುವಿನ ಪ್ರಭುತ್ವವು ಈ ವ್ಯಾಪಾರಿ ವರ್ಗಗಳಿಗೆ ವಸಾಹತುಶಾಹಿ ವಿರೋಧಿ-ಊಳಿಗಮಾನ್ಯ ವಿರೋಧಿ ಪಾತ್ರವನ್ನು ನಿರ್ವಹಿಸಲು ಸಂಪೂರ್ಣ ಉತ್ತೇಜನ ನೀಡಿತು.
೧೭೯೩-೯೪ ರಲ್ಲಿ ಟಿಪ್ಪುವಿನ "ವಾಣಿಜ್ಯ ಕಾಯ್ದೆ”  ಜಾರಿಗೆ ಬಂತು. ಈ ಕಾದೆಯಂತೆ ವಾಣಿಜ್ಯ ಪ್ರೋತ್ಸಾಹಕ್ಕೆಂದೇ ಸರ್ಕಾರದಲ್ಲಿ "ಮುಲಿಕಾತ್ ತೂಜರ್" ಎಂಬ ಇಲಾಖೆಯನ್ನು ಪ್ರಾರಂಭಿಸಲಾಯಿತು. ಸಾಗರೋತ್ತರ ವ್ಯಾಪಾರವನ್ನು ಪ್ರೋತ್ಸಾಹಿಸಿ ೩೧ ನೌಕೆಗಳನ್ನು ಹಾಗೂ ೩,೨೦,೦೦೦ ಪಗೋಡಾಗಳನ್ನು ತೆಗೆದಿರಿಸಲಾತು. ಮತ್ತೊಂದೆಡೆ ವಾರದ ಸಂತೆಗಳನ್ನು ಜನಪ್ರಿಯಗೊಳಿಸಲಾಯಿತು.
ಇದಲ್ಲದೆ ಟಿಪ್ಪುವಿನ ಪ್ರಭುತ್ವವೇ ಸರ್ಕಾರಿ ವ್ಯಾಪಾರಿ ನಿಗಮವೊಂದನ್ನು ಸ್ಥಾಪಿಸಿ ವಾಣಿಜ್ಯಕ್ಕೆ ಪ್ರೋತ್ಸಾಹ ನೀಡಿತು. ಇದರಿಂದಾಗಿ, ಸಾಕಿಯವರು "ಮೇಕಿಂಗ್ ಹಿಸ್ಟರಿ" ಪುಸ್ತಕದಲ್ಲಿ ಗಮನಿಸಿರುವಂತೆ "ಪ್ರತ್ಯೇಕವಾಗಿ ಹರಡಿ ಹೋಗಿದ್ದ ಖಾಸಗಿ ಬಂಡವಾಳವನ್ನು ಸರ್ಕಾರವೇ ಸಂಗ್ರಹಿಸಿ ವಾಣಿಜ್ಯ ಅಭಿವೃದ್ದಿಗೆ ಕೊಟ್ಟಂತಾತಲ್ಲದೇ ಉದ್ಯಮಿಗಳು ಹಾಗೂ ಅಧಿಕಾರಿಗಳು ಎಲ್ಲಾ ಸರ್ಕಾರಿ ವಾಣಿಜ್ಯ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡಿತು. ಇದರಿಂದಾಗಿ ಪ್ರಭುತ್ವ ಹಾಗೂ ವ್ಯಾಪಾರಿ ಬಂಡವಾಳ ಮತ್ತಷ್ಟು ಹತ್ತಿರ ಬರುವಂತಾತು. ಇದರ ರಾಜಕೀಯ ಪರಿಣಾಮವಾಗಿ ಆ ವರ್ಗಗಳಲ್ಲಿ ಉದುಸಿದ ದೇಶಪ್ರೇಮಿ ಮನೋಭಾವವನ್ನು ನಾವು ಕಡೆಗಣಿಸುವಂತಿಲ್ಲ".
ಉದಾಹರಣೆಗೆ, ಇದರಿಂದಾಗಿ ಜವಳಿ ವ್ಯಾಪಾರದಲ್ಲಿ ನಿರತರಾಗಿದ್ದ ಬಣಜಿಗ ಸಮುದಾಯ ಟಿಪ್ಪು ಪ್ರಭುತ್ವದ ಉತ್ತೇಜನದೊಂದಿಗೆ ಬೃಹತ್ತಾಗಿ ಬೆಳೆತಲ್ಲದೇ ಆ ಪ್ರಕ್ರಿಯೆಯಲ್ಲಿ ಕರ್ನಾಟಕದಾದ್ಯಂತ ತಮ್ಮ ಚಟುವಟಿಕೆಯನ್ನು ಹರಡಿ ಆ ಮೂಲಕ, ಈಗಾಗಲೇ ಚಾಲನೆಗೊಂಡಿದ್ದ ಕರ್ನಾಟಕದ ಒಂದುಗೂಡು"ಕೆಯ ಪ್ರಕ್ರಿಯೆಗೂ ಇಂಬು ನೀಡಿದರು. ಈ ವ್ಯಾಪಾರಿಗಳು ಹತ್ತಿ ಜವಳಿ ಉದ್ಯಮದ ಪ್ರತಿಯೊಂದು ಹಂತದಲ್ಲೂ ಮಧ್ಯ ಪ್ರವೇಶಿಸಿ ಒಟ್ಟಾರೆ ಉದ್ಯಮದ ವಿಕಾಸಕ್ಕೆ ಉತ್ಕರ್ಷ ಒದಗಿಸುತ್ತಿದ್ದರು. ಈ ಉದ್ಯಮಕ್ಕೆ ಬೇಕಾದ ನಾಲ್ಕು ಕ್ಷೇತ್ರಗಳಲ್ಲೂ ನಾಲ್ಕು ಬಗೆಯ ವಿಶೇಷ ಪರಿಣತಿ ಹೊಂದಿದ ಉದ್ಯಮಿಗಳಿದ್ದರು. ಮೊದಲನೆಯ ವರ್ಗ, ಈ ಉದ್ಯಮಕ್ಕಾಗಿ ಹತ್ತಿಯನ್ನು ಉತ್ಪಾದಿಸಿ ಮಾರುತ್ತಿದ್ದವರು. ಎರಡನೆಯ ವರ್ಗ, ಇದನ್ನು ಉತ್ಪಾದಕರಿಂದ ಖರೀದಿಸಿ ನೇಕಾರರಿಗೆ ಮಾರುತ್ತಿದ್ದ ವರ್ಗ. ಮೂರನೆಯದು ಈ ಸರಕನ್ನು ಸಾಗಾಣಿಕೆ ಮಾಡುತ್ತಿದ್ದ ವೃತ್ತಿಪರ ಸಾಗಾಣಿಕೆದಾರರ ವರ್ಗ. ನಾಲ್ಕನೆಯದು ಗಂಡಕಿ ಎಂದು ಕರೆಯಲ್ಪಡುತ್ತಿದ್ದ, ಜವಳಿ ಉದ್ಯಮಕ್ಕೆ ಬಣ್ಣ ಉತ್ಪಾದನೆ ಮಾಡುತ್ತಿದ್ದ ವರ್ಗ.
ಜವಳಿ ಉದ್ಯಮಕ್ಕೆ ಬೇಕಾದ ಕಚ್ಚಾ ಹತ್ತಿ, ಅರಳೆಗಳನ್ನು ಬಳ್ಳಾರಿ, ಆದೋನಿ, ಧಾರವಾಡ, ಹುಬ್ಬಳ್ಳಿ, ನವಲಗುಂದ, ಗುತ್ತಿ, ಸವಣೂರು ಮತ್ತು ಗಜೇಂದ್ರಗಢ ಗಳ ಬಣಜಿಗ ವ್ಯಾಪಾರಿ ಕೇಂದ್ರಗಳು ಪೂರೈಸುತ್ತಿದ್ದವು. ಇವೆಲ್ಲವೂ ಪ್ರಮುಖ ಹತ್ತಿ ಉತ್ಪಾದನಾ ಕೇಂದ್ರಗಳೂ ಆಗಿದ್ದವು. ಉತ್ಪಾದನೆಯಾದ ಸಿದ್ದ ಸರಕುಗಳನ್ನು ಬೆಂಗಳೂರು, ಶ್ರೀರಂಗಪಟ್ಟಣ, ಗುಬ್ಬಿ, ನರ, ಚಿತ್ರದುರ್ಗ, ಚೆನ್ನಪಟ್ಟಣ, ಮಂಗಳೂರು, ಭಟ್ಕಳ, ಹೊನ್ನಾವರ, ಕಾರವಾರ ಹಾಗೂ ಕಲ್ಲಿಕೋಟೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.
ಹೀಗೆ ಬಣಜಿಗ ವ್ಯಾಪಾರಿಗಳು ಮೈಸೂರು ಸಂಸ್ಥಾನದ ಒಂದು ಮೂಲೆಂದ ಮತ್ತೊಂದು ಮೂಲೆಯವರೆಗೆ ಹರಡಿಕೊಂಡು ಕರ್ನಾಟಕದ ಹತ್ತಿ ಉದ್ಯಮವನ್ನೇ ನೇಯುತ್ತಿದ್ದರು. ಈ ವ್ಯಾಪಾರದಿಂದ ಉಂಟಾಗುತ್ತಿದ್ದ ಹೆಚ್ಚುವರಿಯನ್ನು ಬಣಜಿಗ ವ್ಯಾಪಾರಿಗಳು ಉತ್ತರಕರ್ನಾಟಕದ ರೈತರಿಗೆ ಸಾಲವಾಗಿ ಒದಗಿಸುತ್ತಿದ್ದರು. ಹೀಗೆ ರೈತಾಪಿಯು ಸಹ ರಾಷ್ಟ್ರೀಯ ಮಾರುಕಟ್ಟೆಯ ಹಾಗೂ ಈ ವ್ಯಾಪಾರಿಗಳ ಪ್ರಭಾವದ ಕೆಳಗೆ ಬರಲಾರಂಭಿಸಿದ್ದರು". ಪ್ರಭುತ್ವದ ಈ ಎಲ್ಲಾ ಬೆಂಬಲದಿಂದ ವಾಣಿಜ್ಯ ಚಟುವಟಿಕೆ ವಿಸ್ತೃತಗೊಂಡಿತ್ತು. ಬುಕಾನನ್‌ನ ಪ್ರಕಾರ ಟಿಪ್ಪುವಿನ ಪತನದ ನಂತರ ಬೆಂಗಳೂರು ಕೇಂದ್ರದಲ್ಲಿ ಮೊದಲಿನ ಕಾಲು ಭಾಗದಷ್ಟು ವಾಣಿಜ್ಯ ಚಟುವಟಿಕೆ ಮಾತ್ರ ಸಾಗುತ್ತಿತ್ತು. ಅಂತಹ ಕ್ಷೀಣ ವ್ಯಾಪಾರ ಪರಿಸ್ಥಿತಿಯಲ್ಲೂ ಬುಕಾನನ್‌ನ ದಾಖಲೆಯ ಪ್ರಕಾರ ಬೆಂಗಳೂರಿಗೆ ರ್ವಾಕವಾಗಿ ೧೫೦೦ ಗಾಡಿ ಅರಳೆಹತ್ತಿ, ೫೦ಗಾಡಿ ಹತ್ತಿನೂಲು, ೨೩೦ಗಾಡಿ ಕಚ್ಚಾರೇಷ್ಮೆ, ೭೦೦೦ಗಾಡಿ ಅಡಿಕೆ, ೪೦೦೦ಗಾಡಿ ಅಡಿಕೆ, ೪೦೦ಗಾಡಿ ಮೆಣಸು ರಫ್ತಾಗುತ್ತಿತ್ತು. ಬುಕಾನನ್ ಹೇಳುವಂತೆ ಟಿಪ್ಪು-ಹೈದರರ ಕಾಲದಲ್ಲಿ ಇದರ ೪ ಪಟ್ಟು ಹೆಚ್ಚು ಸರಕು ವಹಿವಾಟು ನಡೆಯುತ್ತಿತ್ತು.ಇದರೊಂದಿಗೆ ಸರಕು-ಸಾಗಾಣಿಕೆಗೆ ಎತ್ತು ಹಾಗೂ ಗಾಡಿಯನ್ನು ಸರಬರಾಜು ಮಾಡುತ್ತಿದ್ದ ಒಂದು ಸೇವಾವಲಯವೂ ಹುಟ್ಟಿಕೊಂಡಿತ್ತು.

ಈ ಎಲ್ಲಾ ಬೃಹತ್ ಪ್ರಮಾಣದ ವಾಣಿಜ್ಯ ಚಟುವಟಿಕೆಗಳಿಂದಾಗಿ ಮೈಸೂರು ಸಂಸ್ಥಾನದಲ್ಲಿ ಮಿಕ್ಕೆಲ್ಲಾ ಸಂಸ್ಥಾನಗಳಿಗಿಂತ ಬೃಹತ್ ಮಟ್ಟದಲ್ಲಿ ರಸ್ತೆ-ಸಾರಿಗೆಗಳಂತಹ ಮೂಲಭೂತ ಸೌಕರ್ಯಗಳು ಅಭಿವೃದ್ದಿಗೊಂಡವು. ವ್ಯಾಪಾರದ ನರನಾಡಿಗಳಾದ ರಸ್ತೆಗಳನ್ನು ಅಭಿವೃದ್ದಿ ಪಡೆಸಲು ಟಿಪ್ಪು-ಹೈದರರು ವಿಶೇಷ ಗಮನ ನೀಡಿದರು. ಅವರು ನಿರ್ಮಿಸಿದ ಹೊಸ ರಸ್ತೆಗಳಲ್ಲಿ ಶ್ರೀರಂಗಪಟ್ಟಣ-ಮಡಿಕೇರಿ-ಕಣ್ಣೂರು ರಸ್ತೆ,ಶ್ರೀರಂಗಪಟ್ಟಣ-ಚಾಮರಾಜನಗರ-ಸತ್ಯಮಂಗಲ-ಕೊಯಮತ್ತೂರು ರಸ್ತೆ,ಶ್ರೀರಂಗಪಟ್ಟಣ-ಮೈಸೂರು-ಮಾನಂಕವಾಡಿ-ಸುಲ್ತಾನ್‌ಬತೇರಿ-ಕಲ್ಲಿಕೋಟೆ ರಸ್ತೆ,ಶ್ರೀರಂಗಪಟ್ಟಣ-ಕೊಳ್ಳೇಗಾಲ-ಸೇಲಂ ರಸ್ತೆ, ಸಕ್ರೆಪಟ್ಟಣ-ಮಂಗಳೂರು (ಚಾರ್ಮಡಿ ಘಾಟಿನ ಮೂಲಕ), ಬೆಂಗಳೂರು-ಸಕಲೇಶಪುರ-ಮಂಗಳೂರು ರಸ್ತೆ, ದೊಡ್ಡಮನೆ ಘಾಟಿನ ಮೂಲಕ ಬೀಳಗಿ -ಕುಮಟಾಗಳನ್ನು ಜೋಡಿಸುವ ರಸ್ತೆಗಳು ಪ್ರಮುಖವಾದವು. ಇದಲ್ಲದೆ ೧೭೯೧ರ ವೇಳೆಗೆ ಶ್ರೀರಂಗಪಟ್ಟಣ, ಚಿತ್ರದುರ್ಗ, ಪೆನುಕೊಂಡ, ತಡೆಮೇರಿ, ಕೋಲಾರ, ಮಾಲೂರು ಮತ್ತು ಹೊಸೂರುಗಳಿಂದ ಬೆಂಗಳೂರನ್ನು ಸೇರುವ ೭ ಪ್ರಮುಖ ಹೆದ್ದಾರಿಗಳನ್ನು ನಿರ್ಮಿಸಲಾಗಿತ್ತು. ಇದಲ್ಲದೇ ಇಂದಿನ ರಾಷ್ಟ್ರೀಯ ಹೆದ್ದಾರಿ ೧೭ರ ಕೊಂಕಣ ಮಾರ್ಗದಲ್ಲಿ ಮಂಗಳೂರಿನಿಂದ ಸದಾಶಿವಗಢದ ತನಕ ಎಲ್ಲಾ ಕರಾವಳಿ ಕೇಂದ್ರಗಳನ್ನು ಜೋಡಿಸುವ ಪ್ರಮುಖ ಹೆದ್ದಾರಿಯನ್ನು ನಿರ್ಮಿಸಲಾಗಿತ್ತು.
ಇಷ್ಟೆಲ್ಲಾ ವ್ಯಾಪಾರ ವಹಿವಾಟಿಗೆ ಬೇಕಾದ ಬೃಹತ್ ಸಂಖ್ಯೆಯ ನಾಣ್ಯಗಳನ್ನು ಟಂಕಿಸುವಲ್ಲೂ ಟಿಪ್ಪು-ಹೈದರ್ ಪ್ರಮುಖರಾಗಿದ್ದರು. ಟಿಪ್ಪುವಿನ ಕಾಲದಲ್ಲಿ ಚಿನ್ನ,ಬೆಳ್ಳಿ ಹಾಗೂ ತಾಮ್ರಗಳ ೧೬ ಬಗೆಯ ವಿವಿಧ ಮೌಲ್ಯದ ನಾಣ್ಯಗಳನ್ನು ಟಂಕಿಸಲಾಗಿತ್ತು.

ಹೀಗೆ ಟಿಪ್ಪು ತನ್ನ ವಸಾಹತುಶಾಹಿ ವಿರೋಧಿ ಯುದ್ದವನ್ನು ಆರ್ಥಿಕ ರಂಗದಲ್ಲೂ ರಾಜಿಲ್ಲದೆ ಮುಂದುವರೆಸಿದ. ಹಾಗೆ ನೋಡಿದರೆ ಬ್ರಿಟೀಷ್ ವಸಾಹತುಶಾಹಿ ವಿರುದ್ದ ಟಿಪ್ಪುವಿನ ಸಂಘರ್ಷದ ಮೂಲ ಕರ್ನಾಟಕದ ಸ್ವತಂತ್ರ ವಾಣಿಜ್ಯ ಹಾಗೂ ಕೈಗಾರಿಕೆ ಅಭಿವೃದ್ದಿಗೆ ಬ್ರಿಟಿಷ್ ವಸಾಹತುಶಾಹಿ ಅಡ್ಡಿಯಾಗಿದ್ದುದೇ ಆಗಿತ್ತು.
ಆದ್ದರಿಂದಲೇ ೧೭೮೪ರಲ್ಲಿ ಎರಡನೇ ಮೆಸೂರು ಯುದ್ದದಲ್ಲಿ ವಿಜಯ ಪಡೆದ ಕೂಡಲೇ ಬ್ರಿಟಿಷರೊಡನೆ ಎಲ್ಲಾ ವಾಣಿಜ್ಯ ವಹಿವಾಟನ್ನು ಟಿಪ್ಪು ನಿಷೇಧಿಸಿದ. ಹಾಗೆ ನೋಡಿದರೆ ಬ್ರಿಟಿಷ್ ಸರಕುಗಳನ್ನು ಬಹಿಷ್ಕರಿಸಿ ಸ್ವದೇಶಿ ಆಂದೋಲನ ಪ್ರಾರಂಭಿಸಿದ ಮೊಟ್ಟ ಮೊದಲ ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್. ವಸಾಹತುಶಾಹಿ ಸರಕುಗಳ ಪ್ರವೇಶದಿಂದ ನಾಡಿನ ಆರ್ಥಿಕತೆ ವಸಾಹತುಶಾಹಿಯ ಮೇಲೆ ಅವಲಂಬನೆಗೊಳ್ಳುವುದನ್ನು ಟಿಪ್ಪು ಖಡಾಖಂಡಿತವಾಗಿ ವಿರೋಧಿಸಿದ. ಬ್ರಿಟಿಷ್ ವಸಾಹತುಶಾಹಿ ವ್ಯಾಪಾರವು ನಾಡಿನೊಳಗೆ ವಸಾಹತುಶಾಹಿ ಪರ ದಲ್ಲಾಳಿ ವ್ಯಾಪಾರಿ ವರ್ಗವೊಂದನ್ನು ಸೃಷ್ಟಿ ಮಾಡುದನ್ನು ಅರಿತು ಅಂತಹ ದಲ್ಲಾಳಿ ವ್ಯಾಪಾರಿ ವರ್ಗದ ಮೇಲೂ ಟಿಪ್ಪು ತೀವ್ರ ಸಮರ ಸಾರಿದ.
ಟಿಪ್ಪುವಿನ ಭೂ-ಕಂದಾಯ ಕಾಯ್ದೆಯ ೯೯ ನೇ ಕಲಮು ಬ್ರಿಟಿಷ್ ವ್ಯಾಪಾರ ಬಹಿಷ್ಕಾರಕ್ಕೆ ತ್ವರಿತಗತಿ ಒದಗಿಸಿತು. ಅದರ ಪ್ರಕಾರ "ಇನ್ನು ಮುಂದೆ ಮದ್ರಾಸ್ ಪ್ರಾಂತ್ಯದೊಡನೆ ಉಪ್ಪು ವ್ಯಾಪಾರ ಹಾಗೂ ಇತರ ಎಲ್ಲಾ ವಾಣಿಜ್ಯ ವಹಿವಾಟುಗಳನ್ನು ನಮ್ಮ ಸಂಸ್ಥಾನದಲ್ಲಿ ನಿಷೇದಿಸಲಾಗಿದೆ.ಎಲ್ಲಾ  ವ್ಯಾಪಾರಿಗಳು ಇನ್ನು ಮುಂದೆ ಉಪ್ಪು ವ್ಯಾಪಾರಕ್ಕೆ ಕುಶಾಲಪುರ, ಕೂರಿಯಾಲ, ಹೊನ್ನಾವರ, ಮಿರ್ಜಾನ, ಅಂಕೋಲದ ಘಟ್ಟದ ಕೆಳಗಿನ ಪ್ರದೇಶಗಳಿಗೆ ಹೋಗಬೇಕೇ ವಿನಹ ಮದ್ರಾಸಿನೊಡನೆವ್ಯವಹಾರನಡೆಸ ಬಾರದೆಂದುನಿರ್ದೇಶಿಸಬೇಕು.ಯಾವ ವ್ಯಾಪಾರಿಯಾದರೂ ಇದನ್ನು ಉಲ್ಲಂಘಿಸಿ ಮದ್ರಾಸಿನೊಡನೆ ರಹಸ್ಯ ವ್ಯವಹಾರವಿಟ್ಟುಕೊಂಡರೆ ಸರ್ಕಾರ ಕೂಡಲೇ ಆತನ ಎಲ್ಲ ಸರಕು-ಸರಂಜಾಮುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅಷ್ಟು ಮಾತ್ರವಲ್ಲ ಮತ್ತೊಮ್ಮೆ ಅಂತಹ ಕ್ರಮ ಕೈಗೊಳ್ಳದಷ್ಟು ಬೆದರಿಕೆ ಉಂಟುಮಾಡಬೇಕು. ಒಂದು ವೇಳೆ ಮದ್ರಾಸ್ ಪ್ರಾಂತ್ಯದಿಂದ ಈ ಸಂಸ್ಥಾನದೊಳಗೆ ವ್ಯಾಪಾರಿಗಳು ಪ್ರವೇಶಿಸಿ ವಹಿವಾಟು ನಡೆಸಲು ಪ್ರಯತ್ನಿಸಿದರೂ ಅವರನ್ನು ಕೂಡಲೇ ಸೆರೆ ಹಿಡಿದು ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು."

ಈ ನೀತಿಗಳು ಎಷ್ಟು ಕಟ್ಟುನಿಟ್ಟಾಗಿ ಜಾರಿಗೆ ಬಂದವೆಂದರೆ ಬ್ರಿಟಿಷ್ ವ್ಯಾಪಾರಿಗಳು ನಷ್ಟವನ್ನು ಅನುಭವಿಸುತ್ತ ಟಿಪ್ಪುವನ್ನು ನಿರ್ಮೂಲನೆ ಮಾಡಲು ಈಸ್ಟ್ ಇಂಡಿಯಾ ಕಂಪನಿಯ ಮೇಲೆ ಒತ್ತಡ ಹೇರಲಾರಂಭಿಸಿದರು. ಆದರೆ ಅದೇ ವೇಳೆಯಲ್ಲಿ ಹೊರಗಿನ ಸ್ಪರ್ಧೆಂದ ಸ್ಥಳೀಯ ಉದ್ಯಮಿಗಳನ್ನು ರಕ್ಷಿಸಿದ್ದರಿಂದ ಮೈಸೂರು ಪ್ರಾಂತ್ಯದಲ್ಲಿ ಉಪ್ಪು, ಜವಳಿ ಇತರ ಉದ್ಯಮಗಳು ವಿಕಸನಗೊಂಡವು.
ಬ್ರಿಟಿಷ್ ವಸಾಹತುಶಾಹಿಗಳ ವಿರುದ್ದ ಟಿಪ್ಪು ನಡೆಸಿದ ಈ ಆರ್ಥಿಕ ಯುದ್ಧ ಎಷ್ಟು ರಾಜಿರಹಿತವಾಗಿತ್ತೆಂದರೆ ಮೂರನೇ ಮೈಸೂರು ಯುದ್ದದಲ್ಲಿ ಟಿಪ್ಪು ಸೋತು ತನ್ನ ಮಕ್ಕಳನ್ನೇ ಬ್ರಿಟಿಷರಿಗೆ ಒತ್ತೆಯಾಗಿಟ್ಟರೂ, ಮೈಸೂರು ಪ್ರಾಂತ್ಯದಲ್ಲಿ ಬ್ರಿಟಿಷ್ ವಾಣಿಜ್ಯ ವಹಿವಾಟಿಗೆ ಮಾತ್ರ ಅವಕಾಶ ಮಾಡಿಕೊಡಲಿಲ್ಲ.ಅಷ್ಟು ಮಾತ್ರವಲ್ಲ, ಬ್ರಿಟಿಷ್ ವ್ಯಪಾರಿಗಳು ಎಷ್ಟೇ ಪ್ರಯತ್ನಿಸಿದರು ಟಿಪ್ಪುವಿನೊಡನೆ ಮಾಡಿಕೊಂಡ ಯಾವ ಒಪ್ಪಂದದಲ್ಲೂ ವ್ಯಾಪಾರ ಏಕಸ್ವಾಮ್ಯ ಪಡೆಯುವ ಕಲಮುಗಳನ್ನು ಸೇರಿಸುವಲ್ಲಿ ಸಫಲರಾಗಲಿಲ್ಲ. ಟಿಪ್ಪು ಯುದ್ದ ಪರಿಹಾರವಾಗಿ ಹಣಕೊಡಲು ಅಥವಾ ಭೂಭಾಗ ಬಿಟ್ಟುಕೊಡಲು ಸಿದ್ಧನಿದ್ದನೇ ಹೊರತು ಮಾರುಕಟ್ಟೆಯನ್ನಲ್ಲ.

ಹೀಗೆ ಟಿಪ್ಪು ಪ್ರಭುತ್ವ ನೀಡಿದ ಉತ್ತೇಜನ ಹಾಗೂ ವಸಾಹತುಶಾಹಿ ವಿರೋಧಿ ರಕ್ಷಣೆಂದ ಸ್ಥಳೀಯ ವ್ಯಾಪಾರಿ ವರ್ಗ ಬ್ರಿಟಿಷರಿಗೆ ಸರಿಸಾಟಿಯಾಗಿ ಪೈಪೋಟಿ ನೀಡುತ್ತ ಒಂದು ಸ್ವತಂತ್ರ ಆರ್ಥಿಕತೆ ಹಾಗೂ ನಾಡನ್ನು ಕಟ್ಟುತ್ತಿತ್ತು. ಆದರೆ ಬ್ರಿಟಿಷರು ಟಿಪ್ಪುವಿನ ಪತನದ ನಂತರ ತಮಗೆ ಪೈಪೋಟಿ ನೀಡುತ್ತಿದ್ದ ಈ ವರ್ಗವನ್ನು, ವ್ಯಾಪಾರ ಮಾರ್ಗಗಳನ್ನೂ ನಾಶಗೊಳಿಸಿದರು. ಸಾಕಿಯವರು ವಿವರಿಸುವಂತೆ ಟಿಪ್ಪುವಿನ ಸೋಲಿನೊಂದಿಗೆ ಕರ್ನಾಟಕದ ಈ ಪ್ರಥಮ ರಾಷ್ಟ್ರೀಯ ವ್ಯಾಪಾರಿ ವರ್ಗವು ಸಾವನ್ನಪ್ಪಿತು. ಅದರ ಸ್ಥಾನವನ್ನು ಬ್ರಿಟಿಷ್ ವಸಾಹತುಶಾಹಿಗಳು ಆಕ್ರಮಿಸಿಕೊಂಡರು. ತಮಗೆ ಅಧೀನವಾಗಿದ್ದ ದಲ್ಲಾಳಿ ವ್ಯಾಪಾರಿ ವರ್ಗವನ್ನೂ, ತಮ್ಮ ಅವಲಂಬನೆಯನ್ನು ಸದಾ ಕೋರುವ ಪರಾವಲಂಬಿ ರಾಜಕೀಯ ವರ್ಗವನ್ನೂ ಸೃಷ್ಟಿಸಿದರು. ಇಂದಿಗೂ ಅದೇ ದಲ್ಲಾಳಿ ವರ್ಗಗಳೇ ನಮ್ಮನ್ನು ಆಳುತ್ತಿವೆ.ಇದುವರೆಗೂ ಈ ನಾಡಿನಲ್ಲಿ ಸ್ವತಂತ್ರ,ಸ್ವಾವಲಂಬಿ, ದೇಶಪ್ರೇಮಿ, ಉದ್ಯಮಿ ವರ್ಗ ತೀರ ದುರ್ಬಲವಾಗಿದೆ, ಇಲ್ಲವೇ ಇನ್ನೂ ಹುಟ್ಟಬೇಕಾಗಿದೆ.!

ಸ್ವತಂತ್ರ ಕರ್ನಾಟಕದ ಹರಿಕಾರ, ಹುತಾತ್ಮ ಟಿಪ್ಪು ಸುಲ್ತಾನ್ : 3


October 26, 2016
ಪರ ವಿರೋಧಗಳಿಂದ ಹೊರತಾದ  ಟಿಪ್ಪು ಸುಲ್ತಾನ್ ಕುರಿತ  ವಾಸ್ತವ ಸಂಗತಿಗಳನ್ನು ತಿಳಿಸುವ ಬರೆಹ ಇದಾಗಿದೆ. ಟಿಪ್ಪುಸುಲ್ತಾನ್ ಜಯಂತಿಯನ್ನು  ಮತೀಯ ನೆಲೆಯಲ್ಲಿ ವಿರೋಧಿಸಲಾಗುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಮುನ್ನೆಲೆಗೆ ತರಲು ಬಯಸುವ  ಚರ್ಚೆಯಲ್ಲಿ ನೆರವಾಗುವ ಉದ್ದೇಶ ಈ ಬರಹದ ಹಿಂದಿದೆ. ಈ ಅಂಶಗಳನ್ನು ನಿಮ್ಮ ಚರ್ಚೆಯಲ್ಲಿ ಉಲ್ಲೇಖಿಸುವ, ಬರೆಹಗಳಲ್ಲಿ ತರುವ ಪ್ರಯತ್ನಗಳಾಗುವುದು ಈ ಹೊತ್ತಿನ ಅಗತ್ಯ ಎಂಬ ಅಭಿಪ್ರಾಯ ನಮ್ಮದು. ನಾವು ಈ ಕುರಿತು ಮಾತಾಡೋಣ, ಬರೆಯೋಣ. ಚರಿತ್ರೆಯನ್ನು ತಿರುಚುವ, ಆ ಮೂಲಕ ದ್ವೇಷ ಹರಡುವ ಕೋಮುವಾದಿ ಹುನ್ನಾರವನ್ನು ವಿಫಲಗೊಳಿಸೋಣ.
~ ಬಿ.ಪೀರ್‌ಬಾಷ

ಅಧ್ಯಾಯ ~ 2 : ಹೊಸ ಯುಗದ ಹರಿಕಾರ
೧೭೯೨ರಲ್ಲಿ ಬ್ರಿಟಿಷರ ವಿರುದ್ಧ ಮೂರನೇ ಯುದ್ಧದಲ್ಲಿ ಸೋತು ಮಕ್ಕಳನ್ನು ಅಡವಿಟ್ಟರೂ ಎದೆಗುಂದದ ಟಿಪ್ಪು ಅದೇ ವರ್ಷ ‘ಭೂ ಕಂದಾಯ ಕಾಯ್ದೆ’ಯನ್ನು ಜಾರಿಗೆ ತಂದ. ಎಂತಹ ಅಡೆತಡೆಗಳೂ ಟಿಪ್ಪುವಿನ ಐತಿಹಾಸಿಕ ಊಳಿಗಮಾನ್ಯ ವಿರೋಧಿ ಉಪಕ್ರಮಗಳನ್ನು ನಿಲ್ಲಿಸುವಂತಿರಲಿಲ್ಲ. ಕಬೀರ್ ಕೌಸರ್ ಎಂಬುವರು ಗುರುತಿಸಿರುವಂತೆ "ರೈತನ ಜಾತಿ, ಧರ್ಮ, ಪಂಥವೇನೆ ಇದ್ದರೂ ಉಳುವವನಿಗೇ ಭೂಮಿ ಸಿಗಬೇಕು" ಎನ್ನುವುದು ಟಿಪ್ಪುವಿನ ಕೃ ನೀತಿಯಾಗಿತ್ತು. ಇದರೊಡನೆ, ಹಿಂದಿನ ಪ್ರಭುತ್ವಗಳು ಜಹಗೀರುಗಳನ್ನು ನೀಡುವಮೂಲಕ ಪರಾವಲಂಬಿ ವರ್ಗವನ್ನು ಸೃಷ್ಟಿ ಮಾಡುತ್ತಿದ್ದುದನ್ನು ಹೈದರನು ಕಡಿತಗೊಳಿಸಿದರೆ ಟಿಪ್ಪು ಸಂಪೂರ್ಣವಾಗಿ ನಿಲ್ಲಿಸಿಯೇ ಬಿಟ್ಟ.

ಹೈದರ್ - ಟಿಪ್ಪು ಆಳ್ವಿಕೆಗೆ ಮುನ್ನ ಮೈಸೂರು ಸಂಸ್ಥಾನದಲ್ಲಿನ ಜೀವಿತವೂ ಇತರೆಡೆಗಳಿಗಿಂತ ಅಷ್ಟೇನೂ ಭಿನ್ನವಾಗಿರಲಿಲ್ಲ. ವಿಜಯನಗರದ ಪತನಾನನಂತರ ಅದರಡಿ ಇದ್ದ ನಾಯಕರುಗಳು ಸ್ವಾತಂತ್ರ್ಯ ಘೋಸಿಕೊಂಡರು. ನಂತರದ ದಿನಗಳಲ್ಲಿ ಈ ಹಲವಾರು ಸಣ್ಣ-ಪುಟ್ಟ ನಾಯಕರುಗಳಿಗೂ ಹಳ್ಳಿಯ ಗೌಡರುಗಳಿಗೂ ನಡುವೆ ರೈತರನ್ನು ಸುಲಿಯುವ 'ಪಾಳೆಗಾರ'ರೆಂಬ ಮತ್ತೊಂದು ಪದರ ಹುಟ್ಟಿಕೊಂಡಿತು. ಸಾಧಾರಣವಾಗಿ ದಕ್ಷಿಣ ಕರ್ನಾಟಕದ ಈ ಪಾಳೆಗಾರರು ೧೦ರಿಂದ ೫೦ಹಳ್ಳಿಗಳನ್ನು ನಿಯಂತ್ರಣ ದಲ್ಲಿಟ್ಟುಕೊಂಡಿರುತ್ತಿದ್ದರು. ರೈತರ ಸುಲಿಗೆಯನ್ನು ಸಲೀಸಾಗಿ ನಡೆಸಲು ಅವರು ಅಶ್ವದಳಗಳನ್ನು, ಕಾಲಾಳುಗಳನ್ನು ತಮ್ಮೊಡನೆ ಇಟ್ಟುಕೊಂಡಿರುತ್ತಿದ್ದರು. ಇತರ ಪಾಳೆಗಾರರಿಂದ ಹಾಗೂ ಕೆಲವೊಮ್ಮೆ ತಮ್ಮ ಜನರಿಂದಲೇ ತಮ್ಮನ್ನು ರಕ್ಷಿಸಿಕೊಳ್ಳಲು ಬೆಟ್ಟದ ಮೇಲೆ ದುರ್ಗಗಳನ್ನು ಕಟ್ಟಿಕೊಂಡಿರುತ್ತಿದ್ದರು. ತಮ್ಮ ಈ ಸೇನಾ ಬಲದಿಂದ ಈ ಜನಕಂಟಕ ಪಾಳೆಗಾರರು ರೈತರ ಮೇಲೆ, ಕುಶಲಕರ್ಮಿಗಳ ಮೇಲೆ, ವ್ಯಾಪಾರಿಗಳ ಮೇಲೆ ಅಪಾರ ತೆರಿಗೆ ವಿಧಿಸಿ ಅವರ ರಕ್ತ ಹೀರುತ್ತಿದ್ದರು. ಈ ಶೋಷಕ ಪಾಳೆಗಾರರ ಕೋಟೆಗಳು ನಾಡಿನಾದ್ಯಂತ ಎಷ್ಟೊಂದು ವಿಸ್ತೃತವಾಗಿ ಹರಡಿ ಹೋಗಿದ್ದವೆಂದರೆ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಅಂಥ ೧೨೦ಕೋಟೆಗಳು ಇದ್ದುದನ್ನು ದಾಖಲಿಸಲಾಗಿದೆ.
ಸಕಲ ಸರ್ವಾಧಿಕಾರವನ್ನು ಪಡೆದುಕೊಂಡಿದ್ದ ಈ ಪಾಳೆಗಾರರು ಸುಲಿಗೆ, ಯುದ್ದಗಳಿಂದ ಅರಾಜಕತೆಯನ್ನುಂಟುಮಾಡಿ ಒಟ್ಟಾರೆ ಕರ್ನಾಟಕದ ವಿಕಾಸದ ಗತಿಗೂ ಪೆಟ್ಟು ಕೊಟ್ಟು ದೊಡ್ಡ ಬಿಕ್ಕಟ್ಟನ್ನೇ ಉಂಟು ಮಾಡಿದ್ದರು. ವ್ಯಾಪಾರಿಗಳು, ಕುಶಲಕರ್ಮಿಗಳು ಸ್ವತಂತ್ರ ಉತ್ಪಾದನೆಂದ ವಿಕಸನಗೊಂಡು ಆರ್ಥಿಕತೆಯನ್ನು ಬೆಳೆಸಲಾಗದೇ ಊಳಿಗಮಾನ್ಯ ವ್ಯವಸ್ಥೆ ಒಳಗೊಳಗೆ ಉಸಿರುಗಟ್ಟಿತು. ಉದಾಹರಣೆಗೆ ಇಡೀ ನಾಡಿನಾದ್ಯಂತ ಬಲವಾದ ವಾಣಿಜ್ಯ ಸಂಬಂಧಗಳನ್ನು ಅಭಿವೃದ್ದಿಪಡಿಸಿದ್ದ ಸಾಲುಮೂಲೆ ಬಣಜಿಗರು ಹತ್ತಿಪ್ಪತ್ತು ಮೈಲಿಗೊಬ್ಬ ಪಾಳೆಗಾರ ತಲೆಎತ್ತಿಕೊಂಡಿದ್ದರಿಂದ ದೂರದೂರಕ್ಕೆ ವಾಣಿಜ್ಯ-ವಹಿವಾಟು ನಡೆಸಲಾರದೆ ಹೋದರು. ಇದರಿಂದ, ನಿಧಾನವಾಗಿ ಒಂದುಗೂಡುತ್ತಿದ್ದ ಕರ್ನಾಟಕ ಮತ್ತೆ ತುಂಡು ತುಂಡಾಗಿದ್ದಲ್ಲದೇ ನಿಧಾನವಾಗಿ ವಿಕಸಿಸುತ್ತಿದ್ದ ವ್ಯಾಪಾರಿ ವರ್ಗ ಮತ್ತೆ ಊಳಿಗಮಾನ್ಯತೆಯ ತೆಕ್ಕೆಯಲ್ಲಿ ಸಿಲುಕುವಂತಾತು.
ಇದರ ವಿರುದ್ದ ಕ್ರಮೇಣ ಬಲಿಷ್ಠ ಕೇಂದ್ರವಾಗಿ ಪ್ರಭಲಗೊಂಡ ಮೈಸೂರಿನ ಒಡೆಯರ ಮನೆತನದ ಚಿಕ್ಕ ದೇವರಾಜ ಒಡೆಯರ (ಕ್ರಿ.ಶ.೧೬೪೫-೧೭೦೪) ಮೊದಲ ಬಾರಿಗೆ ನಿರ್ಣಾಯಕ ಯುದ್ದ ಸಾರಿ ಪಾಳೆಗಾರರನ್ನು ಮಣಿಸಿ ಕೇಂದ್ರ ಪ್ರಭುತ್ವವನ್ನು ಸ್ಥಾಪಿಸಿದರೂ, ರೈತರ ಸುಲಿಗೆಯನ್ನು ನಿಲ್ಲಿಸಲಿಲ್ಲ. ಇದು ರೈತರಿಗೆ ಪಾಳೆಗಾರರ ಕ್ರೌರ್ಯವನ್ನೇ ನೆನಪಿಗೆ ತರಿಸುತ್ತಿತ್ತು. ಉದಾಹರಣೆಗೆ ಈ ಶೋಷಣೆಯನ್ನು ತಡೆಯಲಾರದೇ ನಂಜನಗೂಡಿನ ರೈತರು ಚಿಕ್ಕ ದೇವರಾಜನ ವಿರುದ್ದ ದಂಗೆಯದ್ದರು. ಆದರೂ ಚಿಕ್ಕ ದೇವರಾಜ ಕ್ರೂರ ದಬ್ಬಾಳಿಕೆಂದ ದಂಗೆಯನ್ನು ಹತ್ತಿಕ್ಕಿ ಸಾವಿರಕ್ಕೂ ಹೆಚ್ಚು ಜನರನ್ನು ನೇಣಿಗೆ ಹಾಕಿದ. ಹೀಗಿದ್ದರೂ, ಚಿಕ್ಕ ದೇವರಾಜ ಒಡೆಯರ ತಂದ ಬದಲಾವಣೆಂದ ವ್ಯಾಪಾರಿ ವರ್ಗ ಊರ್ಜಿತವಾಗಿ ತಮ್ಮ ಐತಿಹಾಸಿಕ ಊಳಿಗಮಾನ್ಯ ವಿರೋಧಿ ಪಾತ್ರವನ್ನು ನಿರ್ವಹಿಸಲು ಪ್ರಾರಂಭಿಸಿದ್ದರು. ಚಿಕ್ಕ ದೇವರಾಜ ಒಡೆಯರ್‌ನ ಪ್ರಭುತ್ವ ಅದಕ್ಕೆ ಸಹಕಾರ ನೀಡಿದರೂ ರೈತರಮೇಲೆ ಆತನಡೆಸಿದ ಸುಲಿಗೆಯಿಂದ ಊಳಿಗ ಮಾನ್ಯತೆ  ಮುರಿಯಲು ಸಹಕಾರಿಯಾಗದೆ ರೈತರು ದಮನಕ್ಕೀಡಾಗಿದ್ದರು. ಮತ್ತೊಂದೆಡೆ ಕಡಲ ಕಿನಾರೆಯಿಂದ ಕರ್ನಾಟಕದೊಳಗೆ ಕಾಲಿಟ್ಟ ವಸಾಹತುಶಾಹಿಗಳು ಊಳಿಗಮಾನ್ಯ ಶಕ್ತಿಗಳೊಡನೆ  ರಾಜಿಮಾಡಿಕೊಂಡು ದೇಶಪ್ರೇಮ ಹಾಗೂ ರಾಷ್ಟ್ರೀಯತೆಯ ಸೊಂಕಿಲ್ಲದ ದಲ್ಲಾಳಿ ವ್ಯಾಪಾರಿ ವರ್ಗದ ಸೃಷ್ಟಿಗೆ ಕಾರಣರಾದರು.
ಕರ್ನಾಟಕದ ಈ ಐತಿಹಾಸಿಕ ಘಟ್ಟದಲ್ಲಿ ಕರ್ನಾಟಕವನ್ನು ಆಳಿದ ಹೈದರ್ ಹಾಗೂ ಟಿಪ್ಪು ಸೃಷ್ಟಿಸಿದ ಕೇಂದ್ರೀಯ ಪ್ರಭುತ್ವ ಹಾಗೂ ಆರ್ಥಿಕ-ರಾಜಕೀಯ-ಸಾಮಾಜಿಕ ನೀತಿಗಳು ಕರ್ನಾಟಕದಲ್ಲಿ ಕುಡಿಯೊಡೆಯುತ್ತಿದ್ದ ಎಲ್ಲಾ ಅಧುನಿಕ ಪ್ರಗತಿಶೀಲ ಧೋರಣೆಗಳಿಗೂ ಇಂಬುಕೊಟ್ಟು ಕರ್ನಾಟಕವನ್ನು ಊಳಿಗಮಾನ್ಯ ವಿರೋಧಿ ಕ್ರಾಂತಿಯ ಹೊಸ್ತಿಲಲ್ಲಿ ತಂದು ನಿಲ್ಲಿಸಿತು. ಹೈದರ್ ಹಾಗೂ ಟಿಪ್ಪೂ ಇವರುಗಳ ನೀತಿಯೂ ಊಳಿಗಮಾನ್ಯತೆಯನ್ನು ವಿರೋಧಿಸುವ, ವಸಾಹತುಶಾಹಿ ವಿರೋಧಿ ರಾಷ್ಟ್ರೀಯ ವ್ಯಾಪಾರಿ-ಉದ್ಯಮಿ ವರ್ಗದ ಸೃಷ್ಟಿಗೆ ಕಾರಣವಾಯಿತು. ಜನತೆಯಲ್ಲಿ ಪ್ರಬಲ ಊಳಿಗಮಾನ್ಯ ವಿರೋಧಿ ಪ್ರಜ್ಞೆಯನ್ನೂ, ಹೋರಾಟದ ಬಗ್ಗೆ, ಸ್ವಾವಲಂಬಿ ಭ"ಷ್ಯದ ಬಗ್ಗೆ ಭರವಸೆಯನ್ನೂ ತಂದುಕೊಟ್ಟಿತು.

ಪಾಳೆಗಾರಿ ವರ್ಗದ ನಿರ್ಮೂಲನ
ತಾವು ರಾಜ್ಯಾಧಿಕಾರ ಪಡೆದುಕೊಂಡ ನಂತರ ಹೈದರ್-ಟಿಪ್ಪು ಮಾಡಿದ ಮೊದಲ ಕೆಲಸವೆಂದರೆ ರೈತರ ರಕ್ತ ಹೀರುತ್ತಿದ್ದ ಪರಾವಲಂಬಿ ಪಾಳೆಗಾರ ವರ್ಗವನ್ನು ನಾಮಾವಶೇಷಗೊಳಿಸಿದ್ದು. ಹೈದರಾಲಿ ಹಾಗೂ ಟಿಪ್ಪು ಸುಲ್ತಾನರು ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಧಾರವಾಡ, ತುಮಕೂರು ಹಾಗೂ ಕೊಲಾರಗಳಲ್ಲಿ ಇಂತಹ ಸುಮಾರು ೨೦೦ಪಾಳೆಗಾರರನ್ನು ಸೆದೆಬಡಿದರು ಇಲ್ಲವೇ ನಾಮಾವಶೇಷ ಗೊಳಿಸಿದರು. ಕೇರಳದ ಉತ್ತರ ಮಲಬಾರಿನಲ್ಲಿ ಸುಲಿಗೆ ಮಾಡುತ್ತಿದ್ದ ಎಲ್ಲಾ ೪೨ಪಾಳೆಗಾರರನ್ನು ಹೈದರಾಲಿ ನಾಶಮಾಡಿದ. ಹೀಗಾಗಿ ೧೭೯೯ರ ಟಿಪ್ಪುವಿನ ಪತನದ ನಂತರ ಮೈಸೂರು ಪ್ರಾಂತ್ಯದ ಸಂಪೂರ್ಣ ಅಧ್ಯಯನ ಮಾಡಿದ ಬ್ರಿಟಿಷ್ ತಜ್ಞ ಫ್ರಾನ್ಸಿಸ್ ಬುಕಾನನ್ ಗುರುತಿಸಿದಂತೆ "ಮೈಸೂರು ಅರಸರಾದ ಹೈದರ್-ಟಿಪ್ಪು ಅವರ ಪಾಳೆಗಾರ-ವಿರೋಧಿ ಸೈನಿಕ ಕಾರ್ಯಚರಣೆಗಳಿಂದಾಗಿ ಮೈಸೂರು ಪ್ರಾಂತ್ಯದಲ್ಲಿ ಊಳಿಗಮಾನ್ಯ ವ್ಯವಸ್ಥೆ ಕುಸಿದು ಬಿದ್ದಿತು."
ಹೈದರಾಲಿಯೂ ಕೆಲವು ಶರಣಾದ ಪಾಳೆಗಾರರಿಂದ ಮೈಸೂರಿಗೆ ನಿಷ್ಠೆ ಉಳಿಸಿಕೊಳ್ಳುವ ಹಾಗೂ ಕಪ್ಪಕಟ್ಟ್ಟುವ ಪ್ರಮಾಣ ಪಡೆದು ಉಳಿಯಗೊಡುತ್ತಿದ್ದರೆ, ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಪಾಳೆಗಾರರ ವರ್ಗದ ದಮನ ಮತ್ತೊಂದು ಹೆಜ್ಜೆ ಮುಂದೆ ಹೋಯಿತು. ಪಾಳೆಗಾರರ ಹಿಡಿತವನ್ನು ಸಂಪೂರ್ಣವಾಗಿ ಮುರಿಯಲಾತಲ್ಲದೆ, ಆ ಭೂಮಿಯನ್ನು ರೈತಾಪಿಗೆ ಹಂಚಲಾಗುತ್ತಿತ್ತು ಅಥವಾ ರಾಜಪ್ರಭುತ್ವವೇ ನೇರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿತ್ತು. ಈ ಹೊಸ ಪದ್ದತಿಯಲ್ಲಿ ಪ್ರಭುತ್ವಕ್ಕೂ-ರೈತಾಪಿಗೂ ನಡುವೆ ಇದ್ದ ಪರಾವಲಂಬಿ ವರ್ಗವು ಸಂಪೂರ್ಣವಾಗಿ ಕಣ್ಮರೆಯಾಗಿ ಮೊಟ್ಟಮೊದಲ ಬಾರಿಗೆ ಪ್ರಭುತ್ವವೇ ನೇರವಾಗಿ ತನ್ನ ರೈತಾಪಿಯೊಡನೆ ಸಂಬಂಧವಿರಿಸಿಕೊಂಡಿತು. ಇದರಿಂದ ಪಾಳೆಗಾರರ ಪ್ರಭಾವ ಹಾಗೂ ಹಿಡಿತದಿಂದ ರೈತಾಪಿ ಸಂಪೂರ್ಣವಾಗಿ ಮುಕ್ತವಾತು.
ಈ ಹಿಂದಿನ ಊಳಿಗಮಾನ್ಯ ರಾಜಪ್ರಭುತ್ವಗಳ ಆಕ್ರಮಣ, ಗೆಲುವು-ಸೋಲುಗಳ ರೈತಾಪಿಯ ಬದುಕಿನಲ್ಲಿ, ಸಾಮಾಜಿಕ ಸಂಬಂಧಗಳಲ್ಲಿ ಯಾವುದೇ ಬದಲಾವಣೆ ತಂದಿರಲಿಲ್ಲ. ಆದರೆ, ಹೈದರಾಲಿ ಹಾಗೂ ಟಿಪ್ಪುಇವರುಗಳು ನಡೆಸಿದ ಸಾಮ್ರಾಜ್ಯದ ವಿಸ್ತರಣೆಯಲ್ಲಿ, ಅವರ ಆಳ್ವಿಕೆಯಡಿ ಬಂದ ಜನತೆಯ ಬದುಕಿನಲ್ಲಿ ಪ್ರಗತಿಪರ ಬದಲಾವಣೆಯೇ ಬಂದುಬಿಟ್ಟಿತು. ಏಕೆಂದರೆ ಅವರ ಪ್ರಭುತ್ವ ಯಾವಾಗಲೂ ಪರಾವಲಂಬಿ ಪಾಳೆಗಾರಿ ವರ್ಗವನ್ನು ನಾಶಗೊಳಿಸಿ ರೈತಾಪಿ, ಕುಶಲಕರ್ಮಿ ಹಾಗೂ ವ್ಯಾಪಾರಿ ವರ್ಗಗಳ ಮೇಲಿನ ಭಾರವನ್ನು ಹಗುರಗೊಳಿಸುತ್ತಿತ್ತು. ಈ ಪಾಳೆಗಾರರು ಎಷ್ಟು ಜನಕಂಟಕರಾಗಿದ್ದರೆಂದರೆ ಹಲವಾರು ಕಡೆ ಸೆರೆಯಾಳುಗಳು ಹಾಗೂ ಗ್ರಾಮದ ಜನತೆಯೇ ಅತ್ಯಂತ ಉತ್ಸಾಹದಿಂದ ಮೈಸೂರಿನ ಸೈನ್ಯವನ್ನು ಸ್ವಾಗತಿಸುತ್ತಿದ್ದರು.

ಭೂ ಸುಧಾರಣೆ
೧೭೯೨ರಲ್ಲಿ ಬ್ರಿಟಿಷರ ವಿರುದ್ಧ ಮೂರನೇ ಯುದ್ಧದಲ್ಲಿ ಸೋತು ಮಕ್ಕಳನ್ನು ಅಡವಿಟ್ಟರೂ ಎದೆಗುಂದದ ಟಿಪ್ಪು ಅದೇ ವರ್ಷ ‘ಭೂ ಕಂದಾಯ ಕಾಯ್ದೆ’ಯನ್ನು ಜಾರಿಗೆ ತಂದ. ಎಂತಹ ಅಡೆತಡೆಗಳೂ ಟಿಪ್ಪುವಿನ ಐತಿಹಾಸಿಕ ಊಳಿಗಮಾನ್ಯ ವಿರೋಧಿ ಉಪಕ್ರಮಗಳನ್ನು ನಿಲ್ಲಿಸುವಂತಿರಲಿಲ್ಲ. ಕಬೀರ್ ಕೌಸರ್ ಎಂಬುವರು ಗುರುತಿಸಿರುವಂತೆ "ರೈತನ ಜಾತಿ, ಧರ್ಮ, ಪಂಥವೇನೆ ಇದ್ದರೂ ಉಳುವವನಿಗೇ ಭೂಮಿ ಸಿಗಬೇಕು" ಎನ್ನುವುದು ಟಿಪ್ಪುವಿನ ಕೃ ನೀತಿಯಾಗಿತ್ತು. ಇದರೊಡನೆ, ಹಿಂದಿನ ಪ್ರಭುತ್ವಗಳು ಜಹಗೀರುಗಳನ್ನು ನೀಡುವಮೂಲಕ ಪರಾವಲಂಬಿ ವರ್ಗವನ್ನು ಸೃಷ್ಟಿ ಮಾಡುತ್ತಿದ್ದುದನ್ನು ಹೈದರನು ಕಡಿತಗೊಳಿಸಿದರೆ ಟಿಪ್ಪು ಸಂಪೂರ್ಣವಾಗಿ ನಿಲ್ಲಿಸಿಯೇ ಬಿಟ್ಟ. ತನ್ನ ಇಡೀ ಜೀವಿತಾವಧಿಯಲ್ಲಿ ಟಿಪ್ಪು ಕೇವಲ ಎರಡು ಹಳ್ಳಿಗಳನ್ನು ಮಾತ್ರ ಜಹಗೀರಾಗಿ ನೀಡಿದ್ದ. ಪ್ರಾಕ್ಸಿ ಫರ್ನಾಂಡೀಸ್ ಎಂಬುವವರು ಬರೆಯುವಂತೆ "ದಕ್ಷಿಣ ಮರಾಠ ಪ್ರಾಂತ್ಯದ ಧಾರವಾಡ-ಬಿಜಾಪುರಗಳಲ್ಲಿ ದೇಶಮುಖರ ಪರಿಸ್ಥಿತಿ ದಯನೀಯವಾಗಿತ್ತು. ಹಲವಾರು ಕಡೆಗಳಲ್ಲಿ ಟಿಪ್ಪು ಭೂಮಿಯ ಮೇಲಿನ ಅವರ ಎಲ್ಲಾ ಹಕ್ಕುಗಳನ್ನು ಕಿತ್ತುಕೊಂಡು ರೈತರಿಗೆ ಹಂಚಿದ್ದ". ಅದೇ ರೀತಿ ಹೆಚ್.ಜೆ.ಸ್ಟೋಕ್ಸ್ ಎಂಬುವವರು ಬರೆದಂತೆ "ಟಿಪ್ಪುವಿನ ಕಾಲಾವಧಿಯಲ್ಲಿ ದೇಸಾಯರುಗಳಿಗೆ ನೀಡಿದ್ದ ಎಲ್ಲಾ ಜಾಗೀರನ್ನು ಟಿಪ್ಪುವಿನ ಸೇನಾಧಿಕಾರಿ ಜಮಾಲ್ ಖಾನ್ ವಾಪಸ್ ಪಡೆದಿದ್ದಲ್ಲದೇ ಕೇವಲ ಅವರ ಬಾಳ್ವಿಕೆಗೆ ಬೇಕಾದಷ್ಟು ಭೂಮಿಯನ್ನು ಮಾತ್ರ ಬಿಟ್ಟುಕೊಡಲಾಗಿತ್ತು."

ಮಠ-ಮಾನ್ಯಗಳ ರೆಕ್ಕೆಗಳಿಗೆ ಕತ್ತರಿ 
ಕರ್ನಾಟಕದಲ್ಲಿ ಆಗ ಅಸ್ತಿತ್ವದಲ್ಲಿದ್ದ ಊಳಿಗಮಾನ್ಯ ಪದ್ದತಿಯ ಮತ್ತೊಂದು ಮಾದರಿ, ಬ್ರಾಹ್ಮಣ-ಮಠ ಮಾನ್ಯಗಳಿಗೆ ನೀಡುತ್ತಿದ್ದ ದತ್ತಿಗಳು. ವಾಸ್ತವವಾಗಿ ಆಗ ಬ್ರಾಹ್ಮಣ ಮಠಗಳೇ ಅತಿದೊಡ್ಡ ಜಾಗೀರದಾರಿ ಊಳಿಗಮಾನ್ಯ ಶಕ್ತಿಗಳಾಗಿದ್ದವು. ಅತಿದೊಡ್ಡ ಸಂಖ್ಯೆಯ ಶೂದ್ರ ರೈತಾಪಿಯನ್ನು ಈ ಮಠ ಮಾನ್ಯಗಳು ದೈವದ ಹೆಸರಿನಲ್ಲಿ ಶೋಷಿಸುತ್ತಿದ್ದವು. ಟಿಪ್ಪು ಸುಲ್ತಾನನ ರಾಜಖಡ್ಗ ಮಠ ಮಾನ್ಯಗಳ ಈ ಹಕ್ಕನ್ನು ಕತ್ತರಿಸಿತು. ಅಷ್ಟು ಮಾತ್ರವಲ್ಲ, ಹಲವಾರು ಕಡೆ ಟಿಪ್ಪು ದೇವಸ್ಥಾನದ ಭೂಮಿಯನ್ನು ಶೂದ್ರ ರೈತಾಪಿಗೆ ಹಂಚಿ ಕ್ರಾಂತಿಕಾರಿ ಬದಲಾವಣೆಗೆ ಕಾರಣನಾದ. ಉದಾಹರಣೆಗೆ ಬ್ರಿಟೀಷ್ ಇತಿಹಾಸಕಾರ ಬುಕಾನನ್ ದಾಖಲಿಸಿರುವಂತೆ "ನಂಜನಗೂಡಿನಲ್ಲಿ ೫೦೦ಬ್ರಾಹ್ಮಣ ಮನೆಗಳಿದ್ದೂ ರ್ವಾಕ ೧೪,೦೦೦ ಪಗೋಡಾಗಳಷ್ಟು ಆದಾಯ ತರುತ್ತಿದ್ದ ಜಮೀನನ್ನು ಹೊಂದಿದ್ದವು. ಅದೇ ಊರಿನಲ್ಲಿ ೭೦೦ ಶೂದ್ರ ಮನೆಗಳಿದ್ದೂ ಅವರು ಈ ಭೂ"ಯಲ್ಲಿ ಚಾಕರಿ ಮಾಡಿದರೂ ಊರ ಹೊರಗೆ ಬದುಕಬೇಕಾಗಿತ್ತು. ಟಿಪ್ಪು ಬ್ರಾಹ್ಮಣರ ಅಧಿಕಾರವನ್ನು ಮೊಟಕುಗೊಳಿಸಿದ್ದಲ್ಲದೆ ಅವರಿಗೆ ಕೇವಲ ೧೦೦ ಪಗೋಡಾಗಳಷ್ಟು ಮಾಸಿಕ ನಿವೃತ್ತಿ ವೇತನ ನೀಡಿದ".
ಇದನ್ನೇ ದೊಡ್ಡ ಬ್ರಾಹ್ಮಣ ವಿರೋಧಿ ಮತಾಂಧ ಕ್ರಮವೆಂದು ಈಗಿನ ಬ್ರಾಹ್ಮಣ ಶಾಹಿಗಳು ಬಣ್ಣಿಸುತ್ತಿದ್ದಾರೆ. ಆದರೆ ಟಿಪ್ಪು ಬ್ರಾಹ್ಮಣರಲ್ಲೂ ಸಹ ವೈದಿಕ ಹಾಗೂ ಲೌಕಿಕ ಬ್ರಾಹ್ಮಣರೆಂಬ ವಿಧಗಳನ್ನು ಗುರುತಿಸಿದ. ಶ್ರಮದ ಕೊಡುಗೆ ನೀಡಿ ಸಮಾಜದ ಅಭಿವೃದ್ದಿಗೆ ಪೂರಕವಾಗಿದ್ದ ಲೌಕಿಕ ಬ್ರಾಹ್ಮಣರಿಗೆ ಟಿಪ್ಪುವಿನಿಂದ ತೊಂದರೆ ಇರಲಿಲ್ಲ. ಕಿಂಚಿತ್ತೂ ಶ್ರಮವಹಿಸದೇ ರೈತರ ಶೋಷಣೆ ಹಾಗೂ ಶ್ರಮದ ಮೇಲೆ ಬಾಳ್ವೆ ಮಾಡುತ್ತಿದ್ದ ವೈದಿಕ ಬ್ರಾಹ್ಮಣರು ಮಾತ್ರ ಟಿಪ್ಪುವಿನ ಸುಧಾರಣಾ ಕ್ರಮಗಳಿಗೆ ನೇರವಾಗಿ ಗುರಿಯಾದರು. ಅದೆ ರೀತಿ ಮೂಡಬಿದ್ರೆಯಲ್ಲಿ ಜೈನ ಮಠದಡಿ ೩೬೦ ಪಗೋಡಗಳಷ್ಟು ವಾರ್ಷಿಕ ಆದಾಯ ತರುತ್ತಿದ್ದ ಬಸದಿ ಭೂಮಿಯನ್ನು ಟಿಪ್ಪು ಸಂಪೂರ್ಣ ವಶಪಡಿಸಿಕೊಂಡು ಅವರನ್ನು ರ್ವಾಕ ೯೦ಪಗೋಡಗಳ ವೇತನದ ಮೇಲೆ ಜೀವಿಸುವಂತೆ ಮಾಡಿದ.

ಪಟೇಲ ಊರ ಗೌಡನಲ್ಲ,  ಸಾಮಾನ್ಯ ರೈತ!
ಅದೆ ರೀತಿ ಹಳ್ಳಿಗಳಲ್ಲಿ ರಾಜಪ್ರಭುತ್ವದ ಪರವಾಗಿ ರೈತರನ್ನು ಸುಲಿಯುತ್ತಿದ್ದ ಕೊನೆಯ ಕೊಂಡಿ ಊರ ಪಟೇಲನಾಗಿದ್ದ. ಇದೊಂದು ವಂಶಪಾರಂಪರ್ಯ ಸ್ಥಾನವಾಗಿದ್ದು ಈ ಪ್ರಭುತ್ವದ ಪ್ರತಿನಿಧಿಯ ಸ್ಥಾನವು ಉಳ್ಳವರಿಗೆ ಹಾಗೂ ಮೇಲ್ಜಾತಿಗಳಿಗೆ ದೊರೆಯುತ್ತಿತ್ತು. ಆದರೆ ಟಿಪ್ಪು ಇದನ್ನು ಅಮೂಲಾಗ್ರವಾಗಿ ಬುಡಮೇಲು ಮಾಡಿದ. ಟಿಪ್ಪು ಜಾರಿಗೆ ತಂದ "ಭೂ ಕಂದಾಯ ಕಾಯ್ದೆಯ" ೧೧ನೇ ಕಲಮು ಹೀಗೆ ಹೇಳುತ್ತದೆ; 
“ತುಂಬಾ ವರ್ಷಗಳಿಂದ ಪ್ರತಿಯೊಂದು ಹಳ್ಳಿಗೂ ಪಟೇಲನೊಬ್ಬನನ್ನು ನೇಮಿಸಲಾಗುತ್ತಿದೆ. ಇನ್ನು ಮುಂದೆ ಎಲ್ಲೆಲ್ಲಿ ಆ ಸ್ಥಾನಕ್ಕೆ ಈಗಿರುವ ಪಟೇಲರು ಅರ್ಹರಾಗಿಲ್ಲವೋ ಅವರನ್ನು ತೆಗೆದು ಹಾಕಿ ಆ ಸ್ಥಾನಕ್ಕೆ ರೈತನಿಂದಲೇ ಸಮರ್ಥರಾದವರನ್ನು ನೇಮಕ ಮಾಡಬೇಕು ಮತ್ತು ಹಳೆಯ ಪಟೇಲ, ರೈತನ ಸ್ಥಾನಕ್ಕಿಳಿದು ನೇಗಿಲು ಹಿಡಿದು ನೆಲ ಉಳಬೇಕು". ಇದೇ ಕಾಯ್ದೆಯ ೧೨ನೆಯ ಕಲಮು ಹೇಳುವುದು ಹೀಗೆ; "ಹಳ್ಳಿಯ ವ್ಯವಹಾರಗಳಲ್ಲಿ ಇನ್ನು ಮುಂದೆ ಶಾನುಭೋಗರು ಮೂಗು ತೂರಿಸುವ ಅಗತ್ಯವಿಲ್ಲ. ಅವರಿಗೆ ಭೂಮಿ ಕೊಡಲಾಗುವುದಿಲ್ಲ. ಆದರೆ ಅವರನ್ನು ಕರಣಿಕರಂತೆ ಮಾತ್ರ ವೇತನದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು".
ಅದೇ ರೀತಿ ಭೂ ಕಂದಾಯ ಕಾಯ್ದೆಯ ೫ನೇ ಕಲಮಿನಂತೆ; "ಬಹಳ ಸಮಯದಿಂದ ಈ ಪಟೇಲರುಗಳು ಸರ್ಕಾರಿ ಭೂಮಿಗೆ ಸಂಪೂರ್ಣವಾಗಿ ಕಂದಾಯವನ್ನು ಸಂದಾಯ ಮಾಡುತ್ತಿಲ್ಲ. ಇದನ್ನು ಕೂಡಲೇ ತನಿಖೆ ಮಾಡಿ ಇತರ ರೈತರ ಜಮೀನಿನಂತೆ ಅದನ್ನು ಅಂದಾಜು ಮಾಡಿ ತೆರಿಗೆ ನಿಗದಿಮಾಡಬೇಕು. ರೈತರು ಪಟೇಲರ ಜಮೀನನ್ನು ಉಳಬೇಕಿಲ್ಲ. ಪಟೇಲರೇ ತಮ್ಮ ಜಮೀನನ್ನು ಖುದ್ದು ಉಳಬೇಕು. ಒಂದುವೇಳೆ ಅವರೇನಾದರೂ ರೈತರನ್ನು ಉಳುವಂತೆ ಮಾಡಿದರೆ ಸಂಪೂರ್ಣ ಉತ್ಪನ್ನವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದು. ಒಂದು ವೇಳೆ ಶಾನಭೋಗರು ತಮ್ಮ ಕೂಲಿಯ ಬದಲಿಗೆ ಸರಿಸಮನಾದ ಭೂಮಿ ಕೇಳಿದರೆ ಅವರಿಗೆ ಉಳುಮೆ ಮಾಡಿರದ ಬೆದ್ದಲು ಭೂಮಿ ನೀಡಲಾಗುವುದು".

ಸೈನಿಕರಿಗೆ ಭೂಮಿ
ಟಿಪ್ಪುವಿನ ಆಳ್ವಿಕೆ ಪರಿಚಯಿಸಿದ ಮತ್ತೊಂದು ಮುಖ್ಯ ಸುಧಾರಣೆಯೆಂದರೆ ಸೈನಿಕರಿಗೆ ಭೂಮಿ ನೀಡಿದ್ದು. ಸುಮಾರು ೩ಲಕ್ಷ ಸೈನಿಕರಿಗೆ ಈ ರೀತಿ ಭೂಮಿ ನೀಡಲಾಯಿತು. ಇದೊಂದು ಬೃಹತ್ ಸುಧಾರಣೆಯಾಗಿದ್ದು ಆ ಕಾಲದ ಕೃ ವ್ಯವಸ್ಥೆಯ ಪ್ರಧಾನ ಭಾಗವಾಗಿತ್ತು. ಇದರಿಂದಾಗಿ ಒಂದೆಡೆ ಬೃಹತ್ ಸಂಖ್ಯೆಯಲ್ಲಿ ಸಣ್ಣ ರೈತರು ಉಗಮವಾಗಿ ಊಳಿಗಮಾನ್ಯ ಹಿಡಿತದಿಂದ ಮುಕ್ತವಾದರೆ ಮತ್ತೊಂದೆಡೆ ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದ ಶೋಷಿತ ಜಾತಿಗಳಾದ ಬೇಡ, ಕುರುಬ, ಈಡಿಗ, ಒಕ್ಕಲಿಗ ಮತ್ತು ಲಿಂಗಾತ ರೈತ ಮಕ್ಕಳು ಜಾತಿ ಶೋಷಣೆಂದಲೂ ಸ್ವಲ್ಪ ಮಟ್ಟಿಗೆ ಬಿಡುಗಡೆ ಹೊಂದಿದರು.