Tuesday 11 August 2015

'ಭವಿಷ್ಯದೊಂದಿಗೆಮುಖಾಮುಖಿ'ಯ ಪ್ರತಿಜ್ಞೆಗಳ ಈಡೇರಿಕೆಯತ್ತ ಪ್ರಚಾರಾಂದೋಲನ -ಜಿ. ವಿ. ಶ್ರೀರಾಮರೆಡ್ಡಿ

'ಭವಿಷ್ಯದೊಂದಿಗೆಮುಖಾಮುಖಿ'ಯ
ಪ್ರತಿಜ್ಞೆಗಳ ಈಡೇರಿಕೆಯತ್ತ ಪ್ರಚಾರಾಂದೋಲನ -ಜಿ. ವಿ. ಶ್ರೀರಾಮರೆಡ್ಡಿ
ನೆಹರೂ ಸ್ವಾತಂತ್ರ್ಯದ ಮುನ್ನಾದಿನ 1947 ಅಗಸ್ಟ್ 14 ಮಧ್ಯರಾತ್ರಿಯಲ್ಲಿ ಮಾಡಿದ ಪ್ರಸಿದ್ಧ 'ಭವಿಷ್ಯದೊಂದಿಗೆ ಮುಖಾಮುಖಿ' ('ಟ್ರಿಸ್ಟ್ ವಿತ್ ಡೆಸ್ಟಿನಿ') ಭಾಷಣದಲ್ಲಿ ದಶಕಗಳ ಹಿಂದೆ(ಅಂದರೆ ಸ್ವಾತಂತ್ರ್ಯ ಚಳುವಳಿಯಲ್ಲಿ) ಮಾಡಿದ ಪ್ರತಿಜ್ಞೆಗಳನ್ನು ಈಡೇರಿಸುವ ಕಾಲ ಬಂದಿದೆಎಂದಿದ್ದರು. ಶ್ರೀಸಾಮಾನ್ಯನಿಗೆ - ಅಂದರೆದೇಶದಪ್ರತಿಯೊಬ್ಬರೈತ ಮತ್ತುಕಾಮರ್ಿಕನಿಗೆ - ಸ್ವಾತಂತ್ರ್ಯ ಮತ್ತು ಅವಕಾಶ ದೊರಕಿಸುವುದು; ಬಡತನ, ಅಜ್ಞಾನ ಮತ್ತುಅನಾರೋಗ್ಯದ ವಿರುದ್ಧ ಹೋರಾಡಿಅವನ್ನು ಕೊನೆಗೊಳಿಸುವುದು; ಪ್ರಜಾಸತ್ತಾತ್ಮಕ, ಪ್ರಗತಿಪರ ಸಮೃದ್ಧದೇಶವನ್ನುಕಟ್ಟುವುದು; ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಗೆ ನ್ಯಾಯಯುತ ಮತ್ತು ಪರಿಪೂರ್ಣ ಬದುಕುಕೊಡಬಲ್ಲ ಸಾಮಾಜಿಕ, ರಾಜಕೀಯ ಮತ್ತುಆಥರ್ಿಕ ಸಂಸ್ಥೆಗಳನ್ನು ಕಟ್ಟುವುದು- ಆ ಪ್ರತಿಜ್ಞೆಗಳು ಎಂದಿದ್ದರು ನೆಹರು. ಆ ಚಾರಿತ್ರಿಕಭಾಷಣದ 67ನೇ ವಾಷರ್ಿಕ ಹತ್ತಿರ ಬರುತ್ತಿರುವ ಸಂದರ್ಭದಲ್ಲಿಆ ಪ್ರತಿಜ್ಞೆಗಳನ್ನು ಈಡೇರಿಸುವಲ್ಲಿ ನಾವು ಎಲ್ಲಿದ್ದೇವೆಎಂದು ಪುನರಾವಲೋಕನ ಮಾಡುವುದು ಪ್ರಸ್ತುತ. 

ಆ ಪ್ರತಿಜ್ಞೆಗಳನ್ನು ಈಡೇರಿಸುವಲ್ಲಿ ನಾವು ಒಂದುದೇಶವಾಗಿಪೂರ್ಣ ವಿಫಲರಾಗಿದ್ದೇವೆಎಂಬುದು ಸ್ಪಷ್ಟ. ಕಳೆದ 67 ವರ್ಷಗಳಲ್ಲಿ ಬಹುಪಾಲು ಅವಧಿಯಲ್ಲಿ ಆಳಿದ ನೆಹರೂಅವರ ಪಕ್ಷವಾದಕಾಂಗ್ರೆಸ್ಸೇ  ಪ್ರತಿಜ್ಞೆಗಳನ್ನು ಈಡೇರಿಸುವಲ್ಲಿ ಸೋತಿದೆ ಮಾತ್ರವಲ್ಲ, ಅವು ಈಗ ಆ ಪಕ್ಷದ ಅಜೆಂಡಾದೊಳಗೆ ಇಲ್ಲ. ಈಗ ಅಧಿಕಾರದಲ್ಲಿರುವಮತ್ತುಒಟ್ಟು7 ವರ್ಷಗಳ ಕಾಲ ಅಧಿಕಾರ ನಡೆಸಿರುವ ಬಿಜೆಪಿಗೆ ಇವು ಎಂದೂಅಜೆಂಡಾಅಗಿರಲಿಲ್ಲ.ಈ ಹಿನ್ನೆಲೆಯಲ್ಲಿಜನತೆಯಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟಿಸಿ ಭರವಸೆಗಳನ್ನು ಕೊಟ್ಟುಅಧಿಕಾರಕ್ಕೆ ಬಂದಮೋದಿ ನಾಯಕತ್ವದ ಬಿಜೆಪಿ ಕೇಂದ್ರ ಸರಕಾರದಒಂದು ವರ್ಷದ ಮತ್ತುಸಿದ್ಧರಾಮಯ್ಯನವರ ನಾಯಕತ್ವದಕಾಂಗ್ರೆಸ್ರಾಜ್ಯ ಸರಕಾರದಎರಡು ವರ್ಷಗಳ ಆಡಳಿತಾವಧಿಯನ್ನು ವಿಶ್ಲೇಷಿಸಬೇಕಾಗಿದೆ. ಈ ಪ್ರತ್ರಿಕೆಯಲ್ಲಿ ಈಗಾಗಲೇ ಹಲವು ಲೇಖನಗಳಲ್ಲಿ ಈ ಎರಡೂ ಸರಕಾರಗಳ 'ಸಾಧನೆ'ಗಳ ಬಗ್ಗೆ ವಿವರವಾಗಿ ವಿಶ್ಲೇಷಿಸಲಾಗಿದೆ.ಆದರೂ ಮುಂದೆ ಮಾಡಬೇಕಾದಕಾಯರ್ಾಚರಣೆಗೆ ಹಿನ್ನೆಲೆಯಾಗಿ ಬಹಳ ಸಂಕ್ಷಿಪ್ತವಾಗಿ ಕೆಲವು ಅಂಶಗಳನ್ನು ಹೇಳಲೇಬೇಕಾಗಿದೆ.
ಕಾರ್ಪೊರೇಟ್ಗಳಿಗೆ 'ಟ್ರೇಡ್-ಯೂನಿಯನ್-ಮುಕ್ತ' ಭಾರತ
'ಒಳ್ಳೆಯ ದಿನ'ಗಳ ಹರಿಕಾರ ಮೋದಿಯವರ ಸರಕಾರತನ್ನಎಲ್ಲಾ ಭರವಸೆಗಳ ವಿರುದ್ಧವಾಗಿ ಕೆಲಸ ಮಾಡುತ್ತಿದ್ದು 'ಯೂ-ಟನರ್್ ಸಕರ್ಾರ್' ಎಂಬ ಅಡ್ಡ ಹೆಸರು ಪಡೆದಿದೆ. 'ನಾ ಖಾವೂಂಗಾ, ನಾ ಖಾನೇ ದೂಂಗಾ' ಎಂಬ ಭ್ರಷ್ಟಾಚಾರ ಹಗರಣ-ರಹಿತ ಸರಕಾರದ ಭರವಸೆ 'ಲಲಿತ್ಗೇಟ್' ಹಗರಣ, ಮಹಾರಾಷ್ಟ್ರ ಸರಕಾರದಚಿಕ್ಕಿ ಮುಂತಾದ ಹಗರಣಗಳು, ಮಧ್ಯಪ್ರದೇಶದ ವ್ಯಾಪಂ ಹಗರಣಗಳಿಂದ ಹುಸಿಯಾಗಿದೆ ಮಾತ್ರವಲ್ಲ, ನಗೆಪಾಟಲಾಗಿದೆ. ಭ್ರ್ಷಷ್ಟ ಮಂತ್ರಿಗಳ ರಕ್ಷಣೆ ಮಾಡುವ ಭಂಡತನದಲ್ಲಿಬಿಜೆಪಿ ಕಾಂಗ್ರೆಸನ್ನು ಮೀರಿಸಿದೆ. ಕಪ್ಪು-ಹಣ ವಾಪಸು ತಂದು ಪ್ರತಿಯೊಬ್ಬರಿಗೆ 15 ಲಕ್ಷ ಹಂಚುವ ಭರವಸೆ, ಕಪ್ಪು ಹಣದದೊರೆ ಲಲಿತ್ ಮೋದಿಯನ್ನುಭಾರತ ಸರಕಾರದ 'ಕಠಿಣ ಕ್ರಮ'ಗಳಿಂದ ರಕ್ಷಿಸಲುಹಿರಿಯಬಿಜೆಪಿ ನಾಯಕಿಯರಾದಸುಷ್ಮಾ-ರಾಜೇತೋರಿದ 'ಮಾನವೀಯಅನುಕಂಪ'ದಕಡಲಲ್ಲಿ ಮುಳುಗಿ ಹೋಗಿದೆ. 

ಆದರೆಇವೆಲ್ಲಕ್ಕಂತೂಹೆಚ್ಚಾಗಿ - ಬಹುರಾಷ್ಟ್ರೀಯ ಮತ್ತು ದೇಸಿ ಕಾಪರ್ೊರೆಟ್ಗಳಿಗೆ  'ಟ್ರೇಡ್-ಯೂನಿಯನ್-ಮುಕ್ತ' ಭಾರತದಉಡುಗೊರೆಕೊಡಲು ಹವಣಿಸುತ್ತಿರುವಕಾಮರ್ಿಕ ಕಾನೂನುಗಳಲ್ಲಿ ಆಮೂಲಾಗ್ರ ಕಾಮರ್ಿಕ-ವಿರೋಧಿ ಬದಲಾವಣೆಗಳು; ಸಾಮಾಜಿಕ ಸೇವೆ ಮತ್ತುಕಲ್ಯಾಣಯೋಜನೆಗಳಲ್ಲಿ ತೀವ್ರಕಡಿತ; ರೈತ-ವಿರೋಧಿ ಭೂಕಬಳಿಕೆ ಕಾಯಿದೆಯನ್ನುಎಲ್ಲಾರೈತ ಸಂಘಟನೆಗಳು ಹಾಗೂ ಸಂಘ ಪರಿವಾರದಒಂದು ವಿಭಾಗ ಸೇರಿದಂತೆ ಹಲವು ರಾಜಕೀಯ ಶಕ್ತಿಗಳಿಂದ  ತೀವ್ರ ವಿರೋಧಇದ್ದರೂತರಾತುರಿಯಲ್ಲಿಜಾರಿಗೆತರಲು ಮೂರು ಸುಗ್ರೀವಾಜ್ಞೆಗಳನ್ನು ತಂದಿರುವುದು-ತೀವ್ರಆತಂಕಕಾರಿ ಬೆಳವಣಿಗೆಗಳು. ಶಾಂಘೈ ಭಾಷಣದಲ್ಲಿ 'ಭಾರತೀಯಎಂದು ಹೇಳಿಕೊಳ್ಳಲೂ ನಾಚಿಕೆಯಾಗುವಂತಹ ಪರಿಸ್ಥಿತಿ' ಬಗ್ಗೆ ಹೇಳಿದ್ದು, ಭಾರತೀಯ ಅಧಿಕಾರಿಗಳಿಗೆ ತಿಳಿಯಬಾರದು ಎಂದು ವಸುಂಧರಾರಾಜೇ ಬ್ರಿಟಿಷ್ ಸರಕಾರಕ್ಕೆಕೊಟ್ಟ ಪ್ರಮಾಣ ಪತ್ರದಲ್ಲಿ ಹೇಳಿಕೆ, ಸಾಮ್ರಾಜ್ಯಶಾಹಿ ದೇಶವೊಂದರಅಧ್ಯಕ್ಷಒಬಾಮನನ್ನುಗಣರಾಜ್ಯೋತ್ಸವ ಪರೇಡಿಗೆ ಆಹ್ವಾನಿಸಿದ್ದು -ಇವೆಲ್ಲಾ ಬಿಜೆಪಿಯ'ದೇಶಭಕಿ'್ತ ಬಗ್ಗೆ ತೀವ್ರಅನುಮಾನ ಹುಟ್ಟಿಸಿವೆ. ಹೀಗೆ ಮೋದಿ ಸರಕಾರ ಕಾಮರ್ಿಕ-ವಿರೋಧಿ, ರೈತ-ವಿರೋಧಿ, ಜನ-ವಿರೋಧಿ, ದೇಶ-ವಿರೋಧಿ ಎಂಬ ಬಗ್ಗೆ ಅವರಿಗೆ ಮತಕೊಟ್ಟಜನತೆಗೂಖಚಿತವಾಗುತ್ತಿದೆ.ಇದನ್ನು ಮುಚ್ಚಿಕೊಳ್ಳಲು - ಕೋಮು, ಜಾತಿಗಳ ಆಧಾರದ ಮೇಲೆ ಜನರನ್ನುಒಡೆಯುವ, ಅವರ ಗಮನ ಬೇರೆಡೆತಿರುಗಿಸುವ ಕೋಮುವಾದಿ ದಾಳಿ ಒಂದುಕಡೆ, ಪ್ರಜಾಪ್ರಭುತ್ವ ಮತ್ತುಅಭಿವ್ಯಕ್ತಿಯ ಹಕ್ಕುಗಳ ಮೇಲೆ ಸತತ ದಾಳಿ - ಮೋದಿ ಸರಕಾರದರಕ್ಷಣಾ ಶಸ್ತ್ರಗಳು.
ಅನ್ನ ಭಾಗ್ಯವಲ್ಲ, ಆಹಾರದ ಹಕ್ಕು
ಗಂಭೀರವಾಗುತ್ತಿದ್ದರೈತರ ಸರಣಿಆತ್ಮಹತ್ಯೆ ಬಗ್ಗೆ ಸತತ ನಿರ್ಲಕ್ಷತೋರುತ್ತಾ ಬಂದು ಕೆಲವು ಕಣ್ಣುಕಟ್ಟು ಪರಿಹಾರ ಮಾತ್ರಕೊಡಲು ಆರಂಭಿಸಿರುವ ಸಿದ್ಧರಾಮಯ್ಯ ನಾಯಕತ್ವದಕಾಂಗ್ರೆಸ್ ಸರಕಾರದರೈತ-ವಿರೋಧಿ ನೀತಿಯ ಬಗ್ಗೆ ರೈತರಿಗೆ ಸಂಶಯ ಉಳಿದಿಲ್ಲ. ಪಕ್ಷದ 'ಸಕ್ಕರೆ ಲಾಬಿ'ಯಒತ್ತಡದಿಂದಾಗಿರೈತರಕಬ್ಬು ಬಾಕಿ ವಸೂಲಾತಿ ಕ್ರಮಗಳು ಸಾಧ್ಯವಾಗಿಲ್ಲ.  ಲಕ್ಷಾಂತರ ಎಕರೆಗಳ ಸರಕಾರಿ-ಅರಣ್ಯಜಮೀನನ್ನುಒತ್ತುವರಿ ಮಾಡಿಕೊಳ್ಳುತ್ತಾ ಬಂದದೈತ್ಯ ಭೂಗಳ್ಳರಿಗೂ, ಬಗರ್-ಹುಕುಂ ಉಳುಮೆ ಮಾಡುತ್ತಿರುವ ಬಡರೈತರಿಗೂ ವ್ಯತ್ಯಾಸಕಾಣದಿರುವ ನೀತಿಯನ್ನುಇನ್ನೇನೆಂದುಕರೆಯಬೇಕು ?ಎಸ್ಮಾಕಾಯಿದೆಯನ್ನುಜಾರಿಗೆತಂದುಕಾಮರ್ಿಕರ ಮುಷ್ಕರ ಮುರಿಯಲು ನಿಷೇಧಿಸಲು ಮುಂದಾಗುತ್ತಿರುವುದು ಮತ್ತುಕಾಮರ್ಿಕರುತಮ್ಮ ಹಕ್ಕುಗಳಿಗೆ ಮುಷ್ಕರ ಮಾಡಿದಾಗೆಲ್ಲ ಮಾಲಿಕರ-ಪರಕಾಯರ್ಾಚರಣೆ ಕೈಗೊಳ್ಳುವ ಸರಕಾರದ ಕಾಮರ್ಿಕ-ವಿರೋಧಿ ನೀತಿಯೂ ಸ್ಪಷ್ಟ. 
ಅನ್ನ ಭಾಗ್ಯ ಮುಂತಾದ ಹಲವು 'ಭಾಗ್ಯ' ಯೋಜನೆಗಳು ಈ ಸರಕಾರದಅಗ್ಗದಜನಪ್ರಿಯತೆ ಗಿಟ್ಟಿಸಿಕೊಳ್ಳುವ ಸಾಧನಗಳು. ಆಹಾರ ಭದ್ರತೆ, ಮನೆ-ನಿವೇಶನ, ಆರೋಗ್ಯ ಮುಂತಾದವುಜನರ ಪ್ರಾಥಮಿಕ ಹಕ್ಕು ಆಗಬೇಕಿದ್ದು 'ಭಾಗ್ಯ' ಆಗಿದೆ. ರೈತಕಾಮರ್ಿಕರಆದಾಯಕ್ಕೆ ಕೊಳ್ಳಿ ಇಟ್ಟು, ಇನ್ನೊಂದುಕಡೆಜೀವನಾವಶ್ಯಕ ವಸ್ತುಗಳ ಬೆಲೆಏರಿಸುವಂತಹ ನೀತಿತಂದು, ಆಹಾರಕ್ಕೂ ಪರದಾಡುವ ಸ್ಥಿತಿ ತಂದಿಟ್ಟು,ಅನ್ನ 'ಭಾಗ್ಯ' ಕೊಟ್ಟೆಎಂದು ಬೀಗುವುದು ಮೋಸವಲ್ಲವೆ ? ಕೃಷಿ ಕೈಗಾರಿಕೆಗಳ ನಿಜವಾದ ಬೆಳವಣಿಗೆಗೆ ಹೂಡಿಕೆಯಲ್ಲಿ ನಿರ್ಲಕ್ಷ ಮತ್ತು ಬಂಡವಾಳಶಾಹಿ-ಭೂಮಾಲಕರ ಹಿತಾಸಕ್ತಿಗಳ ರಕ್ಷಣೆಕಾಂಗ್ರೆಸ್ ಸರಕಾರದ ನಿಜ ಸ್ವರೂಪ ಬಯಲಿಗೆಳೆಯುತ್ತದೆ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ 'ಉತ್ತಮ' ಆಗಬೇಕಾಗಿದ್ದಒಂದುಅಂಶವೆಂದರೆಕೋಮುವಾದೀಕರಣದ ವಿರುದ್ಧ ಹೋರಾಟ. ಆದರೆಅಲ್ಲೂಒಮ್ಮೆಬಹು ಸಂಖ್ಯಾತರಇನ್ನೊಮ್ಮೆಅಲ್ಪಸಂಖ್ಯಾತರಓಲೈಕೆಯಲ್ಲಿತೊಡಗುತ್ತಾಕೋಮುವಾದೀಕರಣದ ವಿರುದ್ಧದೃಢ ಹೋರಾಟದಲ್ಲಿಕಾಂಗ್ರೆಸ್ ಸೋತಿದೆ. ಇನ್ನುಪ್ರಜಾಪ್ರಭುತ್ವ ಮತ್ತುಅಭಿವ್ಯಕ್ತಿ ಮೇಲೆ ದಾಳಿ ಹಾಗೂ ಭ್ರಷ್ಟಾಚಾರದ ಬಗ್ಗೆ ಕೇಳುವುದೇ ಬೇಡ. ತುತರ್ು ಪರಿಸ್ಥಿತಿ ಮತ್ತುಅಂತಹುದೇ ನೀತಿಗಳ ಮುಂದುವರಿಕ,ೆ ಹಾಗೂ ಯುಪಿಯ ಸರಕಾರದ ಮೆಗಾ-ಹಗರಣಗಳೇ ಸಾಕು. 
ಕೇಂದ್ರದಲ್ಲಿಇತ್ತೀಚಿನ 10 ವರ್ಷಗಳಲ್ಲಿ ಕಾಂಗ್ರೆಸ್ಅನುಸರಿಸಿದ ನೀತಿಯಇನ್ನೂತೀವ್ರವಾದ ಮುಂದುವರಿಕೆಯನ್ನೇ ಬಿಜೆಪಿ ಮಾಡುತ್ತಿರುವುದು. ಕಾಂಗ್ರೆಸಿನ ಜನ-ವಿರೋಧಿ ನೀತಿಗಳು ಮತ್ತು ಆ ನೀತಿಗಳಿಂದ ಹುಟ್ಟಿದ ಭ್ರಷ್ಟಾಚಾರದಿಂದ ಬೇಸತ್ತುಜನ ಬಿಜೆಪಿಯತ್ತ ವಾಲಿದ್ದು. ಆದರೂ ಕಾಂಗ್ರೆಸಿನ ಕೇಂದ್ರಅಥವಾರಾಜ್ಯಘಟಕ ಈ ನೀತಿಗಳನ್ನು ಪುನವರ್ಿಮಶರ್ಿಸುವ ಗೋಜಿಗೆ ಹೋಗಿಲ್ಲ, ಹೋಗುವುದೂಇಲ್ಲ.
ಸ್ಥಳೀಯ ಸಮಸ್ಯೆಗಳ ಸುತ್ತ
ಈ ಎರಡೂ ಪ್ರಮುಖ ಪಕ್ಷಗಳು ಮತ್ತು ಅವುಗಳ ಸರಕಾರಗಳು ಅನುಸರಿಸುತ್ತಿರುವ ನವ-ಉದಾರೀಕರಣದ ನೀತಿಗಳನ್ನು ಗಮನಿಸಿದರೆ, ಇವು ನೆಹರೂ'ಭವಿಷ್ಯದೊಂದಿಗೆ ಮುಖಾಮುಖಿ' ಭಾಷಣದಲ್ಲಿಪ್ರಸ್ತಾಪಿಸಿದ ಪ್ರತಿಜ್ಞೆಗಳನ್ನು ಈಡೇರಿಸುವಉದ್ದೇಶ ಹೊಂದಿಲ್ಲ. ಮಾತ್ರವಲ್ಲ, ಅದಕ್ಕೆತದ್ವಿರುದ್ಧವಾಗಿವೆ. ಈ ಬಗ್ಗೆ ಈ ಎರಡು ಪಕ್ಷಗಳನ್ನೂ ಅವುಗಳ ಸರಕಾರಗಳನ್ನೂ ಬಯಲಿಗೆಳೆಯಬೇಕಾಗಿದೆ. ಆದರೆ ಈ ಪ್ರತಿಜ್ಞೆಗಳನ್ನು ಈಡೇರಿಸುವುದು ಇಂದಿನ ತುತರ್ುಅಗತ್ಯ. ಆದ್ದರಿಂದಇದಕ್ಕಾಗಿಈ ಎರಡು ಪಕ್ಷಗಳು ಅನುಸರಿಸುತ್ತಿರುವ ನವ-ಉದಾರೀಕರಣದ ನೀತಿಗಳಿಗೆ ಬದಲಿ ನೀತಿಗಳನ್ನು ಜನತೆಯ ಮುಂದಿಟ್ಟುಜನ-ಪರ ಬದಲಿ ರಾಜಕೀಯ ಮಾಡಬೇಕಾಗಿದೆ. ಇದನ್ನುಕಾಂಗ್ರೆಸ್-ಬಿಜೆಪಿಗಳಾಗಲಿ ಇತರಜೆಡಿಎಸ್-ಆಪ್ ನಂತಹ ವಿರೋಧ ಪಕ್ಷಗಳಾಗಲಿ ಮಾಡಲು ಸಾಧ್ಯವಿಲ್ಲ. ಇದನ್ನು ಎಡಪಕ್ಷಗಳು ಮಾತ್ರ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಸಿಪಿಐ(ಎಂ) ಮುಂದಾಳತ್ವ ವಹಿಸಬೇಕಾಗಿದೆ. ಬದಲಿ ನೀತಿಗಳಿಗೆ ಜನರನ್ನು ಒಲಿಸಬೇಕಾದರೆಜನರ ಸಮಸ್ಯೆಗಳಿಗೆ ಸ್ಪಂದಿಸಿ ಅದಕ್ಕೆ ಪರಿಹಾರಕ್ಕಾಗಿ ಹೋರಾಡಬೇಕಾಗಿದೆ. ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಅವಕ್ಕೆ ಕಾರಣವಾಗಿರುವ ಮತ್ತುಅವುಗಳ ಪರಿಹಾರಕ್ಕೆತೊಡಕಾಗಿರುವನವ-ಉದಾರವಾದಿ ನೀತಿಗಳನ್ನು ವಿರೋಧಿಸುವಬದಲಾಯಿಸುವಆವಶ್ಯಕತೆ ಬಗ್ಗೆ ಅವರಿಗೆಅರಿವು ಮೂಡಿಸಬೇಕಾಗಿದೆ. ಈ ಪ್ರತಿಜ್ಞೆಗಳನ್ನು ಈಡೇರಿಸುವುದುಅಗತ್ಯ ಮತ್ತು ಸಾಧ್ಯಎಂದು ಭರವಸೆ ಮೂಡಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಸಿಪಿಐ(ಎಂ) ರಾಜ್ಯ್ರ ಸಮಿತಿರಾಜ್ಯದಾದ್ಯಂತಅಗಸ್ಟ್ 1 ರಿಂದ 14ರವರೆಗೆ ರಾಜಕೀಯ ಪ್ರಚಾರಾಂದೋಲನಕ್ಕೆ ಕರೆಕೊಟ್ಟಿದೆ. ಈ ವರೆಗಿನ ಪ್ರಚಾರಾಂದೋಲನಕ್ಕಿಂತಇದು ಭಿನ್ನವಾಗಿದೆ. ಈ ವರೆಗೆ ಹೆಚ್ಚಾಗಿ ಇಡೀರಾಜ್ಯದಲ್ಲಿ (ಇಡೀದೇಶದಲ್ಲಿಕೂಡಾ) ಒಂದುಸಮಸ್ಯೆ ಬಗ್ಗೆ ಪ್ರಚಾರಾಂದೋಲನ ನಡೆಸಲಾಗಿತ್ತು. ಉದಾಹರಣೆಗೆ ಬಗರ್ ಹುಕುಂ ಅಥವಾರೇಶನ್ಅವ್ಯವಸ್ಥೆಅಥವಾ ಮನೆ-ನಿವೇಶನ. ಈ ಪ್ರಚಾರಾಂದೋಲನಗಳ ಒಂದುಅನುಭವವೆಂದರೆಯಾವುದೇಒಂದು ಸಮಸ್ಯೆಇಡೀರಾಜ್ಯದಲ್ಲಿಅಥವಾಒಂದುಜಿಲ್ಲೆ-ತಾಲೂಕಿನಲ್ಲಿಕೂಡಾಸಮಾನವಾಗಿ ಬಾಧಿಸುವುದಿಲ್ಲ. ಆದ್ದರಿಂದಜನಅದಕ್ಕೆ ಭಾರೀ ಸ್ಪಂದನ ನೀಡುವುದಿಲ್ಲ. ಆದರೆ ಪ್ರತಿಯೊಂದುಗ್ರಾಮತಾಲೂಕುಜಿಲ್ಲೆಯಲ್ಲಿಇಡೀ ಪ್ರದೇಶವನ್ನುತೀವ್ವರವಾಗಿ ಬಾಧಿಸುವಒಂದೆರಡು ಸಮಸ್ಯೆಗಳು ಇದ್ದೇಇರುತ್ತವೆ. ಇದನ್ನುಎತ್ತಿಕೊಂಡು ಹೋರಾಟ ಮಾಡಿದರೆ ಭಾರೀಜನ-ಸ್ಪಂದನದೊರಯುತ್ತದೆ. ಉದಾಹರಣೆಗೆಒಂದುಜಿಲ್ಲೆತಾಲೂಕಿನಲ್ಲಿಕುಡಿಯುವ ನೀರುತೀವ್ರ ಸಮಸ್ಯೆಯಾದರೆ, ಇನ್ನೊಂದುಕಡೆ ಮನೆ-ನಿವೇಶನ, ಸಂಪರ್ಕರಸ್ತೆ-ಸೇತುವೆ, ಮತ್ತೊಂದುಕಡೆಒಕ್ಕಲೆಬ್ಬಿಸುವುದು, ಮಗದೊಂದುಕಡೆಕಬ್ಬಿನ ಬಾಕಿ, ಭತ್ತದ ಬೆಲೆ ತೀವ್ರ ಸಮಸ್ಯೆಯಾಗಿರಬಹುದು. ಈ ಪ್ರಚಾರಾಂದೋಲನದಲ್ಲಿ ಪ್ರತಿಯೊಂದು ಪ್ರದೇಶದಲ್ಲಿಅಲ್ಲಿನ ಸ್ಥಳೀಯವಾದ ತೀವ್ರ ಸಮಸ್ಯೆಯನ್ನು ಎತ್ತಿಕೊಳ್ಳಬೇಕು. ಅಗಸ್ಟ್ 1 ರಿಂದ 14ರವರೆಗೆ ನಡೆಯುವ ಪ್ರಚಾರಾಂದೋಲನಕ್ಕೆ ಪೂರ್ವಭಾವಿಯಾಗಿಜುಲೈ ತಿಂಗಳಲ್ಲಿ ಮನೆ-ಮನೆ ಪ್ರಚಾರ, ಕರಪತ್ರ ವಿತರಣೆ, ಜಾಥಾ, ಕಾರ್ಯಕರ್ತರ ಶಿಬಿರ, ಸಮಾವೇಶಗಳು ಮುಂತಾದತಯಾರಿ ನಡೆಸಬೇಕಾಗಿದೆ. 
'ಭವಿಷ್ಯದೊಂದಿಗೆ ಮುಖಾಮುಖಿ'ಯ ಸಮಾರೋಪ
ಪ್ರಚಾರಾಂದೋಲನ ಮೂರು ಹಂತಗಳಲ್ಲಿ ನಡೆಯಬೇಕಾಗಿದೆ. ಮೊದಲ ಹಂತದಲ್ಲಿಜನರನ್ನುತೀವ್ರವಾಗಿ ಬಾಧಿಸುತ್ತಿರುವ ಸ್ಥಳೀಯ ಸಮಸ್ಯೆಯನ್ನುಎತ್ತಿಕೊಂಡುಗ್ರಾಮ ಪಂಚಾಯತ್ ಮುಂದೆಧರಣಿ-ಪ್ರತಿಭಟನೆ ನಡೆಸಬೇಕಾಗಿದೆ. ಇದಕ್ಕೆಜನರನ್ನುತೀವ್ರವಾಗಿ ಬಾಧಿಸುತ್ತಿರುವ ಸ್ಥಳೀಯ ಸಮಸ್ಯೆಗಳನ್ನು ಅಧ್ಯಯನ ಮಾಡಿಒಂದುಅಥವಾಎರಡು ಸಮಸ್ಯೆಗಳನ್ನು ಎಚ್ಚರಿಕೆಯಿಂದಆರಿಸಬೇಕಾಗಿದೆ. ಎರಡನೇ ಹಂತದಲ್ಲಿಜನರನ್ನುತೀವ್ರವಾಗಿ ಬಾಧಿಸುತ್ತಿರುವತಾಲೂಕು ಮಟ್ಟದ ಸಮಸ್ಯೆಯನ್ನುಎತ್ತಿಕೊಂಡು ಹೋರಾಟ ನಡೆಸಬೇಕು. ಮೂರನೇ ಹಂತದಲ್ಲಿಜಿಲ್ಲಾ ಮಟ್ಟದ ಸಮಸ್ಯೆಯನ್ನು ಎತ್ತಿಕೊಳ್ಳಬೇಕು. ಈ ಎಲ್ಲಾ ಹೋರಾಟಗಳು ಸಮರಶೀಲವಾಗಿರಬೇಕು. ಅಗತ್ಯ ಬಿದ್ದಲ್ಲಿಗ್ರಾಮ-ತಾಲೂಕು-ಜಿಲ್ಲಾ ಪಂಚಾಯತ್ಗೆ ಮುತ್ತಿಗೆ, ಮಹಾಧರಣಿ ಮುಂತಾದವನ್ನು ಒಳಗೊಳ್ಳಬೇಕು. ಹೋರಾಟದ ಸ್ವರೂಪ ಸಮಸ್ಯೆಯ ಬಾಧಿತರನ್ನು ಪಾಲ್ಗೊಳ್ಳಲು ಸೆಳೆಯುವಂತೆ ಸಹ ಇರಬೇಕು.
ಪ್ರಚಾರಾಂದೋಲನದ ಸಮಾರೋಪಜಿಲ್ಲಾಕೇಂದ್ರದಲ್ಲಿಕೊನೆಯ ದಿನ ಅಂದರೆಅಗಸ್ಟ್ 14ರಂದು ಮಧ್ಯರಾತ್ರಿಯವರೆಗೆ ನಡೆಯಬೇಕು. ಇದಕ್ಕೆ ವಿಶೇಷ ಮಹತ್ವಇದೆ. ನೆಹರೂಅವರ 'ಭವಿಷ್ಯದೊಂದಿಗೆ ಮುಖಾಮುಖಿ'ಯ ಪ್ರತಿಜ್ಞೆಗಳ ಈಡೇರಿಲ್ಲ. ಅದುಈಡೇರಬೇಕಾಗಿದೆ ಎಂಬ ಅಂಶವನ್ನು ಸಮಾರೋಪಎತ್ತಿತೋರಿಸುವಂತೆಇರಬೇಕು.ಅದಕ್ಕಾಗಿ ಪಂಜಿನ ಮೆರವಣಿಗೆ, ಮೇಣದ ದೀಪ ಧರಣಿ ಇತ್ಯಾದಿಗಳಲ್ಲದೆ ಮಧ್ಯರಾತ್ರಿಯವರೆಗೆ ನಡೆಯುವ ಮಹಾಧರಣಿ/ಪ್ರದರ್ಶನಇತ್ಯಾದಿ ಇರಬೇಕು. 
ಅಗಸ್ಟ್ ಪ್ರಚಾರಾಂದೋಲನಕ್ಕೆ ಮುನ್ನಡೆಯಿರಿ !
'ಭವಿಷ್ಯದೊಂದಿಗೆ ಮುಖಾಮುಖಿ'ಯ ಪ್ರತಿಜ್ಞೆಗಳನ್ನು ಈಡೇರಿಸುವತ್ತ ಸಾಗೋಣ !!

ಭವಿಷ್ಯದೊಂದಿಗೆ ನಮ್ಮ ಮುಖಾಮುಖಿ- ಜವಾಹರಲಾಲ ನೆಹರು

ಬಹಳ ವರ್ಷಗಳ ಹಿಂದೆ ಭವಿಷ್ಯದೊಂದಿಗೆ ನಮ್ಮ ಮುಖಾಮುಖಿ ನಡೆದಿತ್ತು. ಆಗ ಕೈಗೊಂಡ ಪ್ರತಿಜ್ಞೆಯನ್ನು ಈಡೇರಿಸುವ, ಸಂಪೂರ್ಣವಾಗಿ ಅಲ್ಲದಿದ್ದರೂ, ಗಣನೀಯವಾಗಿ ಈಡೇರಿಸುವ ಸಮಯ ಈಗ ಬಂದಿದೆ. ಮಧ್ಯರಾತ್ರಿಯ ಗಂಟೆ ಬಾರಿಸುವ ಈ ಜಾವದಲ್ಲಿ  ಜಗವೆಲ್ಲ ಮಲಗಿರುವಾಗ ಭಾರತ ಎಚ್ಚೆತ್ತು ಜೀವನ ಮತ್ತು ಸ್ವಾತಂತ್ರ್ಯದತ್ತ ಸಾಗುತ್ತದೆ. ಒಂದು ಕ್ಷಣ ಬರುತ್ತದೆ, ಅದು ಚರಿತ್ರೆಯಲ್ಲಿ ಬಹಳ ಅಪರೂಪದ ಕ್ಷಣ, ನಾವು ಹಳೆಯ ಕಾಲದಿಂದ ಹೊಸ ಕಾಲಕ್ಕೆ ಕಾಲಿಡುವ, ಬಹುಕಾಲದಿಂದ ದಮನಿಸಲ್ಪಟ್ಟ ಒಂದು ದೇಶ ದನಿ ಪಡೆದುಕೊಳ್ಳುವ ಕ್ಷಣ. ಈ ಘನಗಂಭೀರ ಕ್ಷಣದಲ್ಲಿ ನಾವು ಭಾರತ ಮತ್ತು ಅದರ ಜನತೆಯ ಸೇವೆಗೆ ಹಾಗೂ ಇನ್ನೂ ವಿಶಾಲವಾದ ಮಾನವತೆಯ ಒಳಿತಿಗಾಗಿ ಮುಡಿಪಾಗಿಡುವ ಪ್ರತಿಜ್ಞೆಗೈಯುವುದು ಅತ್ಯಂತ ಸೂಕ್ತ.

ಚರಿತ್ರೆಯ ಅರುಣೋದಯದಿಂದಲೇ ಭಾರತ ತನ್ನ ಅನಂತ ಅನ್ವೇಷಣೆಯನ್ನು ಆರಂಭಿಸಿದೆ, ಜಾಡು ಸಿಗದ ಶತಮಾನಗಳು, ಅದರ ಪರಿಶ್ರಮಗಳಿಂದ, ಯಶೋಗಾಥೆಗಳು ಮತ್ತು ವಿಫಲತೆಗಳಿಂದ ತುಂಬಿವೆ. ಒಳಿತಾಗಲಿ ಕೆಡುಕಾಗಲಿ ಭಾರತ ಎಂದೂ ಅನ್ವéೇಷಣೆಯ ಹಾದಿಯಲ್ಲಿ ಮುಗ್ಗರಿಸಲಿಲ್ಲ ಅಥವಾ ತನಗೆ ಶಕ್ತಿದುಂಬಿದ ಅದರ್ಶಗಳನ್ನು ಮರೆಯಲಿಲ್ಲ. ನಾವು ಇಂದು ದುರದೃಷ್ಟದ ಒಂದು ಅವಧಿಯನ್ನು ಕೊನೆಗೊಳಿಸುತ್ತಿದ್ದೇವೆ, ಮತ್ತು ಭಾರತ ಮತ್ತೊಮ್ಮೆ ತನ್ನನ್ನು ತಾನು ಕಂಡುಕೊಳ್ಳುತ್ತಿದೆ.  ನಾವಿಂದು ಸಂಭ್ರಮ ಪಡುತ್ತಿರುವ ಸಾಧನೆ ಒಂದು ಹೆಜ್ಜೆಯಷ್ಟೇ, ನಮಗಾಗಿ ಕಾದಿರುವ ಹೆಚ್ಚಿನ ಗೆಲುವುಗಳಿಗೆ ಮತ್ತು ಸಾಧನೆಗಳಿಗೆ ಒಂದು ಅವಕಾಶ ತೆರೆದುಕೊಳ್ಳುತ್ತಿದೆ. ನಾವು ಈ ಅವಕಾಶವನ್ನು ಗ್ರಹಿಸಿಕೊಳ್ಳುವಷ್ಟು ಮತ್ತು ಭವಿಷ್ಯದ ಸವಾಲನ್ನು ಸ್ವೀಕರಿಸುವಷ್ಟು ಧೈರ್ಯಶಾಲಿಗಳೂ, ವಿವೇಕವಂತರೂ ಆಗಿದ್ದೇವೆಯೇ?

ಸ್ವಾತಂತ್ರ್ಯ ಮತ್ತು ಅಧಿಕಾರ ಹೊಣೆಗಾರಿಕೆಯನ್ನು ತರುತ್ತವೆ. ಈ ಹೊಣೆ ಈ ಸಂವಿಧಾನ ಸಭೆಯ ಮೇಲೆ, ಭಾರತದ ಸಾರ್ವಭೌಮ ಜನತೆಯನ್ನು ಪ್ರತಿನಿಧಿಸುವ ಈ ಸಾರ್ವಭೌಮ ಸಂಸ್ಥೆಯ ಮೇಲಿದೆ. ಸ್ವಾತಂತ್ರ್ಯದ ಜನನದ ಮುನ್ನ ನಾವು ಎಲ್ಲ ಪ್ರಸವ ವೇದನೆಗಳನ್ನು ಸಹಿಸಿದ್ದೇವೆ. ನಮ್ಮ ಹೃದಯಗಳು ಈ ನೆನಪುಗಳ ನೋವಿನಿಂದ ಭಾರವಾಗಿವೆ. ಕೆಲವೊಂದು ವೇದನೆಗಳು ನಮ್ಮನ್ನು ಇನ್ನೂ ಕಾಡುತ್ತಲಿವೆ. ಅದೇನೇ ಇರಲಿ, ಗತಕಾಲ ಮುಗಿದಿದೆ. ಭವಿಷ್ಯ ನಮ್ಮನ್ನೀಗ ಕೈಬೀಸಿ ಕರೆಯುತ್ತಿದೆ. 

ಆ ಭವಿಷ್ಯ ಸುಲಭದ್ದಲ್ಲ ಅಥವಾ ವಿಶ್ರಾಂತಿ ಪಡೆಯುವಂತದ್ದಲ್ಲ, ಬದಲಿಗೆ ಅವಿರತ ಶ್ರಮದ, ಮತ್ತು ಆಮೂಲಕ ಈ ಹಿಂದೆ ನಾವು ಆಗಾಗ ಕೈಗೊಂಡ ಮತ್ತು  ಇಂದು ಕೈಗೊಳ್ಳಲಿರುವ ಪ್ರತಿಜ್ಞೆಗಳ  ಈಡೇರಿಕೆಯನ್ನು ನಮಗೆ ಸಾಧ್ಯವಾಗಿಸಬೇಕಾದ್ದು. ಭಾರತದ ಸೇವೆಯೆಂದರೆ  ನರಳುತ್ತಿರುವ ಕೋಟ್ಯಾಂತರ ಜನರ ಸೇವೆ. ಅದರರ್ಥ ಬಡತನ, ಮೌಢ್ಯ ಮತ್ತು ಅನಾರೋಗ್ಯ ಮತ್ತು ಅವಕಾಶಗಳ ಅಸಮಾನತೆಯನ್ನು ಕೊನೆಗಾಣಿಸುವುದು. ಪ್ರತಿಯೊಬ್ಬರ ಪ್ರತಿಯೊಂದು ಕಣ್ಣೀರನ್ನು ಒರೆಸುವುದು ನಮ್ಮ  ಕಾಲದ  ಸರ್ವಶ್ರೇಷ್ಠ ಪುರುಷನ ಮಹದಾಸೆಯಾಗಿತ್ತು. ಇದು ನಮ್ಮ ಸಾಮಥ್ರ್ಯಕ್ಕೆ ಮೀರಿದ್ದಿರಬಹುದು. ಆದರೆ ಎಲ್ಲಿಯವರೆಗೆ ಕಣ್ಣೀರು ಮತ್ತು ಸಂಕಷ್ಟಗಳು ಇರುವವೋ, ಅಲ್ಲಿಯವರೆಗೆ ನಮ್ಮ ಕೆಲಸ ಮುಗಿಯುವುದಿಲ್ಲ.

ಆದ್ದರಿಂದ ನಾವು ನಮ್ಮ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸಬೇಕಿದೆ, ಕೆಲಸ ಮಾಡಬೇಕಿದೆ. ಕಷ್ಟಪಟ್ಟು ಕೆಲಸ ಮಾಡಬೇಕಿದೆ. ಇವು ಭಾರತದ ಕನಸುಗಳು, ಅಷ್ಟೇ ಅಲ್ಲ, ಇಡೀ ವಿಶ್ವದ ಕನಸುಗಳು. ಏಕೆಂದರೆ ಇಂದು ದೇಶಗಳು ಮತ್ತು ಜನಗಳು ಎಷ್ಟೊಂದು ನಿಕಟವಾಗಿ ಹೆಣೆದುಕೊಂಡಿದ್ದಾರೆಂದರೆ ಅವರಲ್ಲಿ ಯಾರೊಬ್ಬರೂ ತಾವು ಪ್ರತ್ಯೇಕವಾಗಿ ಬದುಕಬಹುದೆಂದು ಊಹಿಸಲೂ ಸಾಧ್ಯವಿಲ್ಲ. 

ಶಾಂತಿ ಅವಿಭಾಜ್ಯ ಎನ್ನುತ್ತಾರೆ; ಹಾಗೆಯೇ ಸ್ವಾತಂತ್ರ್ಯ ಕೂಡ ಮತ್ತು ಇಂದು ಸಂಪತ್ತು ಕೂಡ, ಮತ್ತು ಇನ್ನು ಮುಂದೆ ಪ್ರತ್ಯೇಕವಾದ ತುಣುಕುಗಳಾಗಿ ಛಿದ್ರಗೊಳಿಸಲಾಗದ ಈ ಅಖಂಡ ಜಗತ್ತಿನಲ್ಲಿ ವಿಪತ್ತುಗಳು ಕೂಡ. ಭಾರತದ ಜನತೆಗೆ, ಅವರ  ಪ್ರತಿನಿಧಿಗಳಾದ ನಾವು, ಈ ಮಹಾ ಸಾಹಸದಲ್ಲಿ ವಿಶ್ವಾಸ ಮತ್ತು ನಂಬಿಕೆಯೊಂದಿಗೆ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇವೆ. ಇದು ಚಿಲ್ಲರೆ ಮತ್ತು ವಿನಾಶಕಾರಿ ಟೀಕೆಗಳಿಗೆ ಕಾಲವಲ್ಲ, ದುರುದ್ದೇಶದ ಮತ್ತು ಇತರರನ್ನು ತೆಗಳುವ ಕಾಲವೂ ಅಲ್ಲ. ನಾವು ಸ್ವತಂತ್ರ ಭಾರತದ, ಉದಾತ್ತವಾದ, ಅದರ ಎಲ್ಲ ಮಕ್ಕಳು ವಾಸಿಸಬಹುದಾದ ಒಂದು ಸೌಧವನ್ನು  ನಿರ್ಮಿಸಬೇಕಾಗಿದೆ.

       ಗೊತ್ತು ಪಡಿಸಿದ ದಿನ ಬಂದಿದೆ-ಭವಿಷ್ಯ ಗೊತ್ತುಪಡಿಸಿದ ದಿನ. ಭಾರತ ದೀರ್ಘಕಾಲದ ಜಡನಿದ್ರೆ ಮತ್ತು ಹೋರಾಟದಿಂದ ಮತ್ತೆ ಎದ್ದು ನಿಂತಿದೆ, ಜಾಗೃತಗೊಂಡಿದೆ, ಚೈತನ್ಯ ತುಂಬಿಕೊಂಡಿದೆ, ಮುಕ್ತವಾಗಿದೆ, ಸ್ವತಂತ್ರವಾಗಿದೆ. ಗತಕಾಲ ಈಗಲೂ ನಮ್ಮನ್ನು ಸ್ವಲ್ಪ ಮಟ್ಟಿಗೆ ಆತುಕೊಂಡಿದೆ. ನಾವು ಆಗಾಗ ಕೈಗೊಂಡ ಪ್ರತಿಜ್ಞೆಗಳನ್ನು ಪೂರೈಸಲು ಬಹಳಷ್ಟು ಕೆಲಸ ಮಾಡಬೇಕಿದೆ. ಆದರೂ ನಿಣರ್ಾಯಕ ತಿರುವನ್ನು ದಾಟಿದ್ದೇವೆ. ನಮಗೆ ಚರಿತ್ರೆ ಹೊಸದಾಗಿ ಆರಂಭವಾಗಿದೆ, ನಾವು ಬದುಕು ನಡೆಸುವ, ಕ್ರಿಯೆಗಿಳಿಯುವ ಮತ್ತು ಇತರರು ಆ ಬಗ್ಗೆ ಬರೆಯಲಿರುವ ಚರಿತ್ರೆ.

ಇದೊಂದು ಭಾರತದಲ್ಲಿ ಇರುವ ನಮಗೆ, ಮತ್ತು ಎಲ್ಲ ಏಷಿಯಾ ಮತ್ತು ಪ್ರಪಂಚಕ್ಕೆ ಒಂದು ಭವಿಷ್ಯಗಭರ್ಿತ ಕ್ಷಣ. ಹೊಸದೊಂದು ತಾರೆ ಉದಯಿಸುತ್ತಿದೆ, ಪೂರ್ವದಲ್ಲಿ ಸ್ವಾತಂತ್ರ್ಯದ ತಾರೆ ಹೊಸದೊಂದು ನಿರೀಕ್ಷೆ ಅಸ್ತಿತ್ವಕ್ಕೆ ಬಂದಿದೆ. ದೀರ್ಘಕಾಲದ ಕನಸು ನನಸಾಗಿದೆ. ಆ ತಾರೆ ಎಂದೂ ಅಸ್ತಮಿಸದಿರಲಿ ಮತ್ತು ಆ ನಿರೀಕ್ಷೆ ಎಂದೂ ಹುಸಿಯಾಗದಿರಲಿ!
ಮೋಡಗಳು ನಮ್ಮನ್ನು ಆವರಿಸಿದೆ, ಬಹಳಷ್ಟು ನಮ್ಮ ಜನತೆ ಶೋಕಗ್ರಸ್ತರಾಗಿದ್ದಾರೆ ಮತ್ತು ಸಂಕಷ್ಟಗಳು ನಮ್ಮನ್ನು ಸುತ್ತುವರೆದಿವೆ. ಆದರೂ ನಾವು ಆ ಸ್ವಾತಂತ್ರ್ಯದಲ್ಲಿ ಸಂಭ್ರಮ ಪಡುತ್ತೇವೆ. ಆದರೆ ಸ್ವಾತಂತ್ರ್ಯ ಜವಾಬ್ದಾರಿಗಳನ್ನು ಮತ್ತು ಹೊರೆಗಳನ್ನು ತರುತ್ತವೆ, ನಾವು ಒಂದು ಸ್ವತಂತ್ರ ಮತ್ತು ಶಿಸ್ತಿನ ಜನತೆಯಾಗಿ ಅವನ್ನು ಎದುರಿಸಲೇ ಬೇಕಾಗಿದೆ.

ಈ ದಿನ ನಮ್ಮ ಮೊದಲ ಯೋಚನೆಗಳು ಈ ಸ್ವಾತಂತ್ರ್ಯದ ಶಿಲ್ಪಿಯ, ನಮ್ಮ ರಾಷ್ಟ್ರಪಿತನ ಕಡೆಗೆ ಹೋಗುತ್ತವೆ. ಅವರು ಭಾರತದ ಹಳೆಯ ಚೈತನ್ಯವನ್ನು ಮೈಗೂಡಿಸಿಕೊಂಡವರು, ಸ್ವಾತಂತ್ರ್ಯದ ದೀವಟಿಕೆಯನ್ನು ಎತ್ತಿ ಹಿಡಿದು ನಮ್ಮನ್ನು ಆವರಿಸಿದ್ದ ಕತ್ತಲಲ್ಲಿ ಬೆಳಕು ತೋರಿದವರು. ನಾವು ಹಲವು ಸಂದರ್ಭಗಳಲ್ಲಿ ಅವರಿಗೆ ತಕ್ಕ ಅನುವತರ್ಿಗಳಾಗಲಿಲ್ಲ, ಅವರ  ಸಂದೇಶಗಳಿಂದ ದೂರ ಸರಿದಿದ್ದೇವೆ. ಆದರೆ ನಾವು ಮಾತ್ರವಲ್ಲ, ಮುಂಬರುವ  ಪೀಳಿಗೆಗಳೂ ಈ ಸಂದೇಶವನ್ನು ನೆನಪಿಟ್ಟುಕೊಳ್ಳುತ್ತಾರೆ, ಭಾರತದ ಈ ಮಹಾನ್ ಪುತ್ರನ ಭವ್ಯ ನಂಬಿಕೆ ಮತ್ತು ಶಕ್ತಿ ಮತ್ತು ಧೈರ್ಯ ಮತ್ತು ವಿನಯ ಅವರ ಹೃದಯದಲ್ಲಿ ಅಚ್ಚಾಗಿರುತ್ತವೆ. ಆ ಸ್ವಾತಂತ್ರ್ಯದ ದೀವಟಿಗೆಯನ್ನು, ಗಾಳಿ ಎಷ್ಟೇ ಜೋರಾಗಿ ಬೀಸಿದರೂ,  ಎಂತಹ ಪ್ರಚಂಡ ಬಿರುಗಾಳಿ ಬಂದರೂ ನಾವು ಎಂದೂ ಆರಲು ಬಿಡಲಾರೆವು. 

ತದನಂತರದ ನಮ್ಮ ಯೋಚನೆಗಳು ಯಾವ ಹೊಗಳಿಕೆ ಅಥವಾ ಪುರಸ್ಕಾರವಿಲ್ಲದೇ ಸಾವು ಬರುವ ಪಯರ್ಂತವೂ ಭಾರತದ ಸೇವೆ ಮಾಡಿದ ಅನಾಮಧೇಯ ಸ್ವಯಂಸೇವಕರಿಗೆ ಮತ್ತು ಸ್ವಾತಂತ್ರ್ಯ ಯೋಧರಿಗೆ ಸಲ್ಲಬೇಕು.

ರಾಜಕೀಯ ಸೀಮೆಗಳಿಂದಾಗಿ ನಮ್ಮಿಂದ ಸಂಪರ್ಕ ಕಡಿದು ಹೋದ ಮತ್ತು ಬಂದಿರುವ ನಮ್ಮ ಸ್ವಾತಂತ್ರ್ಯವನ್ನು ಸದ್ಯಕ್ಕೆ ಹಂಚಿಕೊಳ್ಳಲಾರದ ನಮ್ಮ ಸಹೋದರ ಸಹೋದರಿಯರ ಬಗ್ಗೆಯೂ ನಾವು ಯೋಚಿಸುತ್ತೇವೆ. ಅವರು ನಮ್ಮವರು ಮತ್ತು ಏನೇ ಆದರೂ ನಮ್ಮವರೇ ಆಗಿರುತ್ತಾರೆ ಮತ್ತು ನಾವು ಅವರ ಅದೃಷ್ಟ, ದುರದೃಷ್ಟಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆ.

ಭವಿಷ್ಯ ನಮ್ಮನ್ನು ಕೈಬೀಸಿ ಕರೆಯುತ್ತಿದೆ. ನಾವು ಎತ್ತ ಹೋಗೋಣ ಮತ್ತು ನಮ್ಮ ಪ್ರಯತ್ನಗಳು ಏನಿರಬೇಕು? ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಭಾರತದ ಶ್ರೀಸಾಮಾನ್ಯರಿಗೆ, ರೈತರಿಗೆ ಮತ್ತು ಕಾಮರ್ಿಕರಿಗೆ ತರುವುದು; ಬಡತನ, ಮೌಢ್ಯ ಮತ್ತು ಅನಾರೋಗ್ಯದ ವಿರುದ್ಧ ಹೋರಾಟ ನಡೆಸುವುದು ಮತ್ತು ಅವನ್ನು ಕೊನೆಗೊಳಿಸುವುದು; ಒಂದು ಸಮೃದ್ಧ, ಪ್ರಜಾಸತ್ತಾತ್ಮಕ ಮತ್ತು ಪ್ರಗತಿಪರ ರಾಷ್ಟ್ರದ ನಿಮರ್ಾಣ; ಸಾಮಾಜಿಕ, ಆಥರ್ಿಕ ಮತ್ತು ರಾಜಕೀಯ ಸಂಸ್ಥೆಗಳ ನಿಮರ್ಾಣದ ಮುಖಾಂತರ ಪ್ರತಿಯೊಬ್ಬ ಮಹಿಳೆ ಮತ್ತು ಪುರುಷನಿಗೆ ನ್ಯಾಯ ಮತ್ತು ತುಂಬು ಜೀವನ ಲಭ್ಯವಾಗುವಂತೆ ಮಾಡುವುದು. 

ನಮ್ಮ ಮುಂದೆ ಕಠಿಣ ಕೆಲಸವಿದೆ. ನಮ್ಮ ಪ್ರತಿಜ್ಞೆಗಳನ್ನು ಈಡೇರಿಸುವ ವರೆಗೆ, ಭಾರತದ ಎಲ್ಲ ಜನತೆಯನ್ನು ಭವಿಷ್ಯ ಅವರು ಏನಾಗಬೇಕೆಂದು ಬಯಸಿದೆಯೋ ಹಾಗೆ ಮಾಡುವ ವರೆಗೆ ನಮ್ಮಲ್ಲಿ ಯಾರೊಬ್ಬರಿಗೂ ವಿಶ್ರಾಂತಿ  ಇರುವುದಿಲ್ಲ. ನಾವು ಒಂದು ದಿಟ್ಟ ಹೆಜ್ಜೆಯನ್ನಿಡುವ ಹೊಸ್ತಿಲಲ್ಲಿ ನಿಂತಿರುವ ಒಂದು ಮಹಾನ್ ರಾಷ್ಟ್ರದ ನಾಗರಿಕರು. ನಾವೆಲ್ಲರೂ, ಯಾವುದೇ ಮತಧರ್ಮಗಳಿಗೆ ಸೇರಿದ್ದರೂ ಸಮಾನ ಹಕ್ಕುಗಳು, ಸವಲತ್ತುಗಳು ಮತ್ತು ಬಾಧ್ಯತೆಗಳುಳ್ಳ ಭಾರತದ ಮಕ್ಕಳು. ನಾವು ಮತೀಯತೆಯನ್ನಾಗಲೀ, ಸಂಕುಚಿತ ಮನೋಭಾವವನ್ನಾಗಲೀ ಪ್ರೋತ್ಸಾಹಿಸುವುದಿಲ್ಲ, ಏಕೆಂದರೆ, ಯಾವ ರಾಷ್ಟ್ರದ ಜನತೆ ವಿಚಾರ ಮತ್ತು ಕ್ರಿಯೆಯಲ್ಲಿ ಸಂಕುಚಿತತೆಯನ್ನು ಹೊಂದಿರುತ್ತಾರೋ ಆ ರಾಷ್ಟ್ರ ಮಹಾನ್ ಎನಿಸಲಾರದು.

ನಾವು ಪ್ರಪಂಚದ ರಾಷ್ಟ್ರಗಳಿಗೆ ಮತ್ತು ಜನಗಳಿಗೆ ಶುಭಾಶಯಗಳನ್ನು ಕಳಿಸುತ್ತೇವೆ, ಮತ್ತು ಶಾಂತಿ, ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವವನ್ನು ಪ್ರೋತ್ಸಾಹಿಸುವಲ್ಲಿ ಸಹಕರಿಸುವ ಪ್ರತಿಜ್ಞೆ ಕೈಗೊಳ್ಳುತ್ತೇವೆ. 

ಮತ್ತು ಭಾರತಕ್ಕೆ, ನಮ್ಮ ಬಹು ನೆಚ್ಚಿನ, ಪ್ರಾಚೀನ, ಚಿರಂತನ, ಚಿರನೂತನ ತಾಯ್ನಾಡಿಗೆ ನಮ್ಮ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ ಮತ್ತು ಅದರ ಸೇವೆಯಲ್ಲಿ ಮತ್ತೊಮ್ಮೆ ತೊಡಗಲು ಬದ್ಧರಾಗುತ್ತೇವೆ.
ಜೈಹಿಂದ್