Tuesday 24 February 2015

ಮೂಲಭೂತವಾದ ಮತ್ತು ಕೋಮುವಾದ; ಮಹಿಳೆಯರ ಮುನ್ನಡೆಗೆ ನಿಯಂತ್ರಕ ಅಸ್ತ್ರಗಳು -ಯಮುನಾ ಗಾಂವ್ಕರ್

ಮೂಲಭೂತವಾದ ಮತ್ತು ಕೋಮುವಾದ; ಮಹಿಳೆಯರ ಮುನ್ನಡೆಗೆ ನಿಯಂತ್ರಕ ಅಸ್ತ್ರಗಳು
ಮೂಲಭೂತವಾದ-ಧಮರ್ಾಂಧತೆ-ಕೋಮುವಾದ ಹೆಣ್ಣಿನ ಘನತೆ ನಾಶಮಾಡುವ, ಸವರ್ಾಂಗೀಣ ಅಭ್ಯುದಯ ತಡೆಯುವ ಅಪಾಯಕಾರಿ ವಿಚಾರಗಳು. ಇವು ಒಟ್ಟಾರೆ ಮಾನವ ಸಮುದಾಯದ ಮುನ್ನಡೆಯನ್ನೇ ನಿಯಂತ್ರಿಸುವ ಅಸ್ತ್ರಗಳಾಗಿವೆ. ಇಂಥ ಅನಾಹುತಕಾರಿ ಬೆಳವಣಿಗೆಯು ದುಡಿಯುವ ವರ್ಗವನ್ನು, ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿದೆ. ಸಮಾಜದಲ್ಲಿ ಯಾವ ರೀತಿಯ ಮೌಲ್ಯಗಳು ಪ್ರವಹಿಸುತ್ತವೆಯೋ ಅದರ ಮೊದಲ ಹಾಗೂ ಅಂತಿಮ ಪರಿಣಾಮ ಮಹಿಳೆಯರ ಮೇಲೆಯೇ ಆಗುತ್ತಿದೆ. ದೇಶ-ಪ್ರದೇಶ, ಭಾಷೆ, ಧರ್ಮ-ಜಾತಿ-ಪಂಗಡ-ಪಂಥ-ಮತ-ಜನಾಂಗ ಹಾಗೂ ಗಡಿ ಗುರುತು ಮೀರಿ ಮಾನವ ಸಮುದಾಯದ ವಿಕಾಸವನ್ನು ಬಯಸುವ ವಿಶಾಲ ಆಲೋಚನೆಯ ಒಂದು ಕಾಮರ್ಿಕ ಸಂಘಟನೆಯಾಗಿ ನಾವು ಇದುವರೆಗೆ ಜಗತ್ತಿನಲ್ಲಿ ಗಮನಿಸಿದ್ದೇನು? ಎಲ್ಲಾ ಧರ್ಮಗಳಲ್ಲೂ ಮೂಲಭೂತವಾದ, ಅದರ ಮುಂದಿನ ಹಂತವಾದ ತನ್ನದೆನ್ನುವುದು ಮಾತ್ರ ಶ್ರೇಷ್ಠವೆಂಬ ದುರಂಹಂಕಾರದ ಕೋಮುವಾದ, ಅದು ಅಂತಿಮವಾಗಿ ಬೆಳೆಸುವ ಫ್ಯಾಸಿಷ್ಟ ಧೋರಣೆಯ ಮನೋಭಾವಗಳು ಇತ್ತೀಚಿನ ವಿದ್ಯಮಾನಗಳನ್ನು ಆತಂಕಕ್ಕೆ ಗುರಿಯಾಗಿಸಿವೆ.  ಇವು ಧಾಮರ್ಿಕ, ಆಥರ್ಿಕ ಸ್ವರೂಪದಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿವೆ. ಅದರ ಪರಿಣಾಮವೇ ತಾಲಿಬಾನ್ ಕೃತ್ಯ, ಪೇಶಾವರ ಘಟನೆ, ಇಸ್ರೈಲ್-ಪ್ಯಾಲಿಸ್ಟೈನ್ ದುರ್ಘಟನೆಗಳು, ಮಕ್ಕಳು-ಮಹಿಳೆಯರು, ವೃದ್ಧರು, ಸೈನಿಕರು ಎಂದು ನೋಡದೇ ಸಜೀವ ದಹನ, ಸಾಮೂಹಿಕ ಕೊಲೆ, ಯುದ್ಧಗಳು. ಭಾರತದೊಳಗೂ ಕೂಡ ಧಾಮರ್ಿಕ ಅಸಹಿಷ್ಣುತೆ ಕೆನ್ನಾಲಿಗೆ ಚಾಚಿದೆ. ಕನರ್ಾಟಕದಲ್ಲಿ ಅದರಲ್ಲಿಯೂ ಕರಾವಳಿ ಹಾಗೂ ಮಲೆನಾಡಿನಲ್ಲಿ ಹಬ್ಬಿದ ಮೂಲಭೂತವಾದಿ, ಕೋಮುವಾದಿ ಕಚ್ಚಾಟಗಳು ಜನಸಾಮಾನ್ಯರನ್ನು ಭಯಗ್ರಸ್ಥಗೊಳಿಸುತ್ತಿವೆ.
ಹಾಗಾದರೆ ಈ ಮೂಲಭೂತವಾದ-ಕೋಮುವಾದ ಅಂದರೆ ಏನು? ಇವುಗಳ ಪರಿಣಾಮ ಮಹಿಳೆಯರ ಮೇಲೆ ಹೇಗಾಗಿದೆ? ಹೇಗಾಗುತ್ತಿದೆ? ಸಮಾಜದ ಮೇಲೆ ಅದರ ಒಟ್ಟಾರೆ ಪರಿಣಾಮ ಏನು? ಎಂಬುದನ್ನು ಅರಿಯಬೇಕಿದೆ; ಅರಗಿಸಿಕೊಳ್ಳಬೇಕಿದೆ; ಮೂಲಭೂತವಾದ ಮತ್ತು ಕೋಮುವಾದಗಳೆರಡನ್ನೂ ಗೆರೆ ಎಳೆದು ವಿಭಜಿಸಲಾಗದಷ್ಟು ಒಂದಕ್ಕೊಂದು ಹಾಸುಹೊಕ್ಕಾಗಿವೆ. ಕೋಮುವಾದ ತನ್ನ ಬೆಳವಣಿಗೆಗೆ ಆಯಾ ಧರ್ಮದಲ್ಲಿರುವ ಮೂಲಭೂತವಾದದ ಅಂಶಗಳನ್ನೇ ಬಳಸಿ ಬೆಳೆಯುತ್ತ ಹೋಗುತ್ತದೆ. ಹಾಗಾಗಿ ಇವೆರಡರಿಂದಲೂ ದುಡಿಯುವ ವರ್ಗದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಹಿಮ್ಮೆಟ್ಟಿಸುವ ಮೂಲಕ ದುಡಿಯುವ ವರ್ಗದ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕಿದೆ.
ಮಹಿಳೆ ಮತ್ತು ಮೂಲಭೂತವಾದ: ಹಿರಿಯ ಚಿಂತಕರು ಹೇಳುವಂತೆ ಮೂಲಭೂತವಾದವನ್ನು ಕುರಿತು ಹೀಗೆ ಹೇಳುತ್ತಾರೆ-   ಮೂಲಭೂತವಾದವು ಯಾವುದೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನವನ್ನು ನಿರ್ಧರಿಸಲು ಧರ್ಮ ಸಂಹಿತೆ ಬೇಕೆನ್ನುತ್ತದೆ. ಇಲ್ಲಿ ಬೋಧಿಸಲಾಗುವ ಸಂಪ್ರದಾಯ, ಕಟ್ಟಳೆಗಳು ಮತ್ತು ಸಾಮಾಜಿಕ ರಚನೆಯ ಸೂತ್ರಗಳು ಮಾತ್ರವೇ ದಿವ್ಯವಾದವು, ಅದನ್ನು ಪ್ರಶ್ನಿಸುವಂತಿಲ್ಲ, ಅದೇ ಪರಮಜ್ಞಾನ, ಅಂತಿಮ ಸತ್ಯ. ಧರ್ಮ ಬೋಧಿಸಿದ್ದನ್ನು ಯಾವ ಒರೆಗಲ್ಲಿಗೂ ಹಚ್ಚಿ ಪರೀಕ್ಷಿಸಬಾರದು, ವಿಮಶರ್ಿಸಬಾರದು, ಹಾಗೆ ಮಾಡಿದರೆ ಅವರು ಧರ್ಮದ್ರೋಹಿಗಳು ಎನ್ನುತ್ತದೆ. ಅಂದರೆ ಅರ್ಥವಿಷ್ಟೇ, ಸಮಾಜದ ಚಲನೆಯನ್ನು ಸ್ಥಗಿತಗೊಳಿಸುವ ವಿಚಾರ ಇದಾಗಿದೆ. ಪ್ರಜಾಸತ್ತಾತ್ಮಕವಾದ ಯಾವ ಕ್ರಿಯೆಗಳನ್ನೂ ಮಾಡದಂತೆ ಕೈ-ಬಾಯಿ ಕಟ್ಟಿಹಾಕುವ ಜ್ಞಾನದ ಬೆಳವಣಿಗೆಯನ್ನು ಒಪ್ಪದ ಧರ್ಮಗಳು ಹೇಳಿದ್ದೇ ಅಂತಿಮ ಸತ್ಯ ಎಂದು ನಂಬಿಸಿ ಭಯದಲ್ಲಿರಿಸುವ ವಿಚಾರವಾಗಿದೆ.
ಧರ್ಮ-ಜಾತಿ-ವರ್ಗ-ವರ್ಣಗಳನ್ನು ಮೀರಿ ಹೆಣ್ಣನ್ನು ಬಾಧಿಸಬಹುದಾದ ಸಂಗತಿ ಇದ್ದರೆ ಅದು ಮೂಲಭೂತವಾದ. ಮಾತೃಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಯಾವುದೆಲ್ಲ ಗೌರವವಾಗಿ ಬಂತೋ ಅದು ತನ್ನ ನಿಜಾರ್ಥ ಕೆಳೆದುಕೊಂಡು ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಕಾಡುವ ಸಂಗತಿಗಳಾಗಿ ಪರಿಣಮಿಸಿರುವುದು ದುರಂತ. ಸಂಸ್ಕೃತಿ ಹೆಸರಿನಲ್ಲಿ ಯಾವೆಲ್ಲ ನಂಬಿಕೆಗಳು ಆಚರಣೆಗಳು ಯಾವುದೋ ಒಂದು ಸಾರ್ವತ್ರಿಕ ಕಾಲಘಟ್ಟದಲ್ಲಿ ರೂಪುಗೊಂಡವೋ ಅವುಗಳೆಲ್ಲ ಪಿತೃಪ್ರಧಾನ ಸಮಾಜದಲ್ಲಿ ಕೇವಲ ಹೆಣ್ಣಿಗೆ ಮಾತ್ರವೇ ಆರೋಪಿಸಲ್ಪಟ್ಟವು; ವೈಭವೀಕರಿಸಲ್ಪಟ್ಟವು. ಇಡೀ ಸಂಸ್ಕೃತಿಯ ರಕ್ಷಣೆ ಹೆಣ್ಣಿನ ಹೆಗಲ ಮೇಲೆ ಹಾಕಿದ ಪುರುಷ ಸಮಾಜ ತಾನು ಮಾತ್ರ ಇದರ ಆಚೆ ನಿಂತು ಸ್ವಾತಂತ್ರ್ಯವನ್ನು ಅನುಭವಿಸಿದ, ಸಮಾಜದ ಪಾಲನೆ ಹೊರುವ ಕೆಲಸದ ನೆಪದಲ್ಲಿ ಸಮಾಜವನ್ನು ತನಗೆ ಬೇಕಾದಂತೆ ನಿಯಂತ್ರಿಸುವ ಜವಾಬ್ದಾರಿಯನ್ನೂ ತನಗೆ ತಾನೇ ಪಡೆದುಕೊಂಡ. ಆಧುನಿಕತೆ ಮತ್ತು ಅದರ ಭಾಗವಾಗಿ ಬಂದ ಶಿಕ್ಷಣ ಹೆಣ್ಣಿನ ಮೇಲೆ ಆರೋಪಿಸಲ್ಪಟ್ಟಂಥ ಸಂಸ್ಕೃತಿಯ ಹಲವು ಆಚರಣೆಗಳನ್ನು ಛೇದಿಸುತ್ತದೆ ಎಂದು ಅಂದುಕೊಳ್ಳುತ್ತಿರುವಾಗಲೇ ಅದು ಹಾಗಾಗದೇ ಸಂಸ್ಕೃತಿಯ ಹೊಸ ಮಾದರಿ ಹೆಣ್ಣಿನ ಕ್ರಿಯೆಗಳನ್ನು ಮಾತ್ರ ನಿಯಂತ್ರಿಸುವ ಹೊಸ ರೂಪದಲ್ಲಿ ಜಾರಿಗೆ ಬರುತ್ತಿದೆ. ಆಧುನಿಕತೆಯು, ಹೆಣ್ಣನ್ನು ಕಾಡುವ ಅನೇಕ ಮೂಲಭೂತವಾದಿ ಆಚರಣೆಗಳನ್ನು ಆಧುನಿಕ ಮಾಧ್ಯಮದ ಮೂಲಕ ವೈಭವೀಕರಿಸುವ ನಿಟ್ಟಿನಲ್ಲಿ ಹೆಚ್ಚು ಕಾರ್ಯಪ್ರವೃತ್ತವಾಗುತ್ತಿದೆ.
ಸಂಸ್ಕೃತಿ ಎಂಬುದು ಜೀವನ ಕ್ರಮ. ಒಂದು ನಿಧರ್ಿಷ್ಟ ಕಾಲಘಟ್ಟದಲ್ಲಿ ನಿಧರ್ಿಷ್ಟ ಪ್ರದೇಶದ ವ್ಯಾಪ್ತಿಯಲ್ಲಿ ಅಥವಾ ಜನಾಂಗೀಯ ವ್ಯಾಪ್ತಿಯಲ್ಲಿರುವ ಜನಸಮುದಾಯ ರೂಢಿಸಿಕೊಂಡಿರುವ ಬದುಕಿನ ಕ್ರಮ. ಈ ಬದುಕಿನ ಕ್ರಮ ಭೂತಕಾಲದ ಜೊತೆಗೆ ಮತ್ತು ಭವಿಷ್ಯದ ಜೊತೆಗೆ ವರ್ತಮಾನವನ್ನು ಕೊಂಡಿಯಾಗಿ ಬೆಸೆಯುತ್ತದೆ. ಅದು ಅವರು ರೂಡಿಸಿಕೊಂಡು ಬಂದಿರುವ ನಂಬಿಕೆ, ಆಚರಣೆ, ಆಹಾರ ಪದ್ಧತಿ, ಉಡುಪು, ಕ್ರೀಡೆ, ಸಾಹಿತ್ಯ ಇವೆಲ್ಲವುಗಳ ಒಟ್ಟು ಮೊತ್ತ. ಈ ಎಲ್ಲವೂ ಅವರ ಬದುಕಿನ ಕ್ರಮದ ಹಿನ್ನೆಲೆಯಲ್ಲಿಯೇ ಹುಟ್ಟಿರುವುದು ಮತ್ತು ಅದೇ ಸಂದರ್ಭದಲ್ಲಿ ಅವರ ಬದುಕಿನ ಕರಮದ ಮೇಲೂ ಪರಿಣಾಮ ಬೀರಿರುತ್ತದೆ, ಬದುಕನ್ನು ನಿಧರಿಸುತ್ತಾ ಹೋಗುತ್ತದೆ. ಹೀಗೆ ರೂಪುಗೊಂಡ ಯೋಚನಾ ಕ್ರಮ ಆಯಾ ಕಾಲಕ್ಕೆ ಸ್ಪಂದಿಸುತ್ತಾ ಆ ಕಾಲದ ಮೌಲ್ಯಗಳನ್ನು ರೂಢಿಸಿಕೊಳ್ಳುತ್ತಾ ಮುಂದುವರಿಯುತ್ತದೆ. ಈ ಹಂತದಲ್ಲಿ ಯಾವುದು 'ಚನಲಶೀಲವಾಗಿರುತ್ತದೋ' ಅದು ಸಂಸ್ಕೃತಿ. ಈ ಆಲೋಚನಾ ಕ್ರಮದಲ್ಲಿ ಯಾವುದು ಸ್ಥಗಿತವಾಗುತ್ತದೋ ಅದು ಮೂಲಭೂತವಾದ ಎನಿಸಿಕೊಳ್ಳುತ್ತದೆ.
ಹಿಂದೂ ಮೂಲಭೂತವಾದ ಭಾರತದ ಇಡೀ ಸಮಾಜವನ್ನೇ ಆಪೋಷಣ ತೆಗೆದುಕೊಳ್ಳುವಷ್ಟು ಬೆಳೆದಿದೆ. ಇದಕ್ಕೆ ಪ್ರತಿಯಾಗಿ ಅಲ್ಪಸಂಖ್ಯಾತ ಮೂಲಭೂತವಾದ ಬೆಳೆಯಲು ಇನ್ನಷ್ಟು ಉಗ್ರವಾಗಲು ಕಾರಣವಾಗುತ್ತದೆ.
ಹಾಗಾಗಿ ಜಾತಿ, ಕೋಮುವಾದ, ಧರ್ಮ-ಧರ್ಮದ ಘರ್ಷಣೆ ಇವುಗಳನ್ನು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಬೇಕು. ಉದಾ: ಒಂದೆಡೆ ಹಿಂದೂ ಸಮಾಜೋತ್ಸವ ನಡೆಯುತ್ತಲೇ ಅದರಲ್ಲಿ ಹೊಮ್ಮುವ ಅನ್ಯರ ಬಗೆಗಿನ ಧೋರಣೆ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ವಾತಾವರಣ ನಿಮರ್ಿಸುತ್ತದೆ. ಅವರು ಇನ್ನಷ್ಟು ಸಂಕುಚಿತಗೊಳ್ಳುತ್ತಾ ಹೋಗಲು ಕಾರಣವಾಗುತ್ತದೆ.  ಅಲ್ಪಸಂಖ್ಯಾತರಲ್ಲಿ ಮೂಲಭೂತವಾದದ ಸ್ವರೂಪವನ್ನು ಬುಖರ್ಾ ತೊಡುವ ಕ್ರಮದಲ್ಲಿ, ತಲಾಖ್ ಕೊಡುವಲ್ಲಿ, ಜಿಹಾದ್ನಲ್ಲಿ, ಹೆಣ್ಣನ್ನು ಹೊರಹೋಗಲು ಬಿಡದ ಪದ್ಧತಿಯಲ್ಲಿ, ವೈಜ್ಞಾನಿಕ ಶಿಕ್ಷಣ ಕೊಡಿಸಲು ಹೊಂದೇಟು ಹಾಕುವುದರಲ್ಲಿ  ಕಾಣಬಹುದು.
ಹಿಂದೂ ಮೂಲಭೂತವಾದದ ಸ್ವರೂಪವನ್ನು ವಿವಿಧ ವೃತಾಚರಣೆ ಮಾಡಿಸುವದರಲ್ಲಿ, ಮಠಗಳ, ಪುರೋಹಿತರ ಶಾಸ್ತ್ರಪದ್ಧತಿಗಳಲ್ಲಿ,  ಹಬ್ಬಹರಿದಿನಗಳಲ್ಲಿ ಮಾಡಿಸುವ ಅರ್ಥವಿಲ್ಲದ ಆಚರಣೆಗಳಲ್ಲಿ,  ಪರದಾ ಪದ್ಧತಿ, ವಿಧವಾ ವಿವಾಹಕ್ಕೆ ಸಮ್ಮತಿಸದಿರುವುದರಲ್ಲಿ, ವಾಸ್ತವಿಕ ಆಸ್ತಿಹಕ್ಕಿನ ನಿರಾಕರಣೆಯಲ್ಲಿ, ಇನ್ನೂ ಬಾಲ್ಯವಿವಾಹ ಹಾಗೂ ಕೇಶ ಮುಂಡನ ಜೀವಂತವಿರುವುದರಲ್ಲಿ ಕಾಣಬಹುದಾಗಿದೆ. ಮಡೆಮಡೆಸ್ನಾನ, ಫಲಜ್ಯೋತಿಷ್ಯ, ಶಾಸ್ತ್ರ ಹೇಳಿತೆಂಬ ಕಾರಣದಿಂದ ಹೆಣ್ಣನ್ನು ವಸ್ತುವಾಗಿ ಕಾಣುವುದು, ಎರಡನೇ ದಜರ್ೆಯಲ್ಲಿ ಕಾಣುವುದು ಮತ್ತು ಅಂಥ ಆಚರಣೆಗಳು....
ಹೆಣ್ಣು ಗಂಡಿನ ಆಸ್ತಿ ಎಂದು ಪರಿಗಣಿಸಿರುವುದರಿಂದ ಗಂಡ ಸತ್ತರೆ ಸತಿಸಹಗಮನ ಪದ್ಧತಿ ಇತ್ತು. ಆದರೆ ಹೆಂಡತಿ ಸತ್ತರೆ ಗಂಡನಿಗೆ ಯಾವುದೇ ಕಟ್ಟಳೆಗಳೇ ಇಲ್ಲದೇ ಇರುವುದು ಈ ಮೂಲಭೂತವಾದ ಹೆಣ್ಣನ್ನು ಎಷ್ಟು ಗುರಿಯಾಗಿಸಿದೆ ಎಂಬುದನ್ನು ತೋರಿಸುತ್ತದೆ. ಸಮಾಜದಲ್ಲಿ ಬೇರೂರಿರುವ ಪಾಳೆಗಾರಿತನದಿಂದಾಗಿ ಹೆಣ್ಣು ಗಂಡಿನ ಆಸ್ತಿಯಾಗಿಸಿ, ಆಕೆ ಆಭರಣ ಪ್ರಿಯೆ ಎಂದು ನಂಬಿಸಿ, ಸೌಂದರ್ಯವೇ ಭೂಷಣವೆಂದು, ಮಕ್ಕಳಿಲ್ಲದ ಬಾಳು ಯಾತಕ್ಕೆಂದು ಬಂಜೆತನಕ್ಕೆ ಹೆಣ್ಣನ್ನೇ ಗುರಿಯಾಗಿಸಿದ್ದು ಇಂದಿನ ವಿಜ್ಞಾನ ಬೆಳವಣಿಗೆ ಹಾಗೂ ಆಧುನಿಕ ಶಿಕ್ಷಣದ ನಂತರವೂ ಮುಂದುವರಿದಿದೆ. ಹಾಗಾಗಿಯೇ ಆಸಾರಾಂ ಬಾಪುರಂಥ ದೇವಮಾನವರು, ಮಠಗಳ ಅಧಿಕಾರ ಬಳಸಿ, ದೈವಿಕ ಸ್ವರೂಪದಲ್ಲಿ ತಾನಿರುವೆನೆಂದು ಹೇಳಿ ಅತ್ಯಾಚಾರ ಮಾಡುವವರನ್ನು, ಸಹೋದ್ಯೋಗಿಯ ಮೇಲೆ ಬಲಾತ್ಕಾರ ಮಾಡುವ, ಲೈಂಗಿಕ ಹಿಂಸೆ ನೀಡುವವರನ್ನು, ತನ್ನ ವಿದ್ಯಾಥರ್ಿನಿ ಎಂಬ ಅರಿವೂ ಇಲ್ಲದಂತೆ ಶಿಕ್ಷಕನೋರ್ವ ಅತ್ಯಾಚಾರ ಎಸಗುವ, ದುಡಿಯುವ ಪ್ರದೇಶದಲ್ಲಿ ಮೇಲಾಧಿಕಾರಿಗಳೇ ದೌರ್ಜನ್ಯ ಎಸಗುವಂಥ ಭೀಕರತೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತೇವೆ.
ಹೆಣ್ಣು ಹೆಚ್ಚು ಓದುವ, ಹೊರಗೆ ದುಡಿಯುವ ಸಮಾನತೆ ಬಯಸುವ, ಅಧಿಕಾರ ಪಡೆಯುವ ಯಾವೂದೂ ಮೂಲಭೂತವಾದಿಗಳಿಗೆ ಹಿಡಿಸುವುದಿಲ್ಲ. ಗಂಡು ದರ್ಪಕ್ಕೆ ಹೆಣ್ಣು ಗುರಾಣಿ ಅಥವಾ ಬಲಿಪಶುವಾಗಿ ಮಾತ್ರ ಬಳಕೆಯಾಗುತ್ತದೆ. ಈ ಅಪಾಯವನ್ನು ನಮ್ಮ ಸಮಾಜ ಅರಿಯುವುದು ಯಾವಾಗ?
ಪುರಾಣಗಳಲ್ಲಿ ಪಾತಿವ್ರತ್ಯದ ಕಲ್ಪನೆಯನ್ನು ಚಚರ್ಿಸುವಿದಾದರೆ, ಉದಾ: ಇಂದ್ರನಿಂದ ಮೋಸಹೋದ ಅಹಲ್ಯೆಯು ಶಾಪಗ್ರಸ್ತೆಯಾಗಿ ಕಲ್ಲಾಗುತ್ತಾಳೆಯೇ ಹೊರತೂ ಮೋಸಗೊಳಿಸಿದವನಿಗೆ ಏನೂ ಆಗದು. ಹಾಗೇ ಸೀತೆಯಲ್ಲಿ ಮಾತ್ರ ಶೀಲ ಶಂಕೆ. ಹೀಗೆ ಮೂಲಭೂತವಾದ ಪ್ರತಿಷ್ಠಾಪಿಲು ಪುರಾಣ, ಮಹಾಕಾವ್ಯ ಇತ್ಯಾದಿಗಳನ್ನು ಬಳಸಿಕೊಳ್ಳಲಾಗುತ್ತದೆ.
ಪ್ರಾರಂಭದಿಂದಲೂ ಮೂಲಭೂತವಾದ ಹೆಣ್ಣನ್ನು ನಿಷ್ಕ್ರಿಯಗೊಳಿಸುತ್ತ ಬಂದಿದೆ, ಅಸ್ಥಿರಗೊಳಿಸುತ್ತಾ ಬಂದಿದೆ. ಸಮಾಜ ನಿಯಂತ್ರಿಸುವ ನೆಪದಲ್ಲಿ ಕಾನೂನುಗಳೆಲ್ಲವನ್ನೂ ಹೆಣ್ಣು ಮತ್ತು ಕೆಳಜಾತಿಯವರನ್ನು ಕೇಂದ್ರೀಕರಿಸಿಯೇ ಮಾಡಲಾಯಿತು. ಗಾದೆಗಳೂ ಹಾಗೇ ಸೃಷ್ಟಿಯಾದವು. ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ, ಹೆಣ್ಣಿಗೆ ಹೆಣ್ಣೇ ಶತ್ರು, ಸ್ತ್ರೀ ಬುದ್ಧಿ ಪ್ರಳಯಾಂತಿಕಾ, ಇತ್ಯಾದಿ. ಹಾಗೇ ಹೆಣ್ಣು ಸಮಾಜದ ಕಣ್ಣು ಎನ್ನುತ್ತಲೇ ಎಲ್ಲಾ ಧರ್ಮದಲ್ಲೂ, ಜಾತಿಯಲ್ಲೂ ಮನೆಯಲ್ಲಿ ಕೊನೆಯ ಊಟ ಮಹಿಳೆಯರದ್ದೆ; ಗಂಡು ಶ್ರೇಷ್ಟ, ಆತನೇ ಕುಟುಂಬದ ಯಜಮಾನ ಎಂಬ ಕಾರಣಕ್ಕೆ. ಅತಿ ಹೆಚ್ಚು ಅಪೌಷ್ಟಿಕತೆ ಇರುವುದೂ ಕೂಡ ಮಹಿಳೆಯರಿಗೆಯೇ.  
ಹಾಗಾಗಿ ಮಾನವ ಕುಲದ ಘನತೆಯನ್ನೇ ನಾಶಮಾಡುವ, ತಲೆತಲಾಂತರದ ವರೆಗೆ ದ್ವೇಷವನ್ನೇ ಉಸಿರಾಡುವ, ಮೂಲಭೂತವಾದ ಮಹಿಳೆಯರನ್ನು ಎಂದಿಗೂ ಗೌರವಿಸದು. ಅದು ಮಹಿಳೆಯರನ್ನು ಕೇವಲ ಗಂಡು ಮ್ಕಕಳನ್ನು ಹೆರುವ ಸಾಧನವಾಗಿ ಮಾತ್ರ ನೋಡುತ್ತದೆ. ಅತ್ಯಾಚಾರ, ಬಲಾತ್ಕಾರ, ಸಾಂಸ್ಕೃತಿಕ ಆಕ್ರಮಣಗಳು ನಡೆದಾಗ ಅದು ಅತ್ಯಂತ ಸಹಜ ಎಂಬಂತೆ ಪರಿಗಣಿಸುತ್ತದೆ. ದೇವಮಾನವರು, ಮಠಾಧೀಶರು, ಎಲ್ಲಾ ಧರ್ಮಗಳ ಪುರೋಹಿತರು, ಧನವಂತರು, ಮಹಿಳೆಯರಿಗೆ ಮಾತ್ರ ಪಾವಿತ್ರ್ಯದಿಂದಿರಬೇಕೆಂದು ಉಪದೇಶಿಸುತ್ತಾರೆ, ವಾದ ಮಂಡಿಸುತ್ತಾರೆ. ಇವರು ಪ್ರತಿಪಾದಿಸುವ ಹೆಣ್ಣಿನ ಶೀಲ ಮತ್ತು ಪಾವಿತ್ರ್ಯವನ್ನು ಕೆಡಿಸುವ ವಿಕೃತ ಮನಸ್ಸಿನ ಪುರುಷರಿಗೆ ಇವರ ಉಪದೇಶಾಮೃತ ಇಲ್ಲ. ಹಾಗೇನಾದರೂ ಬಲಾತ್ಕಾರಕ್ಕೆ ಬಂದ್ರೆ 'ಅಣ್ಣಾ ಎಂದು ಕೂಗು, ಪ್ರತಿಭಟಿಸಲಾಗದಿದ್ದರೆ ಕಣ್ಣುಮುಚ್ಚಿ ಸುಮ್ಮನೆ ಅನುಭವಿಸು, ತಾಯತ ಕಟ್ಟಿಸಿಕೋ, ಮಠ-ದೇವಸ್ಥಾನಕ್ಕೆ ಹರಕೆ ಹೊತ್ತುಕೋ, ಭವಿಷ್ಯ ಹೇಳುವವರಿಗೆ ಶರಣಾಗು, ನೀನುಟ್ಟ ಉಡುಪು ಆತನಿಗೆ ಕಾಮೋದ್ರೇಕಿಸಿತು, ನೀನು ನೀತಿಗೆಟ್ಟವಳು; ನಿನಗೆ ಸಂಸ್ಕೃತಿ ಇಲ್ಲ,' ಇತ್ಯಾದಿ ಹೆಣ್ಣಿಗೇ ತಿರುಗುಬಾಣ!
ಹೀಗೆ ಹೆಣ್ಣಿನ ಕುರಿತ ಮೂಲಭೂತವಾದಿ ದೃಷ್ಟಿಕೋನ. ಅವಳ ಜನನಾಂಗದ  ಮೇಲೆ ಮಾತ್ರ ಶೀಲ, ಸಂಸ್ಕೃತಿ ಪ್ರತಿಪಾದಿಸುವ ಮೂಲಭೂತವಾದಿಗಳು ತಮ್ಮಂತೆ ಅವಳಿಗೊಂದು ಸ್ವತಂತ್ರ ಸ್ಥಾನಮಾನ ವ್ಯಕ್ತಿತ್ವವಿದೆ ಎಂದು ಅದನ್ನು ತಾನು ರಕ್ಷಿಸಬೇಕೆಂದು ಹೇಳುವುದಿಲ್ಲ. ಇಂಥವರಿಗೆ ಹೆದರಿಕೊಂಡು ಇರುವುದರಿಂದಲೇ, ಹೆಣ್ಣಿನ ಕುರಿತು ಸತ್ಯ ಹೇಳುವ ಅವಳನ್ನು ಮನುಷ್ಯರಂತೆ ಕಾಣುವ ಚಿಂತನೆಗಳು ತೀರ ವಿರಳವಾಗಿವೆ.

ಮಹಿಳೆ ಮತ್ತು ಕೋಮುವಾದ: ಆಧುನಿಕ ಭಾರತದ ಅತ್ಯಂತ ಅಪಾಯಕಾರಿ ವಿದ್ಯಮಾನವಾಗಿರುವ 'ಕೋಮುವಾದ'ವು ಸಂಸ್ಕೃತಿಯ ಬಹುಮುಖಿತ್ವವನ್ನು ತಿರಸ್ಕರಿಸಿ, ಸನಾತನ ಏಕಮುಖಿ ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ. ಹಾಗೆ ಪ್ರತಿಪಾದಿಸಲು, ಪ್ರತಿಷ್ಠಾಪಿಸಲು ರೂಪುಗೊಳ್ಳುತ್ತಿರುವ ಒಂದು ತಾತ್ವಿಕ ಚಚರ್ೆಯಾಗಿದೆ. ಹಲವು ಕ್ಷೇತ್ರಗಳಲ್ಲಿ ನೆಲೆ ನಿಂತಿರುವ ಪ್ರಜಾಸತ್ತಾತ್ಮಕ ಆಲೋಚನಾ ಕ್ರಮ ಮತ್ತು ಸೌಹಾರ್ದನೆಲೆಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ, ಪೂವರ್ಾಗ್ರಹಪೀಡಿತವಾದ ವಾದ ಸರಣಿಯನ್ನೆ ಮುಂದಿಡುತ್ತದೆ. ಹಿಂದೂ ಸಂಸ್ಕೃತಿ, ಇಸ್ಲಾಂ ಸಂಸ್ಕೃತಿ, ಸಾಂಸ್ಕೃತಿಕ ಪಾವಿತ್ರ್ಯತೆ, ದೇಶಾಭಿಮಾನ, ಭಾರತೀಯ ಸಂಸ್ಕೃತಿ ಮುಂತಾದ ಪರಿಕಲ್ಪನೆಗಳನ್ನು ಸಂಕುಚಿತಗೊಳಿಸಿ, ಅದಕ್ಕೆ ಭಾವನಾತ್ಮಕ ಚೌಕಟ್ಟನ್ನು ಕೊಡುತ್ತದೆ.
ಹಿರಿಯ ಚಿಂತಕ ಐಜಾಜ್ ಅಹ್ಮದ್ ಹೇಳುವಂತೆ, ಕೋಮುವಾದವು ಊಳಿಗಮಾನ್ಯ-ವಸಾಹತುಶಾಹಿ ಹಿನ್ನೆಲೆಯ ಮತ್ತು ಬಂಡವಾಳಶಾಹಿ ಬೆಳವಣಿಗೆಯ ಒಂದು ನಿದರ್ಿಷ್ಟ ಹಂತದಲ್ಲಿರುವ ಸಮಾಜವೊಂದರ ರಾಜಕಾರಣದ ಅವಿಭಾಜ್ಯ ಅಂಗ.
 ಇನ್ನೋರ್ವ ಸಮಾಜ ಚಿಂತಕ ಕೆ.ಎನ್.ಫಣಿಕ್ಕರ್ ಗುರುತಿಸಿದಂತೆ, ಇಂದು ಕೋಮುವಾದವು ಸಾಮಾಜಿಕ-ರಾಜಕೀಯ ವಲಯಗಳಲ್ಲಿ ಹರಡಿಕೊಂಡಿದ್ದು. ಅದು ಎರಡು ಪರಸ್ಪರ ಸಂಬಂಧವುಳ್ಳ ಕೇಂದ್ರ ಅಂಶಗಳ ಮೇಲೆ ಅವಲಂಬಿಸಿದೆ. ಮೊದಲನೇಯದು ಒಂದು ಸಮಾಜದಲ್ಲಿರುವ ಮತೀಯ ಪ್ರಜ್ಞೆಯಾದರೆ ಎರಡನೇಯದು ರಾಜಕೀಯ ಲಾಭಕ್ಕಾಗಿ ಕೋಮುವಾದವನ್ನು ಶಸ್ತ್ರವನ್ನಾಗಿ ಬಳಸುವುದು.
ಕೋಮುವಾದ ಮತ್ತು ಮತೀಯವಾದದ ಉಗಮ ಮತ್ತು ಬೆಳವಣಿಗೆಯನ್ನು ಸದ್ಯದ ಆಥರ್ಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಹಿನ್ನೆಯಲ್ಲಿ ಅರ್ಥಮಾಡಿಕೊಳ್ಳುವುದು ಹೆಚ್ಚು ಸೂಕ್ತವಾದುದು. ಆಳುವ ವರ್ಗವು ಅನುಸರಿಸುವ ನೀತಿಗೂ ಮತ್ತು ಕೋಮುವಾದ ಹುಟ್ಟಿಸುವ ಹಿಂಸೆಗೂ ಇರುವ ಸಂಬಂಧವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಬೇಕಾಗಿದೆ.
- ಶೋಷಕ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಜನರನ್ನು ಮತ-ಧರ್ಮದ ಆದಾರದಲ್ಲಿ ಯಾವ ರಾಜೀಯ ಸಿದ್ಧಾಂತವು ವಿಭಜಿಸುತ್ತದೋ ಅದು ಪ್ರತಿಗಾಮಿಯಾಗಿರುತ್ತದೆ.
- ಯಾವತ್ತು ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯು ಎಲ್ಲಾ ಬಗೆಯ ವಿಚ್ಛಿದ್ರಕಾರಕ ಶಕ್ತಿಗಳನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತದೆ. ಇದರಲ್ಲಿ ಕೋಮುವಾದ ಸಮರ್ಥ ಅಸ್ತ್ರವಾಗಿದೆ. ಸಂಸದೀಯ ಪ್ರಜಾಸತ್ತೆ ತರಲು ಕಾರಣವಾದ ಬಂಡಾವಾಳಶಾಹಿಯು ಇಂದು ಆ ಆಶಯಗಳನ್ನು ದುರ್ಬಲಗೊಳಿಸಿ, ಸವರ್ಾಧಿಕಾರ ತರಲು ಪ್ರಯತ್ನಿಸುತ್ತಿದೆ. ಕೋಮುವಾದಿ ವೈಚಾರಿಕತೆಯು ಜನಾಂಗೀಯ ಸವರ್ಾಧಿಕಾರವನ್ನು ಆಯ್ದುಕೊಳ್ಳುತ್ತದೆ. ಭಾರತದ ಕೋಮುವಾದಿಗಳು ಹಿಂದುತ್ವದ ಶ್ರೇಷ್ಠತೆಯನ್ನು ಸಾಧಿಸಲು ರಾಜಕೀಯ ಪ್ರಭುತ್ವದ ಕಡೆ ಮುಖ ಮಾಡಿವೆ.
- ಕೋಮುವಾದಿಗಳು ಸುಲಭವಾಗಿ ಬಳಸುವುದು ಭಾವನಾತ್ಮಕ ವಿಷಯಗಳನ್ನೇ. ಉದಾ: ರಾಮಮಂದಿರ ನಿಮರ್ಾಣ, ಭಯೋತ್ಪಾದನೆ, ಪಾಕಿಸ್ತಾನದ ವಿಷಯ, ಬಲವಂತದ ಸಮಾನ ನಾಗರಿಕ ಸಂಹಿತೆ, ಇತ್ತೀಚೆಗೆ ಸಾಚಾರ ಸಮಿತಿ ವರದಿಯ ವಿರುದ್ಧದ ಆರೋಪ, ಹಿಂದುತ್ವ, ಮೂಢನಂಬಿಕೆಗಳ ಪ್ರಚಾರ, ದೇವರು-ಧರ್ಮ, ಹೀಗೆ ಕೋಮುವಾದಿ ರಾಜಕೀಯ ಸಿದ್ಧಾಂತವು ಜನರ ಭಾವನೆಗಳನ್ನೇ ಪ್ರಧಾನ ಬಂಡವಾಳವಾಗಿಸಿಕೊಳ್ಳುತ್ತದೆ. ಇದಕ್ಕೆ ಮಾನವೀಯ ಮುಖವೇ ಇಲ್ಲ.
- ಕೋಮುವಾದವು ಭಾರತದ ಬಹುಸಂಸ್ಕೃತಿಯನ್ನು ನಿರಾಕರಿಸುತ್ತದೆ. ಹಿಂದೂ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಹೇರುತ್ತದೆ. ಹೀಗೆ ಹೇರುವಾಗ ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ಧರ್ಮಗಳು ಹಿಂದುತ್ವದ ಅಡಿಯಾಳಾಗಿರಬೇಕೆಂದೂ ಹೇಳುತ್ತದೆ. ಒಟ್ಟಿನಲ್ಲಿ ಕೋಮುವಾದ ಪ್ರಜಾಪ್ರಭುತ್ವದ ವಿರೋದಿಯಾಗಿದೆ.
- ಜಾಗತಿಕರಣ ಮತ್ತು ಉದಾರಿಕರಣದ ಕುರಿತು ಬೆಳೆಯುತ್ತಿರುವ ವ್ಯಾಪಕ ಅಸಂತೃಪ್ತಿ ಮತ್ತು ಅಸಮಾನತೆ ಹಾಗೂ ನಿರುದ್ಯೋಗ ಅಪಾಯಕಾರಿಯಾಗಿ ಬೆಳೆದಿವೆ. ಇದರಿಂದ ಕೋಮುವಾದಿ-ವಿಚ್ಛಿದ್ರಕಾರಿ ಶಕ್ತಿಗಳಿಗೆ ಸಕರ್ಾರದ ತಪ್ಪು ಆಥರ್ಿಕ ನೀತಿಗಳು ಫಲವತ್ತಾದ ಭೂಮಿಕೆಯನ್ನು ಸಿದ್ಧಪಡಿಸಿದಂತಾಗಿದೆ.
- ಕೋಮುವಾದ-ಭಯೋತ್ಪಾದನೆ- ಮೂಲಭೂತವಾದ ಇವು ಪರಸ್ಪರರನ್ನು ಬೆಳೆಸುತ್ತವೆ: ಪೋಷಿಸುತ್ತವೆ. ಆದರೆ ಈ ಮೂರು ವಿಷಯಗಳ ವಿರುದ್ಧವೂ ಜಾಗೃತರಾಗಿರಬೇಕಾದುದು ದುಡಿಯುವ ವರ್ಗದ ಪ್ರಧಾನ ಕೆಲಸವಾಗಬೇಕು. ಏಕೆಂದರೆ ಈ ಎರಡು ದಶಕಗಳಲ್ಲಿ ಆರ್.ಎಸ್.ಎಸ್.ನ ರಾಜಕೀಯ ಮುಖವಾಡ ಬಿ.ಜೆ.ಪಿ.ಯ ಮಾನವ ವಿರೋಧಿ ತಂತ್ರಗಾರಿಕೆ ಜಗಜ್ಜಾಹೀರಾಗಿದೆ. ಉದಾ: 1990ರ ರಥಯಾತ್ರೆಯ ಸಂದರ್ಭದಲ್ಲಿ ಅಹಮದಾಬಾದ್ನಲ್ಲಿ ಭಾರೀ ಹಿಂಸಾಚಾರ ನಡೆಸಲಾಯಿತು, ತದ ನಂತರ ಗುಜರಾತಿನಲ್ಲಿ ಹರಿಬಿಟ್ಟ ನರಮೇಧವು ಆಕ್ರಮಣಕಾರಿ ಕೋಮುವಾದಿ ಸಿದ್ಧಾಂತದ ತುತ್ತತುದಿಯಾದ ಫ್ಯಾಸಿಸ್ಟ ದಬ್ಬಾಳಿಕೆಯಾಗಿತ್ತು. ಓರಿಸ್ಸಾದಲ್ಲಿ ಚುನಾವಣೆ ಸಮೀಪಿಸಿದಾಗ 2008ರಲ್ಲಿ ನಡೆಸಲಾದ ವ್ಯಾಪಕ ಕೋಮುಹಿಂಸಾಚಾರ, ಅದಕ್ಕೂ ಮೊದಲು ಗ್ರಹಾಂಸ್ಟ್ಯೆನ್ನ ಜೀವಂತ ದಹನ, ಕನರ್ಾಟಕದಲ್ಲಿ ಅಧಿಕಾರಕ್ಕೆ ಏರುವ ಮುನ್ನ ಮತ್ತು ನಂತರ ವಿವಿಧೆಡೆ ನಡೆಸಿದ ಚಚರ್ು-ಮಸೀದಿಗಳ ಮೇಲಿನ ದಾಳಿ, ಅನ್ಯಧಮರ್ೀಯರನ್ನು ಮದುವೆಯಾಗದಂತೆ, ಮಾತಾಡದಂತೆ ಮಾಡುವ ಅಪರಾಧಿಕ ಆಕ್ರಮಣಗಳು ನಡೆದಿವೆ. ಮಹಾರಾಷ್ಟ್ರವನ್ನು ತಲ್ಲಣಗೊಳಿಸಿದ 1992-93ರ ಘಟನಾವಳಿಗಳ ನಂತರ ಇಂದಿಗೂ ಕೋಮುಹಿಂಸಾಚಾರದ ಮುಂದುವರಿಕೆ, ಮಧ್ಯಪ್ರದೇಶದ ಆದಿವಾಸಿ ಪ್ರದೇಶದ ಕ್ರಿಶ್ಚಿಯನ್ರ ಮೇಲೆ ಹಿಂಸಾತ್ಮಕ ದಾಳಿ, ಓರಿಸ್ಸಾದಲ್ಲಿ ಮತಾಂತರಗೊಂಡ ದಲಿತರು ಪುನಃ ಹಿಂದೂಧರ್ಮಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಏಳು ದಲಿತ ಮಹಿಳೆಯರ ತಲೆ ಬೋಳಿಸಿದ್ದು, ಗುಜರಾತಿನಲ್ಲಿ ಗಭರ್ಿಣಿ ಸ್ತ್ರೀಯ ಹೊಟ್ಟೆಯನ್ನು ತ್ರಿಶೂಲದಿಂದ ಸೀಳಿ, ಬ್ರೂಣವನ್ನು ಬೆಂಕಿಗೆ ಎಸೆದದ್ದು ಹೀಗೆ ಕೋಮುವಾದದ ನೀಚ ಕೃತ್ಯಗಳು ಹೆಚ್ಚುತ್ತಲೇ ಇವೆ. ಈಬಾರಿ ಅಧಿಕಾರಕ್ಕೆ ಬಂದ ನಂತರ 'ಘರ್ ವಾಪಸಿ' ಎಂಬ ಹೆಸರಿನಲ್ಲಿ ಮರುಮತಾಂತರ ಕ್ರಿಯೆಗಳು.
- ಸಾಂಸ್ಕೃತಿಕ ರಂಗದಲ್ಲಿ ಪ್ರಗತಿಪರ ಸಿನೇಮಾ, ನಾಟಕ, ಚಿತ್ರಕಲಾವಿದರ ಮೇಲೆ ಕ್ರೀಡಾಪಟುಗಳ ಮೇಲೆ ದೈಹಿಕ ದಾಳಿ ನಡೆಸಿದ್ದೂ ಇದೆ.

ದುಡಿಯುವ ಜನರ ಮೇಲೆ ಕೋಮುವಾದದ ಅಪಾಯಗಳು.
- ಭಾರತದ ಸವರ್ಾಂಗೀಣ ಪ್ರಗತಿಗೆ, ಅಭಿವೃದ್ಧಿಗೆ ಮತ್ತು ಪ್ರಜಾಪ್ರಭುತ್ವದ ಪಾವಿತ್ರ್ಯತೆಗೆ ಅತ್ಯಂತ ಕಂಟಕಪ್ರಾಯವಾದುದು ಈ ಕೋಮುವಾದ. ಇದು ಸೌಹಾರ್ದತೆ ಮತ್ತು ಜನತೆಯ ಐಕ್ಯತೆಯನ್ನು ಛಿದ್ರಗೊಳಿಸುತ್ತದೆ. ದುಡಿಯುವ ವರ್ಗದ ವಿಭಿನ್ನ ವಿಭಾಗಗಳಲ್ಲಿ ಕೋಮುವಿಷಬೀಜ ನುಸುಳುತ್ತಿದೆ.
- ಕೋಮುವಾದ-ಜಾತಿವಾದ-ಮುಲಭೂತವಾದ ಮತ್ತು ಭಯೋತ್ಪಾನೆಗಳು ಸಮಾಜದ ಧನಾತ್ಮಕ ವಿಕಾಸವನ್ನು ತಡೆಯುವುದರಲ್ಲಿ ತೊಡಗಿಕೊಂಡಿರುತ್ತವೆ.
- ಭಾರತದ ಪ್ರತಿಯೊಂದು ಸಮಸ್ಯೆಗೂ ಅಲ್ಪಸಂಖ್ಯಾರೇ ಕಾರಣವೆಂದು, ಮುಸ್ಲಿಂರನ್ನು ಖಳನಾಯಕರನ್ನಾಗಿ ಚಿತ್ರಿಸಲಾಗುತ್ತದೆ. ಇತಿಹಾಸದ ಸತ್ಯಾಂಶಗಳನ್ನು ಸಮತೋಲನವನ್ನು ಮುರಿದು, ತಿರುಚಿದ ಇತಿಹಾಸ ಬರೆದು, ಅನ್ಯಧಾಮರ್ಿಕತೆಯ ಕುರಿತು ದ್ವೇಷ ಹುಟ್ಟಿಸಲು ಪ್ರಾಥಮಿಕ ಶಾಲೆ ಹಂತದಲ್ಲೇ ಮುಂದಾಗುತ್ತದೆ. ಉದಾ: ಬಿ.ಜಿ.ಪಿ. ನೇತೃತ್ವದ ಎನ್.ಡಿ.ಎ.ಕೂಟ ಈ ಹಿಂದೆ ಕೇಂದ್ರ ಸಕರ್ಾರ ನಡೆಸಿದಾಗ ಪ್ರಾಥಮಿಕ ಶಾಲೆಗಳಲ್ಲಿ ವಿಷಯುಕ್ತ ವಿಚಾರಗಳ ಪಠ್ಯಕ್ರಮ ಸೇರಿಸಿದ್ದನ್ನು ನೋಡಿದ್ದೇವೆ. ಈಗಲೂ ಅದೇ ಕೆಲಸ ಮುಂದುವರಿದಿದೆ.
- ಕೋಮುವಾದವು ಮಹಿಳೆಯರನ್ನು ಸ್ವತಂತ್ರ ನಾಗರಿಕರಾಗಿ ಬದುಕಲು ಬಿಡದು ಮಾತ್ರವಲ್ಲ ದುಡಿಯುವ ಹಕ್ಕನ್ನು ಕೇಳದಂತೆ, ದುಡಿತಕ್ಕೆ ಪ್ರತಿಫಲ ಕೇಳದಂತೆ ಮಾಡುತ್ತದೆ.
- ಸಾಮಾಜಿಕ ಪ್ರಗತಿಗಾಗಿ ಮತ-ಧರ್ಮ, ವರ್ಗಭೇದ ಮರೆತು ಒಂದಾಗಿ ಕೆಲಸ ಮಾಡುವ ದುಡಿಯುವ ಮಹಿಳೆಯರಲ್ಲಿ ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯ ಹುಟ್ಟುಹಾಕುತ್ತದೆ. ಸಾಮಾನ್ಯ ಮಹಿಳೆ ಮತ್ತು ದುಡಿಯುವ ಮಹಿಳೆಯರಲ್ಲಿ ಕೋಮುವಾದದ ಛಿದ್ರಕಾರಿ ಅಂಶಗಳಾದ ಕಂದಾಚಾರ, ಮೂಢನಂಬಿಕೆ, ಸಾಮೂಹಿಕ ಮಂತ್ರ ಪಠಣ, ಇತ್ಯಾದಿ ಮಾಡಿಸುತ್ತದೆ.
- ಇಡೀ ಮಹಿಳಾ ಸಮುದಾಯವು ತನ್ನ ಶೋಷಣೆಯ ಬೇಡಿ ಕಳಚಿಕೊಳ್ಳಲು ನಡೆಸುತ್ತಿರುವ ಆಂದೋಲನ ಪೂರ್ಣಗೊಳ್ಳದಂತೆ, ಐಕ್ಯಚಳುವಳಿಗೆ ಅಡ್ಡಗಾಲು ಹಾಕುತ್ತದೆ. ದೇವರು, ಧಾಮರ್ಿಕತೆ ಹೆಸರಿನಲ್ಲಿ ಆತ್ಮಸ್ಥೈರ್ಯದ ಹೋರಾಟವನ್ನು ಮೊಟಕುಗೊಳಿಸುತ್ತದೆ. ಒಟ್ಟಾರೆ ಕೋಮುವಾದದ ವೈಚಾರಿಕ ದಾಳಿ ಎಲ್ಲಾ ಮಹಿಳೆಯರನ್ನು ಬಲಿತೆಗೆದುಕೊಳ್ಳುತ್ತದೆ. ಇದರಿಂದ ದುಡಿಯುವ ಮಹಿಳೆಯರು ಹೊರತಲ್ಲ.
- ಕೋಮುವಾದದ ಅಮಲಿನಲ್ಲಿರುವವರಿಂದ ನಾಗರಿಕ ಸಮಾಜದ ಮೇಲೆ ಹಿಂಸೆ, ಅತ್ಯಾಚಾರ, ಕೊಲೆಪಾತಕ ಸಂಭವಿಸುತ್ತದೆ. ಈ ದೊಂಬಿಯ ಪ್ರತಿಫಲವಾಗಿ ಅನಾವಶ್ಯಕ ಬಂದ್ಗಳುಂಟಾಗುತ್ತವೆ. ಮನೆ, ಆಸ್ತಿ-ಪಾಸ್ತಿ, ಬಟ್ಟೆ, ನೀರು ಬಂಧು ಬಳಗ ಕಳಕೊಂಡು ಬೀದಿಪಾಲಾಗುವ ಜನೆತೆಯ ರಕ್ಷಣೆಗೆ ಯಾರೂ ಬರುವುದಿಲ್ಲ.
- ಧಾಮರ್ಿಕ ಅಲ್ಪಸಂಖ್ಯಾತ ಕಾರ್ಮಿಕರನ್ನು ಸಂಘಪರಿವಾರದ ಕಾಮರ್ಿಕ ಸಂಘಟನೆಗಳು ಸಂಶಯದ ದೃಷ್ಠಿಯಿಂದ ನೋಡುವಂತೆ ಮಾಡುತ್ತವೆ ಮತ್ತು ನಿರಂತರ ಅಪಪ್ರಚಾರದಲ್ಲಿ ತೊಡಗಿವೆ. ಧಾಮರ್ಿಕ ಅಲ್ಪಸಂಖ್ಯಾತ ದುಡಿಯುವ ಮಹಿಳೆಯರ ಕುರಿತು ತುಚ್ಛವಾಗಿ ಕಾಣುತ್ತದೆ. ಕೋಮುವಾದದ ಭಾವನಾತ್ಮಕ ಅಂಶವು ಕಾಮರ್ಿಕ ಕುಟುಂಬದಲ್ಲಿ ಪ್ರತಿಬಿಂಬಿತವಾಗುತ್ತದೆ. ಅದರ ಅಪಾಯ ದುಡಿಯುವ ಮಹಿಳೆಯರ ಮೇಲೆ ಮತ್ತು ಮಕ್ಕಳ ಮೇಲೆ ಆಗುತ್ತದೆ.
- ತತ್ಪರಹಿತ-ಅವಕಾಶವಾದಿ ಕೋಮುವಾದಿ ರಾಜಕೀಯಕ್ಕೆ ಚುನಾವಣೆಯಲ್ಲಿ ಅಲ್ಪಸ್ವಲ್ಪ ಹಿನ್ನಡೆಯಾದರೂ, ಅದರ ಪ್ರಭಾವ, ವಿಷಪೂರಿತ ವಿಚಾರಗಳು ಜನಮನದಲ್ಲಿ ಉಳಿಯುತ್ತದೆ. ಅದು ಅಲ್ಲಲ್ಲಿ ಕೋಮುಗಲಭೆ, ಜನಾಂಗೀಯ ಕಲಹಗಳಾದಾಗ ಸ್ಪೋಟಗೊಂಡು ಮತ್ತೆ ಅಧಿಕಾರಕ್ಕೇರಲು ಹಪಹಪಿಸುತ್ತದೆ.

ಇಂದು ಭಾರತದ ಪ್ರಜಾಸತ್ತೆಗೆ ಅಪಾಯ ತಂದೊಡ್ಡುವ ಕೋಮುವಾದವು ಭಾರತದ ಪ್ರಭುತ್ವವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆಯುತ್ತಿರುವುದು ಮತ್ತು ಅಂತಿಮವಾಗಿ ಫ್ಯಾಸಿಸ್ಟ ಸ್ವರೂಪಕ್ಕೆ ತಲುಪುವ ಮುನ್ಸೂಚನೆಯನ್ನು ಇತ್ತೀಚೆಗೆ ಕಾಣಬಹುದಾಗಿದೆ.
ಯಾವುದೇ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಾಗ ಅದರ ಮೊದಲ ಪರಿಣಾಮ ವಾಗುವುದು ಹೆಣ್ಣಿನ ಮೇಲೆ. ಇದಕ್ಕೆ ಮೊದಲ ಕಾರಣ ಘರ್ಷಣೇಗೆ ತೊಡಗುವ ಗಂಡಸರು ಹೆಂಗಸರ ಕುರಿತು ತಳೆದಿರುವ ಧೋರಣೆಯೇ ಆಗಿದೆ. ಅವರು ಹೆಣ್ಣನ್ನು ಸಹಜೀವಿ ಎಂದು ಭಾವಿಸದೇ ಶತ್ರುವಿನ ಆಸ್ತಿ ಎಂದು ಪರಿಗಣಿಸಿರುವುದರಿಂದ ಅವನನ್ನು ಅಥವಾ ಅವನನ್ನು ಪ್ರತಿನಿಧಿಸುವ ಧರ್ಮವನ್ನು ಮಣಿಸಲು ಹೆಂಗಸರನ್ನು ಅಪಹರಿಸುವ, ಅತ್ಯಾಚಾರ ಮಾಡುವ, ಕೊಲ್ಲುವ ಮೂಲಕ ಸೇಡು ತೀರಿಸಿಕೊಳ್ಳುವುದನ್ನು ಪೌರುಷ ಎಂಧು ಭಾವಿಸುತ್ತಾರೆ. ಆದರದು ಹೇಡಿತನ ಎಂಬುದನ್ನು ತಿಳಿಯದಷ್ಟು ಹೇಡಿಗಳು ಅವರಾಗಿರುತ್ತಾರೆ.
ಅಲ್ಲದೇ ಈ ಗಲಭೆಗಳ ಪರಿಣಾಮವಾಗಿ ಹೆಂಗಸರು ಮುಕ್ತವಾಗಿ ಓಡಾಡದ, ವಿದ್ಯಾಭ್ಯಾಸ, ಉದ್ಯೋಗಗಳಿಂದ ವಂಚಿತರಾಗುವ ಸಮಸ್ಯೆ ಎದುರಾಗುತ್ತದೆ. ತಾಲಿಬಾನ್ ನಿಯಂತ್ರಣ ಸಾಧಿಸಿದಾಗ ಹೆಂಗಸರು ಹಾಡು ಹೇಳದಂತೆ, ಕೇಳದಂತೆ ಹೊರಹೋಗದಂತೆ, ಶಿಕ್ಷಣ ಪಡೆಯದಂತೆ ಇನ್ನೂ ಅನೇಕ ನಿರ್ಬಂಧ ಹೇರಿದ್ದನ್ನು ಗಮನಿಸಬಹುದು. ಇದಲ್ಲದೇ ಹೆಣ್ಣನ್ನು ಧರ್ಮದ ಅಸ್ತ್ರವಾಗಿ ಕೂಡ ಬಳಸುವುದನ್ನು ಕಾಣಬಹುದು. ಇತ್ತೀಚಿನ ಹೇಳಿಕೆಗಳನ್ನೇ ಗಮನಿಸಿ; ಹಿಂದೂ ಧರ್ಮ ಬೆಳೆಯುವುದಕ್ಕಾಗಿ ಹಿಂದೂ ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರಬೇಕು ಎಂದು ಅಪ್ಪಣೆ ಕೊಡಲಾಯಿತು. ಇದಕ್ಕೆ ಅವಳ ಒಪ್ಪಿಗೆಯ ಅವಶ್ಯಕತೆಯೇ ಅವರಿಗೆ ಕಾಣಲಿಲ್ಲ.
ಎರಡು ದೇಶಗಳ ಘರ್ಷಣೆಗಳಲ್ಲಿ ಅದೂ ಧಮರ್ಾಧಾರಿತವಾದಾಗ ಹೆಣ್ಣಿನ ದೇಹವನ್ನು ಆಕ್ರಮಿತ ಭೂಮಿ ಎಂಬಂತೆ ನಡೆಸಿಕೊಂಡು ಧಾಳಿ ಮಾಡಲಾಗುತ್ತದೆ. ಉದಾ: ಬಾಂಗ್ಲಾ ದೇಶದ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಯಿತು. ಸಾವಿರಾರು ಅನಾಥ ಮಕ್ಕಳು ಜನಿಸಿದ್ದನ್ನು ನೋಡಬಹುದಾಗಿದೆ. ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ಹಿಟ್ಲರ್ ಪಡೆಯು ಮಹಿಳೆಯರ ಅಂಗಾಂಗಗಳನ್ನು ಕತ್ತರಿಸಿ ನೇತುಹಾಕಿತು.  ಭಾರತ - ಪಾಕಿಸ್ತಾನ, ಪ್ಯಾಲಿಷ್ಟೈನ್-ಇಸ್ರಾಯಿಲ್ ಇತ್ಯಾದಿ ದೇಶಗಳಲ್ಲಿ ಯುದ್ಧಗಳಾದಾಗಲೂ ಇದೇ ಕತೆ. ನಮ್ಮ ದೇಶದೊಳಗೂ ಗುಜರಾತ್ ಗೋದ್ರಾ ಘಟನೆ ಹಿನ್ನೆಲೆಯಲ್ಲಿ ನಡೆದ ನರಮೇಧದಲ್ಲಿ ಗಭರ್ಿಣಿ ಮಹಿಳೆಯ ಭ್ರೂಣ ಸುಟ್ಟ ಘಟನೆ, ವಣರ್ಾಶ್ರಮ ಧರ್ಮದ ಪ್ರತೀಕವಾಗಿ ದಲಿತರನ್ನು ದಲಿತ ಮಹಿಳೆಯರ ಬೆತ್ತಲೆ ಮೆರವಣಿಗೆ, ಬಹಿಷ್ಕಾರ, ಕೊಲೆ, ಗುಡಿಸಿಗೆ ಬೆಂಕಿ ಹಚ್ಚುವುದು, ಸಜೀವ ದಹನದಂಥ ಅಮಾನವೀಯ ಘಟನೆಗಳು ನಡೆಯುತ್ತಲೇ ಇವೆ.
ಹಾಗಾದರೆ ಸಾಮಾನ್ಯ ಮಹಿಳೆಯರಿಗೆ ಮತ್ತು ದುಡಿಯುವ ಮಹಿಳೆಯರಿಗೆ  ಭದ್ರತೆಯ ನೆಲೆ ಯಾವುದು? ಇಂದು ಮಹಿಳೆಯರು ಕೆಲಸ ಹುಡುಕಿಕೊಂಡು ದೇಶ-ವಿದೇಶಗಳಿಗೆ ಹೋಗುತ್ತಿದ್ದಾರೆ.  ಜನವಸತಿ ಇರಲಿ ಬಿಡಲಿ ಎಲ್ಲಾ ವಿಧದ ಕೆಲಸದ ಸ್ಥಳಗಳು, ತೋಟ, ಹೊಲ-ಗದ್ದೆ, ಮಂಡಿಗಳು, ಕೃಷಿ ಬಜಾರುಗಳು, ಮಾರುಕಟ್ಟೆ ಪ್ರದೇಶಗಳು, ಶಾಲೆ, ಕಾಲೇಜು, ಪ್ರಯಾಣದ ಸ್ಥಳಗಳಾದ ರೈಲು, ಬಸ್ಸು, ಕಾರು ಇತರೇ ವಾಹನಗಳಲ್ಲಿ, ಸ್ವಂತ ಕುಟುಂಬದಲ್ಲಿ, ಮದುವೆಯಾಗಿ ಸೇರಿಸ ಮನೆತನದಲ್ಲಿ, ಸಕರ್ಾರಿ ಆವರಣದಲ್ಲಿ ಹೀಗೆ ಎಲ್ಲಿ ದುಬರ್ೀನು ಹಿಡಿದರೂ ಅವಳಿಗೆ ಭದ್ರತೆಯ ತಾಣವಿಲ್ಲ.  'ಯಾರ ಬರುವಿಗೆ ಉದುರು ನೋಡುವೆ? ಯಾರ ರಕ್ಷಣೆಗೆ ನೀನು ಕಾಯುವೆ? ಶಾಸನ-ಕೋಟರ್ು-ಕಛೇರಿ ಎಲ್ಲಾ ಕನ್ನಡಿಯೊಳಗಿನ ಗಂಟಿನಂತೆ' ಭದ್ರತೆ ಎಲ್ಲಿ ಸಿಗುತ್ತದೆ? ಅದೊಂದು ಸಮಾಜದ ಎಚ್ಚೆತ್ತ ಪ್ರಜ್ಞೆಯ ಭಾಗವಾಗಿ ಮೂಡಬೇಕಾದುದು. ನೆರೆಹೊರೆಯವರಲ್ಲಿ ಹೆಣ್ಣಿನ ಬಗೆಗಿನ ಕಡೆಗಣ್ಣ ನೋಟದಲ್ಲಿ ಆಗಬೇಕಾದ ಬದಲಾವಣೆಯ ಭಾಗವಾಗಿ 'ಮಹಿಳಾ ಭದ್ರತೆ' ಇದೆ.
ಲೈಂಗಿಕ ಪ್ರವಾಸೋದ್ಯಮ, ಲೈಂಗಿಕ ರಾಜಕಾರಣ ಅಸಹ್ಯ ಹುಟ್ಟಿಸುವ ಸಂಗತಿಗಳು. ಅದರ ಭಾಗವಾಗಿ ಹೆಣ್ಣುಗಳ-ಮಕ್ಕಳ ಮಾರಾಟ ಜಾಲವಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಸುಂದರ ಹೆಣ್ಣು ಮಕ್ಕಳನ್ನು -ಅವರ ಆಥರ್ಿಕ ಅಭದ್ರತೆಯನ್ನೇ ಬಂಡವಾಳವಾಗಿಸಿ- ಖರೀದಿಸಿ ತಮ್ಮ ಕಣ್ಣೋಟಕ್ಕೆ ಹೇಗೆ ಬೇಕೋ ಹಾಗೆ ನಗ್ನ-ಅರೆ ನಗ್ನವಾಗಿ ಚಿತ್ರೀಕರಿಸಿಕೊಂಡು  ಮಾಧ್ಯಮಗಳಲ್ಲಿ ಹಾಗೂ ಸಿನೇಮಾಗಳಲ್ಲಿ,  ಹಣಕಾಸು ವ್ಯವಹಾರ ಕುದುರುತ್ತಿರುವುದು ಆಘಾತಕಾರಿ ಬೆಳವಣಿಗೆ. ಇಲ್ಲಿ ಎಂತೆಂಥ ಮನಸ್ಸುಗಳು ಕೆಲಸ ಮಾಡುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಸಮಾಜದ ರಚನಾವಿಧಾನದ ಹಾಗೂ ಸಮಾಜದ ಬೆಳವಣಿಗೆ ಕಾಲಘಟ್ಟದಲ್ಲಿ ಸ್ತ್ರೀಯರ ಕುರಿತು ಯಾವ ಮೌಲ್ಯಗಳನ್ನು ಬಿತ್ತಲಾಗಿದೆಯೋ ಅದರ ಭಾಗವಾಗಿಯೇ ಇಂದಿಗೂ ಸಮಾನತೆಯ ವಿಷಯ ಹೇಳಿದರೆ ಮುಗಿಬೀಳುವವರ ಸಂಖ್ಯೆಯೇ ಹೆಚ್ಚು. ಹೆಣ್ಣನ್ನು ಮನುಷ್ಯನೆಂದು ಪರಿಗಣಿಸದ ಲಿಂಗ ಅಸಮಾನತೆ, ಹೆಣ್ಣಿಗೂ ಎಲ್ಲರಂತೆ ಇರುವ ಭಾವನೆ-ಶ್ರದ್ಧೆಯನ್ನು ಗೌರವಿಸದ ಧಾಮರ್ಿಕ ಅಸಮಾನತೆ, ಸಮಾಜದ ಆಗುಹೋಗುಗಳ ಕುರಿತು ನೀತಿ ನಿರೂಪಿಸಿ ಶಾಸನ ಮಾಡುವವುದನ್ನು ನಿರಾಕರಿಸುವ ರಾಜಕೀಯ ಅಸಮಾನತೆ,  ಸಮಾಜದ ಸವರ್ಾಂಗೀಣ ಬೆಳವಣಿಗೆಗೆ ಹೆಣ್ಣಿನ ಕೊಡುಗೆ ಪಡೆದೂ ಕೂಡ ಪ್ರಗತಿಯಲ್ಲಿ ಹೆಣ್ಣಿನ ದುಡಿಮೆಯನ್ನು ಗೌಣವಾಗಿಸುವ ರಾಜಕೀಯ ಅರ್ಥಶಾಸ್ತ್ರಗಳು ಹಾಗೂ ಸಿದ್ಧಾಂತ ರೂಪಿಸುವಲ್ಲಿಯ ಅಸಮಾನತೆಗಳು, ಸ್ವತಂತ್ರವಾಗಿ, ಗೌರವಯುತವಾಗಿ, ಸಮಾನ ಬದುಕು ಕಟ್ಟಿಕೊಂಡು ಹೋಗಲು ಬೇಕಾಗುವ ಆಥರ್ಿಕ ಸಬಲತೆಯನ್ನು ನಿರಾಕರಿಸುವ ಆಥರ್ಿಕ ಅಸಮಾನತೆಗಳು ಯಾವುದರ ಕೊಡುಗೆ?  ಇದೆಲ್ಲದರ ಹಿಂದೆ ಕೂಡ ಧಾಮರ್ಿಕ ಮೂಲಭೂತವಾದ ಹಾಗೂ ಕೋಮುವಾದದ ಕರಿ ಛಾಯೆಯನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ.
ಮಹಿಳೆಯರನ್ನು ಕೇವಲ ಗೃಹಕೃತ್ಯ ಮತ್ತು ಸಂತಾನೋತ್ವತ್ತಿಯ ಭಾಗವಾಗಿ ಮಾತ್ರ ಕಾಣುವ ಕೋಮುವಾದಿ ವಿಚಾರದಿಂದ ದುಡಿಯುವ ಮಹಿಳೆಯರು ತಮ್ಮ ಆಥರ್ಿಕ ಬೇಡಿಕೆಗಳಿಗಾಗಿ ಹೋರಾಡದಂತೆ ಕಟ್ಟಿಹಾಕುತ್ತದೆ. ಆ ಮೂಲಕ ಆಥರ್ಿಕ ಪ್ರಜ್ಞೆಯ ಹೋರಾಟ ಮೊಟಕುಗೊಳ್ಳುತ್ತದೆ. ಕಾಲಾನಂತರದಲ್ಲಿ ಸಮಾಜ ಬದಲಾವಣೆಯ ಕ್ರಾಂತಿಕಾರಿ ಪ್ರಜ್ಞೆ ಉದ್ಭವಿಸದಂತೆ ಪ್ರತಿಹಂತದಲ್ಲಿ ವಿಘ್ನಗಳನ್ನು ತಂದೊಡ್ಡುತ್ತದೆ ಎಂಬುದಂತೂ ಸತ್ಯ.
ಮೂಲಭೂತವಾದ-ಕೋಮುವಾದದ ವಿರುದ್ಧ ಹೋರಾಡಲು ವ್ಯೂಹೋಪಾಯಗಳು.
- ಕೋಮುವಾದವನ್ನು ನಿಯಂತ್ರಣ ಮಾಡಿ, ನಿಮರ್ೂಲನೆಗೆ ಮುಂದಾಗದಿದ್ದರೆ ದೇಶಕ್ಕೆ ಗಂಭೀರ ಅಪಾಯವಂತೂ ಇದೆ ಎನ್ನುವುದು ಸ್ಪಷ್ಟ. ಈ ಕಾರಣಕ್ಕಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ತನ್ನ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಿಸುತ್ತದೆ. ದೇಶದ ಅತ್ಯಂತ ಸಮರಶೀಲ ಕಾಮರ್ಿಕ ಸಂಘಟನೆಯಾದ ಸಿಐಟಿಯುನ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಈ ಸಮಾಜವನ್ನು ವರ್ಗ ದೃಷ್ಠಿಕೋನದಿಂದಲೇ ವಿಶ್ಲೇಷಣೆಗೊಳಪಡಿಸುತ್ತದೆ. ಮುಖ್ಯ ಬೇಡಿಕೆಗಳ ಕುರಿತು ಹೋರಾಡುತ್ತಲೇ ಕೋಮುವಾದದ ವಿರುದ್ಧ ಕೂಡ ಸೆಣಸುವುದು ಕಾಮರ್ಿಕ ಸಂಘಟನೆಗಳ ಪ್ರಮುಖ ಅವಿಭಾಜ್ಯ ಕೆಲಸವಾಗಿದೆ ಎಂದು ನಂಬಿವೆ.
- ಕಾಮರ್ಿಕ ವರ್ಗದ ಪ್ರಮುಖ ವಿಭಾಗವಾದ ದುಡಿಯುವ ಮಹಿಳೆಯರು- ಅಂಗನವಾಡಿ ನೌಕರರು, ಅಕ್ಷರ ದಾಸೋಹ ಅಡುಗೆಯವರು, ಬೀಡಿ ಕಟ್ಟುವವರು, ಗಾಮರ್ೆಂಟ್ಸ ಹಾಗೂ ಇತರೆಡೆ  ಕೈಮಗ್ಗ-ವಿದ್ಯುತ್ ಮಗ್ಗಗಳಲ್ಲಿ ದುಡಿಯುವವರು, ಮಹಿಳಾ ಹಮಾಲಿ ಮತ್ತು ಪೌರ ಕಾಮರ್ಿಕರು, ಆಶಾ ಕಾರ್ಯಕತರ್ೆಯರು, ವಿವಿಧ ಕೈಗಾರಿಕೋದ್ಯಮಗಳಲ್ಲಿ, ಕಾಖರ್ಾನೆಗಳಲ್ಲಿ ದುಡಿಯುವ ಮಹಿಳೆಯರು, ಬೀದಿ ಬದಿ ವ್ಯಾಪಾರದಲ್ಲಿ ತೊಡಗಿರುವವರು, ಕೋಟರ್ು-ಕಛೇರಿಯಳಲ್ಲಿ ಕೆಲಸ ಮಾಡುವ ಕೇಂದ್ರ ಮತ್ತು ರಾಜ್ಯ ಸಕರ್ಾರಿ ನೌಕರರಲ್ಲಿ   ಜಾತ್ಯತೀತ ಮನೋಭಾವ ಬೆಳೆಸುವ ಕೆಲಸವು ದುಡಿಯುವ ವರ್ಗದ ವರ್ಗ ಹೋರಾಟದ ಜೊತೆಯಲ್ಲೇ ಆಗಬೇಕಾಗುತ್ತದೆ. ಭಾರತದ ಹಳ್ಳಿಗಳ ಜನಸಮುದಾಯದೊಂದಿಗೆ ದಿನನಿತ್ಯದ ಜೀವಂತ ಸಂಬಂಧ ಹೊಂದಿರುವ ಇವರು ಜಾತ್ಯಾತೀತ ವಿಚಾರ ಪ್ರಣಾಳಿಯನ್ನು ಪ್ರಚುರ ಪಡಿಸುವ ಒಂದು ಸಮರ್ಥನೀಯ ವಿಭಾಗವಾಗಿ ಮಾರ್ಪಡಬೇಕಿದೆ. ಸಿಐಟಿಯು ಮಾರ್ಗದರ್ಶನ ಮಾಡಿದಂತೆ, ನಾವು ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಗಂಭೀರಹೋರಾಟ ನಡೆಸಿದರೆ ಮಾತ್ರವೇ ಮೂಲಭೂತವಾದ ಹಾಗೂ ಕೋಮುವಾದವನ್ನು ಹಿಮ್ಮೆಟ್ಟಿಸಬಹುದಾಗಿದೆ.
- ನೂರಾರು ವರ್ಷಗಳಿಂದ ಬೇರೂರಿದ ಮೂಲಭೂತವಾದಿ-ಕೋಮುವಾದಿ ಆಲೋಚನೆಯನ್ನು ತಕ್ಷಣದಲ್ಲಿ ಕಿತ್ತೆಸೆಯಲು ಅಸಾಧ್ಯವಾದ್ದರಿಂದ, ವಿಶೇಷವಾದ, ಪರಿಣಾಮಕಾರಿಯಾದ ಮತ್ತು ನಿರಂತರವಾದ ಪ್ರಯತ್ನಗಳನ್ನೇ ಹಾಕಬೇಕಾಗುತ್ತದೆ.
- ದೇಶದ ಹಲವಾರು ಪ್ರಗತಿಪರ ಬಿದ್ಧಿಜೀವಿಗಳು, ಹೋರಾಟಗಾರರು ಗುರುತಿಸಿದಂತೆ ಕೋಮುವಾದದ ನೆಲೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಜನರು ಅದರ ವಿರುದ್ಧ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಂಘಟಿತರಾಗದಿದ್ದರೆ, ಕೋಮುಪೀಡೆಯನ್ನು ಸೃಷ್ಠಿಸುವ ವ್ಯವಸ್ಥೆ ಇನ್ನಷ್ಟು ಬಲಗೊಂಡು ಇನ್ನೂ ಹೆಚ್ಚಿನ ಆಹುತಿಯನ್ನು ತೆಗೆದುಕೊಳ್ಳುತ್ತದೆ. ಅಂಥ ಮಾನಸಿಕ, ಧಾಮರ್ಿಕ ಚೌಕಟ್ಟನ್ನು ರೂಪಿಸಿಕೊಳ್ಳುತ್ತದೆ. ಇದರಿಂದ ನಮ್ಮ ಸಮಾಜದಲ್ಲಿ ಆಗಬೇಕಾಗಿರುವ ಸಾಮಾಜಿಕ, ಆಥರ್ಿಕ ಬೆಳವಣಿಗಳು ಇನ್ನೂ ಮುಂದೂಡಲ್ಪಡುತ್ತವೆ.
- ವಿನಾಶಕಾರಿ ಆಥರ್ಿಕ ನೀತಿಗಳ ವಿರುದ್ಧ, ನಿರುದ್ಯೋಗದ ವಿರುದ್ದ ಹೋರಾಡುತ್ತಲೇ ಕೋಮುವಾದಿ-ಜಾತಿವಾದಿ-ವಿಭಜನಕಾರಿ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು. ಅದಕ್ಕಾಗಿ ತಳಮಟ್ಟದ ತನಕ ವ್ಯಾಪಕ ಹೋರಾಟ ನಡೆಸುವುದೊಂದೇ ದಾರಿ.
- ದುಡಿಯುವ ಮಹಿಳೆಯರು ಕೋಮುವಾದದ ಅಪಾಯಗಳ ಕುರಿತು ಸ್ವಯಂಶಿಕ್ಷಣ ಹೊಂದಬೇಕು, ಸಾಹಿತ್ಯ ಅಭ್ಯಾಸ ಮಾಡಬೇಕು, ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಕೋಮುವಾದಿ ಅಪರಾಧಿಕ ಆಕ್ರಮಣಗಳಿಗೆ ತುತ್ತಾದ, ದಾಳಿಗೊಳಗಾದ ಸಂದರ್ಭಗಳ ತಿಳಿವಳಿಕೆ ಪಡೆಯಬೇಕು. ಗಲಭೆಗ್ರಸ್ತ ಪ್ರದೇಶದಲ್ಲಿ ಪರಿಹಾರಕಾರ್ಯ, ನೆರವು ನೀಡಲು ಮುಂದಾಗಬೇಕು.
- ನಮ್ಮ ಮಕ್ಕಳಿಗೆ ಬೋಧಿಸುವ ಶಿಕ್ಷಣಕ್ಕೆ ಅನ್ವಯವಾಗುವ ಚಿಕ್ಕ ಚಿಕ್ಕ ಪ್ರಗತಿಪರ ಕಥೆ, ಹಾಡು, ಮಕ್ಕಳ ನಾಟಕಗಳನ್ನು ಹೇಳಿಕೊಡುವಂತಾಗಬೇಕು. ಸೌಹಾರ್ದತೆ ಸಾರುವ ಕರಪತ್ರ, ಪೋಷ್ಟರ್ಸ್, ಬೀದಿಬದಿ ಸಭೆಗಳು, ವಿಚಾರ ಸಂಕಿರಣಗಳನ್ನು ನಡೆಸಬೇಕು.
- ಪ್ರತಿಯೊಂದು ಸಭೆ-ಸಮಾರಂಭ, ಹೋರಾಟ ಕಾರ್ಯಕ್ರಮಗಳಲ್ಲಿ ಕೋಮುವಾದದ ಅಪಾಯದ ಕುರಿತು ವಿಚಾರ-ವಿಮಶರ್ೆ ನಡೆಸುವುದು, ಅತ್ಯಂತ ಕೆಳಸ್ತರದಿಂದ ಬಂದ ದುಡಿಯುವ ಮಹಿಳೆಯರನ್ನು ಇಡಿಯಾಗಿ ಎಜ್ಯುಕೇಟ್ ಮಾಡಬೇಕು, ಅವರಿಗೆ ತಿಳಿಯುವ ರೀತಿಯಲ್ಲಿ ಸಂವಾದ-ಸಂವಹನ ನಡೆಸುವುದು. ಭಾರತದ ಜಾತ್ಯತೀತ, ಬಹುಸಂಸ್ಕೃತಿಯ ಉದ್ದೇಶಗಳಿಗೆ ಪ್ರಥಮ ಬದ್ಧತೆಯನ್ನು ಅವರಲ್ಲಿ ಮೂಡಿಸಬೇಕಾದುದು ಮುಖ್ಯ. ನಂತರ
- ದಿನನಿತ್ಯದ ನಮ್ಮ ಚಟುವಟಿಕೆಗಳಿಗೂ ಕೋಮುವಾದಕ್ಕೂ ಇರುವ ಸಂಬಂಧ ಗುರುತಿಸಲು ಮತ್ತು ತಾವು ಕೆಲಸ ಮಾಡುವ ಪ್ರದೇಶದಲ್ಲಿ ಕೋಮುವಾದಿ ಪ್ರಕ್ರಿಯೆ ಗುರುತಿಸಲು ಸಾಧ್ಯವಾಗಬೇಕು.
- ಕೋಮುವಾದದ ವಿರುದ್ಧ ಹೋರಾಟವೆಂದರೆ ಸಂವಿಧಾನದ ಆಶಯಗಳನ್ನು ಜಾರಿ ಮಾಡುವ ಹಾಗೂ ಜಾತ್ಯತೀತ, ಪ್ರಜಾಪ್ರಭುತ್ವ ಮತ್ತು ಸಮಾನತೆಗಾಗಿನ ಹೋರಾಟವೇ ಆಗಿದೆ.

ಅಂತಿಮವಾಗಿ ಅನಿಸುವುದಿಷ್ಟು: ಕುಟುಂಬದ ಹೊರೆಯನ್ನು ವಾಸ್ತವಿಕವಾಗಿ ಹೊತ್ತು, ಸಾಮಾಜಿಕವಾಗಿ ಮಾನವ ಜನಾಂಗವನ್ನು ಮುಂದೆ ಕೊಂಡೊಯ್ಯುವ ಜವಾಬ್ದಾರಿಯನ್ನು ಜೈವಿಕವಾಗಿಯೂ ಹೊತ್ತವಳು ಮಹಿಳೆ. ತಾಯಿತನ ಎನ್ನುವುದು ಕೇವಲ ಮಹಿಳೆಗೆ ಆರೋಪಿಸಿರುವ ಗುಣವಾಗಿ ಮಾರ್ಪಟ್ಟಿರುವುದು ದೌಭರ್ಾಗ್ಯ. ತಾಯಿತನ ಎನ್ನವುದು ಪರಸ್ಪರರನ್ನು ಪ್ರೀತಿ ಗೌರವದಿಂದ ಕಾಣುವ, ಸಮಾನರೆಂದು ಪರಿಗಣೀಸುವ, ಸ್ಪಂದಿಸುವ, ಒಬ್ಬರಿಗೊಬ್ಬರು ಒದಗುವ ಕ್ರಿಯೆ ಎಂದು ಅಥರ್ೈಸುವುದಾದರೆ ಈ ತಾಯಿತನ ಗಂಡು ಹೆಣ್ಣು ಎರಡರಲ್ಲೂ  ಇರಬೇಕಾದ ಸಮಾನ ಗುಣವಿಶೇಷ. ಆದರೆ ಇಂದು ಲಿಂಗ ರಾಜಕಾರಣ ಎಷ್ಟು ಪ್ರಬಲವಾಗಿ ಬೆಳೆಯುತ್ತಿದೆ ವರ್ಗಗುಣ ಆವರಿಸಿ ಸೂಕ್ಷ್ಮ ಸಂವೇದನೆಯ ತಾಯಿತನ ಮರೆಯಾಗುತ್ತಿದೆ ಎಂಬ ಆತಂಕವಂತೂ ಇದ್ದೇ ಇದೆ. ಇಂಥ ತಾಯಿತನವನ್ನು ಆಥರ್ಿಕ ಕಾರಣಗಳು ಅಪಹರಿಸಿದರೆ ರಾಜಕೀಯ-ಸಾಮಾಜಿಕ ಕಾರಣಗಳು ತಾಯಿತನವನ್ನು ಸಾಯಿಸುತ್ತಿವೆ. ಅದಕ್ಕೆ ಅತಿ ಹೆಚ್ಚು ಕೊಡುಗೆ ಕೊಡುತ್ತಿರುವುದೆಂದರೆ ನವುದಾರವಾದಿ ಆಥರ್ಿಕ ನೀತಿ ಮತ್ತು ಮೂಲಭೂತವಾದ-ಕೋಮುವಾದ-ಭಯೋತ್ಪಾದನೆ-ಧಮರ್ಾಂಧತೆಗಳು. ಇವುಗಳಿಗೆ ತಾಯಿತನವೂ ಇಲ್ಲ, ಮಾನವೀಯ ಮುಖಗಳೂ ಇಲ್ಲ.  
                                                                                   ಯಮುನಾ ಗಾಂವ್ಕರ್, ಉತ್ತರ ಕನ್ನಡ

Thursday 19 February 2015

ಬೆಳಕು - ಕತ್ತಲೆಯ ಎರಡು ನೀಳ್ಗತೆಗಳು -ವಿಷ್ಣು ನಾಯ್ಕ

               
                        

ಬೆಳಕು - ಕತ್ತಲೆಯ ಎರಡು ನೀಳ್ಗತೆಗಳು
   (ಎಚ್ಚರ ಇದ್ದ ಕಾಶೀ & ಬಾಳಸುನ ಔಷಧಿ.-2 ಕತೆಗಳು -ಎಂ.ಎ. ಖತೀಬ)


ಈ ಸಂಕಲನದಲ್ಲಿ ಎರಡು ನೀಳ್ಗತೆಗಳಿವೆ.  ಒಂದು, ಎಚ್ಚರ ಇದ್ದ ಕಾಶೀ, ಇನ್ನೊಂದು ಬಾಳಸುನ ಔಷಧಿ.  ಈ ಎರಡೂ ಕತೆಗಳು ನಡೆದದ್ದು ಕಾಳೀನದಿಯ ಆಸುಪಾಸಿನಲ್ಲಿ.  ಎರಡೂ ಕತೆಗಳಿಗೆ ವಸ್ತುವಾದ ಕುಟುಂಬಗಳು ಶ್ರಮಸಂಸ್ಕೃತಿಗೆ ಹೆಸರಾದ ದಲಿತರದು.
ಕಥೆಯನ್ನು ಬರೆದವರು ಎಂ.ಎ. ಖತೀಬ ಎಂಬ ಹೆಸರಿನ ಕಡವಾಡದ ಜಾಗ್ರತ ಮನಸಿನ ಲೇಖಕ.  ಈ ಕಥೆಗಳನ್ನು ಓದುತ್ತ ಹೋದಂತೆ ನನಗೆ ನನ್ನ ಬಾಲ್ಯದ ದಿನಗಳೇ ಬಿಚ್ಚಿಕೊಳ್ಳುತ್ತಿವೆ ಎಂದೆನಿಸತೊಡಗಿತು.  ಕತೆಯಲ್ಲಿ ಉತ್ಪ್ರೇಕ್ಷೆಯ ರೋಚಕ ಸಂಗತಿಗಳು ಬಹಳ ಕಡಿಮೆ.  ಕಡಿಮೆ ಎನ್ನುವುದಕ್ಕಿಂತ ಇಲ್ಲವೇ ಇಲ್ಲ ಎಂದರೂ ನಡೆದೀತು.  ಅತ್ಯಂತ ನಿರಾಡಂಬರ ಮಾತಿನ ಶೈಲಿ ಸಹಜ ಸಹಜ ಎಂಬಂಥ ಬೆಳವಣಿಗೆ.  ದುಡಿಮೆಯಲ್ಲೇ ದೇವರನ್ನು ಕಾಣುವ ಕುಟುಂಬಗಳ ಕತೆಯವು.  ಎರಡೂ ಕತೆಗಳಲ್ಲಿ ಬಳಕೆಯಾದ ಭಾಷೆ, ಪಾತ್ರಗಳ ನಿತ್ಯ ಸ್ವಭಾವ, ನನ್ನ ಈ ಗುಮಾನಿಗೆ ಕಾರಣ.  ದುಡಿಮೆ, ದುಡಿಮೆ, ದುಡಿಮೆ! ಇದು ಇಲ್ಲಿಯ ಕಥೆಗಳ ಒಳಗಿನ ಸ್ಥಾಯೀ ಭಾವಗಳು.  ನಾಳೆಯ ಬಗೆಗಿನ ಸುಂದರ ಕನಸುಗಳು ಇಲ್ಲಿಯ ಭರವಸೆಯ ಬದುಕು.
ಎಚ್ಚರ ಇದ್ದ ಕಾಶೀ ಆಪತ್ತನ್ನು ಎದುರಿಸುತ್ತ ಭವಿಷ್ಯದ ಸಂಕಲ್ಪವನ್ನು ಈಡೇರಿಸಿಕೊಂಡ ವಿವೇಕಿ  ಹೆಣ್ಣುಮಗಳೊಬ್ಬಳ ಸುತ್ತ ಹೆಣೆದ ಕತೆ.  ಈ ಕಥೆಯ ನಾಯಕ 'ಲಾಡು' ಎಂದರೂ ಸರಿ,  ಅವನ ಮಗ ಸಂತೋಷ ಎಂದರೂ ಅಷ್ಟೇ ಸರಿ.  ಕಥೆಯ ನಾಯಕಿ ಮಾತ್ರ ನಿವರ್ಿವಾದವಾಗಿ ಕಾಶಿಯೇ. ಲಾಡು ಮತ್ತು ಕಾಶೀ ಗುಡಿಕೈಗಾರಿಕೆಯಲ್ಲಿ ತೊಡಗಿಸಿಕೊಂಡವರು. ಬುಟ್ಟಿ ಮಾಡುವ ಕೆಲಸಗಳ ಜೊತೆಯಲ್ಲಿ ಕೂಲಿ ಕೆಲಸವನ್ನೂ ಮಾಡುತ್ತಿದ್ದವರು. ವೈವಿಧ್ಯಮಯ ಬುಟ್ಟಿಗಳನ್ನು ಹೆಣೆಯುವ ಕಲೆಯಲ್ಲಿ ನಿಪುಣರು ಮಾತ್ರವಲ್ಲ, ಹೊಸ ಹೊಸ ವಿನ್ಯಾಸಗಳಿರುವ ಬುಟ್ಟಿಗಳನ್ನು ಸಂತೆಯಲಿಟ್ಟು ಮಾರಿ ಸಂಸಾರ ಸಾಗಿಸುವವರು.  
ಲಾಡು ಮತ್ತು ಕಾಶಿಯ ಮಗ (ಸಂತೋಷ) ಈ ಕಥೆಗೆ ಅನಿರೀಕ್ಷಿತ ತಿರುವುಗಳನ್ನು ತಂದುಕೊಡುವಲ್ಲಿ ಮಹತ್ವದ ಪಾತ್ರಗಳನ್ನು ನಿರ್ವಹಿಸಿದ ಶಾಲಾ ಬಾಲಕ.  ಒಂದು ದಿನ ಈತನ ಶಾಲೆಯ ಮಾಸ್ತರರು ಪಾಲಕರನ್ನು ಕರೆದುಕೊಂಡು ಬರುವಂತೆ ಸಂತೋಷನಿಗೆ ಸೂಚಿಸುತ್ತಾರೆ.  ಮನೆಗೆ ಬಂದು ಹೇಳಿದಾಗ ತಾಯಿ ಕಾಶೀ ಹೋಗುತ್ತಾಳೆ.  ನಿನ್ನ ಮಗ ಗುಣದಲ್ಲಿ ಒಳ್ಳೆಯವನು.  ತಂಟೆ-ತಕರಾರಿಲ್ಲ.  ಆದರೆ ಅಭ್ಯಾಸದಲ್ಲಿ ತೀರಾ ಹಿಂದೆ ಎನ್ನುತ್ತಾರೆ.  ಕಾಶಿ ಶಾಲೆಯಲ್ಲಿ ಕ್ಲಾಸ್ರೂಮಿನ ವಾತಾವರಣವನ್ನು ಗಮನವಿಟ್ಟು ನೋಡಿ ಮನೆಗೆ ಬಂದವಳೇ ಗಂಡನೊಂದಿಗೆ ಚಚರ್ಿಸುತ್ತಾಳೆ ಮತ್ತು ತಾನು ಕಂಡುಕೊಂಡ ಪರಿಹಾರದ ದಾರಿಯನ್ನೂ ಅರಹುತ್ತಾಳೆ.  ಹೆಂಡತಿ ಕೊಟ್ಟ ಕಾರಣ, ಗಂಡ ಲಾಡುನನ್ನೂ ಎಚ್ಚರಿಸುತ್ತದೆ.  ತಮ್ಮ ಮಗ ಶಾಲೆಯಲ್ಲಿ ಡೆಸ್ಕ್ ಬೆಂಚುಗಳನ್ನು ಬಳಸುತ್ತಾನೆ.  ಮನೆಯಲ್ಲಿ ಚಿಮಣಿ ಬುಡ್ಡಿಯ ಕೆಳಗೆ ನೆಲದ ಮೇಲೆ ಬಿದ್ದುಕೊಂಡು ಬರೆಯುತ್ತಾನೆ, ಓದುತ್ತಾನೆ.  ಈ ದೈಹಿಕ ಅಡಚಣಿ ಅವನಿಗೆ ಮಾನಸಿಕ ಅಡಚಣೆಯಾಗಿಯೂ ಕಾಡುತ್ತದೆ.  ಆದ್ದರಿಂದ ಅವನಿಗಾಗಿ ಒಂದು ಟೇಬಲ್ ಮತ್ತು ಖುಚರ್ಿಯನ್ನು ಮಾಡಿಕೊಡಬೇಕು ಎಂಬ ತೀಮರ್ಾನಕ್ಕೆ ಬರುತ್ತಾರೆ.  ಇದು ಈ ಕತೆಯ ಮೊದಲ ತಿರುವು. ಇಲ್ಲಿ 'ಕಾಶೀ'ಯ ಶೈಕ್ಷಣಿಕ ಮನೋಕಾಳಜಿಗೆ ಬೆರಗಾಗುತ್ತೇವೆ. 

ಮುಂದೆ ದಿನಗಳು ಸವೆದಂತೆ ಅವರ ಕುಟುಂಬಕ್ಕೆ ಹಿತೈಷಿಯಾದ  ಒಬ್ಬಳು ಹೆಣ್ಣು ಕೋಳಿಯೊಂದನ್ನು ದಾನವಾಗಿ ಕೊಡುತ್ತಾಳೆ.  ಹಾಗೆ ಕೊಡಲು ನಿರ್ಧರಿಸಿರುವುದರ ಉದ್ದೇಶ, ಆ ಹುಡುಗನಿಗೆ ದಿನಕ್ಕೊಂದು ಮೊಟ್ಟೆ ಸಿಗಬೇಕಾದ ಅಗತ್ಯವಿದೆಯೆಂಬುದನ್ನು ಅವಳು ಮನಗಂಡದ್ದು.  ಹೆಣ್ಣುಕೋಳಿ ಬರುತ್ತದೆ.  ಊರ ಗಂಡುಕೋಳಿಯೊಂದಿಗೆ ಸಹವಾಸ ಮಾಡಿದ್ದರಿಂದ ಮೊಟ್ಟೆ ಹಾಕಲು ಪ್ರಾರಂಭಿಸುತ್ತದೆ.  ಶಾಲಾ ಬಾಲಕ ಸಂತೋಷನಿಂದ ಕತೆಗೆ ದಕ್ಕಿದ ಎರಡನೆಯ ತಿರುವು ಇದು.
ಹೆಣ್ಣುಕೋಳಿ ಮೊಟ್ಟೆ ಹಾಕಲು ಅನುಕೂಲವಾಗುವಂತೆ ಒಂದು ತೂಗು ಬುಟ್ಟಿಯನ್ನು ಲಾಡು ಸಜ್ಜುಗೊಳಿಸುತ್ತಾನೆ.  ಅದರಿಂದ ಕೋಳಿಗಾದ ಅನುಕೂಲ ಕಂಡು ಇಡೀ ಕುಟುಂಬವೇ ಖುಷಿಪಡುತ್ತದೆ.  ಪ್ರತಿನಿತ್ಯ ನಿದರ್ಿಷ್ಟ ಅವಧಿಗೆ ಆ ತೂಗುಬುಟ್ಟಿಯಲ್ಲಿ ಹೋಗಿ ಕುಳಿತು ಮೊಟ್ಟೆ ಇಡುವ ಹೆಣ್ಣುಕೋಳಿ, ಆ ದಿನ ಬುಟ್ಟಿಯ ಸಹವಾಸ ಬಿಟ್ಟು ದೂರ ಕುಳಿತುಬಿಡುತ್ತದೆ.  ಇದರ ಮರ್ಮ ಅರಿಯದ ಲಾಡು, ತಲೆಯೆತ್ತರದಲ್ಲಿ ತೂಗುತ್ತಿದ್ದ ಆ ಬುಟ್ಟಿಯೊಳಗಿನ ಮೊಟ್ಟೆಗಾಗಿ ಕೈಯಾಡಿಸಿದಾಗ, ಬುಸ್ಎಂಬ ಸದ್ದುಕೇಳಿ ಬೆಚ್ಚಿಬೀಳುತ್ತಾನೆ. ಅವನಿಗೆ ಹಾವು ಕಚ್ಚುತ್ತದೆ.  ಹೆಂಡತಿಯ ಬಳಿ ಹೇಳಿಕೊಳ್ಳುತ್ತಾನೆ.  ಔಷಧಾಲಯದ ಸೌಲಭ್ಯ ಇಲ್ಲದ ಆ ದಿನಗಳಲ್ಲಿ ಮಾಡಿದ ಪ್ರಯತ್ನವೆಲ್ಲವೂ ವ್ಯರ್ಥವಾಗಿ ವಿಷವೇರಿದ ಲಾಡು ಸಾಯುತ್ತಾನೆ.
ಗಟ್ಟಿಮುಟ್ಟಾದ ಮನೆಯೊಂದನ್ನು ಕಟ್ಟಿಕೊಳ್ಳಬೇಕು, ಭದ್ರವಾದ ನೆಲೆ ಕಂಡುಕೊಳ್ಳಬೇಕು.  ಮಗನ ಓದು ಮುಗಿಯುವವರೆಗೆ ದುಡಿದುದೆಲ್ಲವನ್ನು ಭದ್ರವಾಗಿ ಕಾದಿಡಬೇಕು ಎಂದುಕೊಂಡವಳಿಗೆ, ಗಂಡನ ಅನಿರೀಕ್ಷಿತ ಸಾವಿನ ಆಘಾತದಿಂದ ಚೇತರಿಸಿಕೊಳ್ಳಲಾಗುತ್ತಿಲ್ಲ.  ತಾಯಿಯ ಅವಸ್ಥೆಯನ್ನು ಕಂಡ ಮಗ ಮನೆಯ ಹೊಣೆಗಾರಿಕೆ ಇನ್ನು ತನ್ನ ಹೆಗಲಿಗೆ ಎಂಬುದನ್ನು ಸ್ವಯಂ ಪ್ರೇರಣೆಯಿಂದ ತಾನೇ ನಿರ್ಧರಿಸಿ, ಶಾಲೆ ಬಿಟ್ಟು ಪೇಂಟಿಂಗ್ ಕೆಲಸಕ್ಕೆ ಹೋಗುವ ನಿಧರ್ಾರ ಕೈಕೊಳ್ಳುತ್ತಾನೆ.  ಮಾತ್ರವಲ್ಲ ಅದನ್ನು ತಾಯಿಗೂ ಹೇಳುತ್ತಾನೆ: ಇನ್ನು ಎರಡು ದಿನ ಮಾತ್ರ ಗಂಜಿಗೆ ಸಾಲುವಷ್ಟು ಕುಚ್ಚಿಗಕ್ಕಿ ಇದೆ; ಆದ್ದರಿಂದ ಅವ್ವ, ನಾನು ಪೇಂಟಿಂಗ್ ಕೆಲಸಕ್ಕೆ ಹೋಗಿ ದುಡ್ಡು ತರುತ್ತೇನೆ ಎಂದಾಗ, ಗಂಡನ ಸಾವಿನ ದುಃಖದಲ್ಲಿ ಮುಳುಗಿ ಉಳಿದೆಲ್ಲ ಕರ್ತವ್ಯ ಮರೆತು, ಇದ್ದೂ ಸತ್ತಂತೆ ಮಲಗಿದ ತಾಯಿಗೆ ಮಗನ ಈ ತೀಮರ್ಾನ ಮತ್ತು ಮಾತು ಬೆಚ್ಚಿಬೀಳಿಸುತ್ತದೆ. ಅವಳು ತನ್ನ ಮೂಲ ಕರ್ತವ್ಯದ ಬಗ್ಗೆ ಎಚ್ಚರಗೊಳ್ಳುತ್ತಾಳೆ.  ಆ ದಿನದಿಂದಲೇ ತಾನು ಕೂಡಿಸಿಟ್ಟ ಹಣವನ್ನು ಮಗನಿಗೆ ತೋರಿಸಿ, ಇದು ನಿನ್ನ ಓದಿಗೆ ಮತ್ತು ಇದು ಮನೆಯ ಖಚರ್ಿಗೆಂದು - ನನ್ನ ಸಲಹೆಯ ಮೇರೆಗೆ ನಿನ್ನಪ್ಪ ಕೂಡಿಸಿಟ್ಟದ್ದು.  ಆದ್ದರಿಂದ ನೀನು ನಿನ್ನ ಶಾಲೆಯ ವಿದ್ಯಾಭ್ಯಾಸವನ್ನು ಮುಂದುವರಿಸು ಎನ್ನುತ್ತಾಳೆ.  ಇದು ಬಾಲಕ ಸಂತೋಷ ಈ ಕಥೆಗೆ ನೀಡಿದ ಮೂರನೇ ತಿರುವು.

                                 -2-

ಎರಡನೆಯ ಕಥೆ ಇಷ್ಟು ದೀರ್ಘವಾಗಿಲ್ಲ.  ಆದರೆ ದುಃಖಾಂತ್ಯದಿಂದ ಕೊನೆಗೊಳ್ಳುವ ಮೂಲಕ ಓದುಗರ ಮನಸ್ಸನ್ನು ಹಿಂಡುತ್ತದೆ.  ಈ ಕಥೆಯಲ್ಲಿ ಬರುವ 'ಬಾಳಸು' ತನ್ನ ಕುಟುಂಬದೊಂದಿಗೆ ಕಡವಾಡ ಊರಿನಲ್ಲಿ ಅವನಪ್ಪ ಡೊಂಗಾ ಕಟ್ಟಿದ ಹಂಚಿನ ಮನೆಯಲ್ಲಿ ವಾಸಿಸುತ್ತಿದ್ದವನು.  ಇಲ್ಲೂ ಒಬ್ಬ ಶಾಲಾ ಬಾಲಕನಿದ್ದಾನೆ.  ಆದರೆ ಹೈಸ್ಕೂಲು ಹಂತ ತಲುಪಿದವನಲ್ಲ.  ಆ ಕುಟುಂಬದ ಉದ್ಯೋಗ ಗದ್ದೆ ಕೆಲಸ. ಅಂದರೆ ಸಸಿನೆಟ್ಟಿ, ಕಳೆ ತೆಗೆಯುವುದು ಇತ್ಯಾದಿ ಇತ್ಯಾದಿ ಕೂಲಿ ಕೆಲಸಗಳು. ಕುಚ್ಚಿಗಕ್ಕಿಯೇ ಕುಟುಂಬದ ಮುಖ್ಯ ಆಹಾರ.  ಅದರ ಸಂಗ್ರಹಣೆಗಾಗಿಯೇ ಗಂಡ 'ಬಾಳಸು', ಹೆಂಡತಿ 'ನಾಗಿ' ಕಡವಾಡ ಊರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರು. ಕೂಲಿಯ ಜೊತೆಗೆ ಬುಟ್ಟಿ, ಚಬೂಲ, ವಲರ್ಿ, ಸೂಪು, ವಲರ್ೊ, ಹಚ್ಕಿ, ಶಿಬೆ, ಬೀಸಣಿಕೆ, ಕೋಳಿ ಮುಚ್ಚುವ ಪಾಂಜು, ಶೆಣಪೆ ಇತ್ಯಾದಿಗಳನ್ನು ಹೆಣೆದು ಕಾರವಾರ ಸಂತೆಯಲಿ ಮಾರಾಟಮಾಡಿ ಮರಳಿ ಬರುವಾಗ ಕೋಳಿಗಳನ್ನು ತಂದು ಸಾಕಿ ಹಣ ಸಂಪಾದಿಸುತ್ತಿದ್ದವರು. ಒಬ್ಬನೇ ಮಗ ಚಂದ್ರಹಾಸನಿಗೆ ಶಿಕ್ಷಣ ಪಡೆಯುವಲ್ಲಿ ಅಡಚಣೆಯಾಗಬಾರದೆಂಬುದಷ್ಟೇ ತಾಯ್ತಂದೆಯರ ಉದ್ದೇಶ.
ಒಂದು ದಿನ ಮರಿಗಳೊಂದಿಗೆ ಹೊರಗೆ ಹೋದ ಕೋಳಿಯೊಂದು ಹಿತ್ತಲಿನಲ್ಲಿ ಕಸ ಸರಿಸುತ್ತ, ಸಿಕ್ಕಿದ್ದನ್ನು ತಿನ್ನುತ್ತ ಇರುವಾಗ, ಎಲ್ಲಿಂದಲೋ ಹಾರಿಬಂದ ಹದ್ದು ಕೋಳಿಮರಿಯನ್ನು ಹೊತ್ತುಕೊಂಡು ಹೋಗುತ್ತದೆ.  ಅದನ್ನು ಕಂಡ ಬಾಳಸು, ಮೈಮೇಲಿನ ಪರವೆ ಇಲ್ಲದವನಂತೆ ಓಡುವಾಗ ಬಲಗಾಲಿಗೆ ಮೊಳೆ (ಚರಕ) ತಾಗಿ ಎರಡೂ ಬೆರಳುಗಳ ಮಧ್ಯದಿಂದ ಮೇಲೆ ಬರುತ್ತದೆ.  ಗಂಡ ಚೀರಿದ ಧ್ವನಿ ಕೇಳಿದ ನಾಗಿ ಇದ್ದೆಲ್ಲ ಶಕ್ತಿ ಹಾಕಿ ಮೊಳೆ ತೆಗೆಯುತ್ತಾಳೆ.  ತುಕ್ಕು ಹಿಡಿದ ಉದ್ದ ಕಬ್ಬಣದ ಮೊಳೆ ತಳದಿಂದ ಮೇಲ್ಭಾಗವನ್ನು ಕತ್ತರಿಸಿ ಬಂದಿತ್ತು.  ಊರಿನ ಗಾಂವಟಿ ಔಷಧಿಗೆ ಎಲ್ಲರೂ ಮೊರೆಹೋದರು. ಸುಟ್ಟ ಬಟ್ಟೆಯ ಬಿಸಿ ಬೂದಿ ಹಚ್ಚಿದರು. ಇದಕ್ಕೆ ಅದೇ ಪಕ್ಕಾ ಔಷಧಿ ಎಂದರು. ಗಾಡಗರ ಮನೆಗಳನ್ನೂ ಅಲೆದರು. ಹದಿನೈದು ದಿನ ಆಗುವಾಗ ಒಣಗಿದಂತೆ ಕಂಡ ಗಾಯ, ಒಂದು ದಿನ ಇದ್ದಕ್ಕಿದ್ದಂತೆ ಹೆಚ್ಚಾಗಿ ಬಾಳಸು ಚಡಪಡಿಸತೊಡಗಿದ.  ಈ ನಡುವೆ ಕರಿನಾಸ, ಮಾಂಡಾನಾಸ, ಜಟಕೊ, ಬಮರ್ೊ, ಜನಿ, ಕುಟಿ ಮುಂತಾದ ಗ್ರಾಮೀಣ ನಂಬಿಕೆಯಲ್ಲಿ ಬೆಳೆದ ದೇವರುಗಳಲ್ಲೆಲ್ಲ ಹರಕೆ ಹೊತ್ತದ್ದಾಯಿತು.  ಮುಂದಿನ ಜಾತ್ರೆಗೆ ಉಪವಾಸ ಇದ್ದು ಸೇವೆ ಅಪರ್ಿಸುತ್ತೇವೆ ಎಂದು ಗಂಡಹೆಂಡಿರಿಬ್ಬರೂ ಹೇಳಿಕೊಂಡರು.  ಮಧ್ಯಾಹ್ನವಾಗುತ್ತ ಬಂದಂತೆ ಬಾಳಸುಗೆ ನೋವು ತಡೆಯಲಾಗಲಿಲ್ಲ.  ಕಣ್ಣಿಗೆ ಕತ್ತಲೆ ಬಂದಂತೆ, ಕೈಕಾಲು ಸೋತು ಸತ್ತಂತೆ! ಈ ವಿಚಾರಕ್ಕೆ ಅಲ್ಲಿ ನೆರೆದ ಊರವರೆಲ್ಲ ಜೋಯಿಸರಲ್ಲೊ, ಗಾಡಗರಲ್ಲೊ, ಊರ ಸಣ್ಣಪುಟ್ಟ ದೇವರುಗಳಲ್ಲೊ ಕೇಳುವ ಮಾತನಾಡಿದರೇ ಹೊರತು, ಆಸ್ಪತ್ರೆಯ ಸುದ್ದಿ ಎತ್ತಲಿಲ್ಲ.  
ನಾಗಿಗೆ ತನ್ನ ಅಣ್ಣನ ನೆನಪಾಗುತ್ತಿದ್ದಂತೆ ಅವನಿಗೆ ಸುದ್ದಿ ಮುಟ್ಟಿಸುತ್ತಾಳೆ.  ಆತ ಬರುತ್ತಾನೆ. ತತ್ಕ್ಷಣ ಸಿಕ್ಕಿದ ಸೈಕಲ್ ಮೇಲೆ ಕೂಡ್ರಿಸಿ ಆಸ್ಪತ್ರೆಗೆ ಕೊಂಡೊಯ್ಯುತ್ತಾನೆ.  ತಂಗಿಯ ಮನೆಗೆ ಬಂದು ಬಾವನನ್ನು ಆಸ್ಪತ್ರೆಗೆ ಸಾಗಿಸಿದ ಅಣ್ಣ ಈತನ ಸ್ಥಿತಿ ಕಂಡು ಎದೆಗುಂದುತ್ತಾನೆ.  ಡಾಕ್ಟರರು, ನರ್ಸಗಳು, ಟೆಕ್ನೀಶಿಯನ್ ಇವರೆಲ್ಲ - ಕೇಸು ಸೀರಿಯಸ್ ಆಗಿದೆ ಎಂಬುದನ್ನು ಭಾವಿಸಿ ಸಂಬಂಧಪಟ್ಟವರಿಗೆ ಎಚ್ಚರಿಸುತ್ತಾರೆ. ಅತೀ ತುತರ್ಾಗಿ ಟಿಟಿ. ಇಂಜೆಕ್ಷನ್ ಕೊಡಬೇಕಿತ್ತು, ಆದ್ದರಿಂದ ಹೀಗಾಗಿದೆ.  ಸಲಾಯನ್ ಹಾಕಿದ್ದೇವೆ.  ನಮ್ಮಿಂದಾದಷ್ಟು ಪ್ರಯತ್ನ ಮಾಡುತ್ತೇವೆ ಎಂದೆಲ್ಲ ಹೇಳಿದ ಡಾಕ್ಟರ್, ನಾಲ್ಕು ತಾಸು ಬಿಟ್ಟು ಮತ್ತೆ ಬರುವುದಾಗಿ ಹೇಳಿ ಮನೆಗೆ ಹೋಗುತ್ತಾರೆ.  ಆದರೆ ತುತ್ತನ್ನ ಬಾಯಿಗಿಡುವ ಮೊದಲೇ ಸಿಸ್ಟರ್ ಫೋನ್.  ಕೇಸು ಸೀರಿಯಸ್ ಆಗಿದೆ.  ಪಲ್ಸ್ ಕೆಲಸ ಮಾಡುತ್ತಿಲ್ಲ! ಡಾಕ್ಟರ್ ಬಂದು ನೋಡಿ, ಬಾಳಸು ಸತ್ತದ್ದನ್ನು ದೃಢೀಕರಿಸುವಲ್ಲಿಗೆ ಕಥೆ ಮುಗಿಯುತ್ತದೆ.
ಮೊದಲನೆಯ ಕಥೆಯಲ್ಲಿ ಬೆಳಕನ್ನು ಹಿಡಿಯುವ ಎಚ್ಚರ ಇದ್ದರೆ, ಎರಡನೆಯ ಕಥೆಯಲ್ಲಿ ಕತ್ತಲನ್ನೇ ತಬ್ಬಿಕೊಂಡ ಮೌಢ್ಯ ತುಂಬಿಕೊಂಡದ್ದನ್ನು ಸುಲಭವಾಗಿ ಗುರುತಿಸಬಹುದಾಗಿದೆ.  ಎರಡೂ ಕಥೆಯೊಳಗಿನ ಪಾತ್ರಗಳ ಉದ್ಯೋಗ, ಸಂಸ್ಕೃತಿ, ಮಕ್ಕಳನ್ನು ಓದಿಸುವ ಹಂಬಲ ಸರಿಯಾಗಿದ್ದರೂ ಮೂಢನಂಬಿಕೆಗೇ ಆಂತುಕೊಂಡ ಎರಡನೆಯ ಕಥೆಯ ಜೀವಗಳು ನಿರಂತರ ದುಡಿಮೆಯ ಬಾಳಸುವನ್ನು ವಿನಾಕಾರಣ ಕಳೆದುಕೊಂಡದ್ದನ್ನು ಕಾಣಬಹುದಾಗಿದೆ.
ಈ ಎರಡೂ ಕಥೆಗಳನ್ನು ಬರೆದ ಎಂ.ಎ. ಖತೀಬ್ ಅಸಮಾನ್ಯ ಸಂಯಮದಿಂದ ಇಲ್ಲಿಯ ಕತೆಗಳನ್ನು  ಬೆಳೆಸುತ್ತ ಹೋದರೂ ದುಡಿಸಿಕೊಂಡ ಭಾಷೆಯ ಸೊಗಡು ಚೆನ್ನಾಗಿಯೇ ಇದ್ದರೂ, ಹಳ್ಳಿಯ ಅಜ್ಜಿ ಮೊಮ್ಮಕ್ಕಳಿಗೆ ಹೇಳಿದ ಕತೆಯಂತೆ ನೇರವಾಗಿದೆ.  ಇಲ್ಲಿ ಬಳಕೆಯಾದ ಗ್ರಾಮೀಣ ಪದಗಳು, ಅದರಲ್ಲೂ ಅವರ ಉದ್ಯೋಗಕ್ಕೆ ಹೊಂದಿಕೆಯಾಗುವ ಪದಗಳು, ಗ್ರಾಮೀಣ ದೇವರುಗಳ ಹೆಸರುಗಳೆಲ್ಲ ಓದುಗರನ್ನು ಸೆಳೆಯುತ್ತವೆ.  ಕೊಂಕಣಿ, ಮರಾಠಿ ಮತ್ತು ಕನ್ನಡ ಪದಗಳು ಪರಸ್ಪರ ಪ್ರಭಾವ ಬೀರಿವೆ.  ಕತೆಯ ಸರಳತನ ಮತ್ತು ನೇರತೆ ಲೇಖಕರ ಗುಣವೂ ಹೌದು ಮಿತಿಯೂ ಹೌದು ಎನಿಸುತ್ತದೆ.
                                                                      -ವಿಷ್ಣು ನಾಯ್ಕ 
ಪರಿಮಳ, ಅಂಬಾರಕೊಡ್ಲ
ಅಂಕೋಲಾ-581314
ಉತ್ತರ ಕನ್ನಡ ಜಿಲ್ಲೆ
ಮೊಬೈಲ್: 09448145370 

                             

'ಯಕ್ಷಗಾನ ಕೈಪಿಡಿ'ಯ ಮುನ್ನುಡಿ - ಎಂ.ಎ. ಹೆಗಡೆ

'ಯಕ್ಷಗಾನ ಕೈಪಿಡಿ'ಯ ಮುನ್ನುಡಿ
1955 ರಲ್ಲಿ ಪ್ರಥಮ ಮುದ್ರಣವನ್ನು ಕಂಡ ಸೋಂದಾ ಕೃಷ್ಣ ಭಂಡಾರಿಯವರ 'ಯಕ್ಷಗಾನ ಕೈಪಿಡಿ'ಯು ಈಗ ಪುನಮರ್ುದ್ರಣವನ್ನು ಕಾಣುತ್ತಿದೆ. ಮುದ್ರಿತವಾದ ಪ್ರತಿಯನ್ನು ಹರಸಾಹಸದಿಂದ ಹುಡುಕಿ ಮರುಮುದ್ರಣಕ್ಕೆ ಅಣಿಗೊಳಿಸಬೇಕಾದ ಪರಿಸ್ಥಿತಿ. ಅಂಥ ಸಾಹಸಕ್ಕಾಗಿ ಪ್ರಕಾಶಕರು ಅಭಿನಂದನೆಗೆ ಅರ್ಹರು.
'ಯಕ್ಷಗಾನ ಕೈಪಿಡಿ'ಯನ್ನು ಬರೆಯುವುದಕ್ಕೆ ಭಂಡಾರಿಯವರನ್ನು ಪ್ರೇರಿಸಿದ ಸಂಗತಿಗಳ ಬಗೆಗೆ ಅವರೇ 'ಲೇಖಕರ ವಿಜ್ಞಾಪನೆಗಳು' ಎಂಬಲ್ಲಿ ಹೇಳಿಕೊಂಡಿದ್ದಾರೆ. ಸಂಗೀತ, ನಾಟಕ, ಚಲನಚಿತ್ರಗಳ ಪ್ರಭಾವದಿಂದ ಯಕ್ಷಗಾನ ಪರಂಪರೆಯು ನಷ್ಟವಾಗುತ್ತಿರುವುದನ್ನು ಕಂಡು ಅವರಿಗೆ ಆತಂಕವುಂಟಾಯಿತು. ಯಕ್ಷಗಾನವು ತನ್ನ ವೈಶಿಷ್ಟ್ಯಗಳನ್ನು ಒಂದೊಂದಾಗಿ ಕಳೆದುಕೊಳ್ಳುತ್ತ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದೆಂಬ ಭಾವ ಬಲಿಯತೊಡಗಿತು. ಇಂಥ ಸಂದರ್ಭದಲ್ಲಿ ಯಕ್ಷಗಾನದ ಪರಂಪರೆಯು 'ಹೀಗಿದೆ' ಎಂಬುದನ್ನು ಮುಂದಿನವರಿಗೆ ತಿಳಿಸಬೇಕೆಂಬ ಅಭಿಲಾಷೆಯಿಂದ, ಕಲಾವಿದರನ್ನು ಪ್ರೇಕ್ಷಕರನ್ನೂ ಎಚ್ಚರಿಸುವ ದೃಷ್ಟಿಯಿಂದ ಶ್ರಮ ವಹಿಸಿ ಗ್ರಂಥವನ್ನು ರಚಿಸಿದರು.
ಆ ಕಾಲದ ಅನೇಕ ಹಿರಿಯರಿಗೆ ಕಲಾತಜ್ಞರಿಗೆ ಇದೇ ಅಭಿಪ್ರಾಯವಿತ್ತೆಂಬುದು ಅವರ ಮಾತುಗಳಿಂದ ಸ್ಪಷ್ಟವಾಗಿದೆ. ತ್ಯಾಗಲಿ, ಸಿಸರ್ಿ, ಸೋಂದಾಗಳಲ್ಲಿ ಯಕ್ಷಗಾನ ಸಮ್ಮೇಳನಗಳು ನಡೆದು ಅಲ್ಲಿಯೂ ಅದೇ ತೆರನಾದ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಸುಮಾರು 1950 ರಲ್ಲಿ ಪ್ರಕಟಗೊಂಡ ವಿದ್ವಾನ್ ರಾ.ಭ. ಹಾಸಣಗಿಯವರ 'ಯಕ್ಷನಾಟಕಗಳು' ಎಂಬ ಕೃತಿಯಲ್ಲಿಯೂ ಇಂಥದೇ ಅಭಿಪ್ರಾಯ ವ್ಯಕ್ತಗೊಂಡಿದ್ದಾಗಿ ನೆನಪು. ಆ ಪುಸ್ತಕದ ಪ್ರತಿಗಳೂ ಈಗ ಸಿಗುತ್ತಿಲ್ಲ.
ಡಾ. ಶಿವರಾಮ ಕಾರಂತರ 'ಯಕ್ಷಗಾನ ಬಯಲಾಟ' ಎಂಬ ಕೃತಿಯ ರಚನೆಗೂ ಇದೇ ಸಂಗತಿಯೇ ಪ್ರೇರಕವಾಗಿರುವುದನ್ನು ಗಮನಿಸಬಹುದು. ಡಾ. ಕಾರಂತರ ಕೃತಿಯು 1957 ರಲ್ಲಿ ಪ್ರಕಟವಾಯಿತೆಂಬುದನ್ನು ಇಲ್ಲಿ ಗಮನಿಸಬೇಕು. ಡಾ. ಕಾರಂತರ ಅಧ್ಯಯನದ ವ್ಯಾಪ್ತಿ ವಿಸ್ತಾರಗಳೂ ಉಪಯುಕ್ತತೆಯೂ ಬೇರೆಯದೇ ಆದರೂ, ಯಕ್ಷಗಾನದ ಶ್ರೀಮಂತ ಪರಂಪರೆಯನ್ನು ಉಳಿಸುವ ಕಾಳಜಿಯು ಸಮಾನವಾಗಿತ್ತೆಂಬುದನ್ನು ಗಮನಿಸಬಹುದು.

ಕಲೆಯು ನಿಂತ ನೀರಲ್ಲ ; ಹರಿಯುತ್ತಿರುವ ಪ್ರವಾಹ. ಅದರ ಹರಿವನ್ನು ತಡೆಯಲಾಗುವುದಿಲ್ಲ. ಹರಿವಿನ ರಭಸವನ್ನು ತಡೆಗಟ್ಟುವ ಪ್ರಯತ್ನವನ್ನು ಮಾಡಬಹುದು. ಕೊಚ್ಚಿಕೊಂಡು ಹೋಗುವಾಗ ಆಗಬಹುದಾದ ಹಾನಿಯನ್ನು ಕಡಿಮೆಗೊಳಿಸಲು ಹವಣಿಸಬಹುದು. ಡಾ. ಕಾರಂತರು ಹವಣಿಸಿದ್ದು ಅದನ್ನೇ. ಕೃಷ್ಣ ಭಂಡಾರಿಯವರ ಲಕ್ಷ್ಯವೂ ಅದೇ. ಮುಂದೆ ಮುಂದೆ ಸಾಗುತ್ತ ಬಂದವರಿಗೆ ಎಲ್ಲಿಂದ ಹೊರಟಿದ್ದೇವೆನ್ನುವುದೇ ಮರವೆಯಾಗಬಾರದು. ಅದನ್ನು ನೆನಪಿಸಿಕೊಳ್ಳಲು ಈ ಕೃತಿಯ ನೆರವು ಬಹಳ.
ಕೃಷ್ಣ ಭಂಡಾರಿಯವರು ಬದುಕಿದ್ದು ಬಾಳಿದ್ದು ಉತ್ತರಕನ್ನಡದ ನೆಲದಲ್ಲಿ. ಅವರು ಮದ್ದಳೆ ವಾದಕರಾಗಿ ಪ್ರಸಿದ್ಧರಾದವರು. ಆದರೆ ಅವರ ತಿಳಿವು ಮದ್ದಳೆಗೆ ಸೀಮಿತವಾಗಿರಲಿಲ್ಲ. ಯಕ್ಷಗಾನದ ಅಂಗೋಪಾಂಗಗಳ ತಲಸ್ಪಶರ್ಿಯಾದ ಜ್ಞಾನವುಳ್ಳವರಾಗಿದ್ದರು. ಇಲ್ಲಿನ ರಂಗಸಂಪ್ರದಾಯಗಳೆಲ್ಲವನ್ನೂ ಚೆನ್ನಾಗಿ ಬಲ್ಲವರು. ಯಕ್ಷಗಾನವು ಶಾಸ್ತ್ರೀಯವೆನಿಸಿಕೊಳ್ಳಬೇಕಾದರೆ ಭರತಶಾಸ್ತ್ರದ ನಿಯಮಗಳಿಗೆ ಬದ್ಧವಾಗಿರಬೇಕೆಂದು ಅಪೇಕ್ಷಿಸಿದವರು. ಅದಕ್ಕೆ ಪುಷ್ಪಾಂಜಲಿಯಂಥ ಹೊಸಕ್ರಮವನ್ನು ಅವರು ಸೂಚಿಸುತ್ತಾರೆ. 
ಕೃಷ್ಣ ಭಂಡಾರಿಯವರು ಕೃತಿಯನ್ನು ರಚಿಸುವ ಕಾಲಕ್ಕಾಗಲೇ ಅನೇಕ ಸಂಪ್ರದಾಯಗಳು ಮಾಯವಾಗಿದ್ದವು. ಈಗ ಇನ್ನಷ್ಟು ಕಾಲ ಸಂದಿದೆ. ಮತ್ತಷ್ಟು ಬದಲಾವಣೆಗಳಾಗಿವೆ. ಹಾಗಾಗಿ ಈ ಕಾಲಕ್ಕೆ ಅವರ ಕೃತಿಯು ಪ್ರಸ್ತುತವೆನ್ನಿಸಲಿಕ್ಕಿಲ್ಲ. ಆದರೆ ಪ್ರಾಚೀನವಾದ ಸಂಪ್ರದಾಯಗಳನ್ನು ತಿಳಿದುಕೊಳ್ಳುವ ಅಭಿಲಾಷೆಯುಳ್ಳವರಿಗೆ ಇದು ಅತ್ಯಮೂಲ್ಯವಾದ ಸಂಗ್ರಾಹ್ಯ ಕೃತಿಯೆನ್ನುವುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ಅದು ಕೇವಲ ಸಂಪ್ರದಾಯದ ರಕ್ಷಣೆಯ ಬಗೆಗೆ ಹೇಳುವುದಿಲ್ಲ. ನಮಗೆ ಬೇಕಾದ ವಿವರಗಳನ್ನು ಯಥೇಚ್ಛವಾಗಿ ಒದಗಿಸುತ್ತದೆ.
ಪರಂಪರೆಯ ಪುನರುಜ್ಜೀವನದ ಬಗೆಗೆ ಅಥವಾ ಅದರ ಪರಿಷ್ಕೃತ ಪ್ರಯೋಗದ ಬಗೆಗೆ ಆಸಕ್ತಿಯುಳ್ಳವರು ಅನೇಕರಿದ್ದಾರೆ. ಅವರಲ್ಲಿ ಸಾಕಷ್ಟು ಜನ ಕಲಾವಿದರೂ ಇದ್ದಾರೆ. ಕಲಾವಿದರ ಪಾಲಿಗೆ ವಿವರಗಳು ಮುಖ್ಯವಾಗುತ್ತವೆ. ಇಂಥ ವಿವರಗಳು ವಿಚಾರಗೋಷ್ಠಿಗಳಲ್ಲಿ ಭಾಗವಹಿಸುವ ಪರಿಣತರಿಂದಲೂ ದೊರೆಯುವುದಿಲ್ಲ. ಅಲ್ಲಿ ವಿವರಗಳನ್ನು ಕುರಿತು ಚಚರ್ಿಸಲು ಸಾಧ್ಯವಾಗದ ಒತ್ತಡವಿರುತ್ತದೆ. ಕೆಲವೊಮ್ಮೆ ಪರಿಣತರು ರಂಗದ ಅಂತರಂಗವನ್ನು ಬಲ್ಲವರಾಗಿರುವುದಿಲ್ಲ. ಉದಾ: ಕೃಷ್ಣ ಒಡ್ಡೋಲಗ. ಪ್ರಾಚೀನ ಕ್ರಮವನ್ನು ಅಳವಡಿಸಬೇಕೆಂದು ಹೇಳುವುದಕ್ಕೆ ಯಾರೂ ಆದೀತು. ವಿವರಗಳನ್ನು ಒದಗಿಸಲಿಕ್ಕಾದೀತೇ? ಬಳಸುವ ಪದ್ಯ ಬಿಡ್ತಿಗೆ ಇತ್ಯಾದಿಗಳನ್ನು ತಿಳಿಯುವುದು ಹೇಗೆ? ಅಂಥಲ್ಲಿ ಈ ಕೈಪಿಡಿಯು ನೆರವಿಗೆ ಬರುತ್ತದೆ. ಅದನ್ನು ಯಥೇಚ್ಛವಾಗಿ ಬಳಸಿಕೊಳ್ಳಬಹುದು.
ಇಂದು ಯಕ್ಷಗಾನದ ಕುರಿತು ಅಧ್ಯಯನ-ಸಂಶೋಧನೆಗಳೂ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿವೆ. ಅಂಥವರಿಗೆ ಇದೊಂದು ಆಕರಗ್ರಂಥವಾಗಬಹುದಾಗಿದೆ. ಹೀಗೆ ಹಲವಾರು ದೃಷ್ಟಿಗಳಿಂದ ಉಪಯುಕ್ತವಾಗಿದ್ದ ಈ ಕೃತಿಯ ಪ್ರತಿಗಳು ಅಲಭ್ಯವಾಗಿದ್ದು ಒಂದು ಕೊರತೆಯಾಗಿತ್ತು. ಅದು ಪುನಃ ಮುದ್ರಿತವಾಗುತ್ತಿರುವುದರಿಂದ ಆ ಕೊರತೆಯು ನೀಗಿದಂತಾಯಿತು. ಅಂಥದೊಂದು ಪ್ರಯತ್ನಕ್ಕೆ ತೊಡಗಿದ ಡಾ. ವಿಠ್ಠಲ ಭಂಡಾರಿಯವರು ಯಕ್ಷಗಾನ ಪ್ರೇಮಿಗಳೆಲ್ಲರ ಅಭಿನಂದನೆಗೆ ಪಾತ್ರರಾಗಿದ್ದಾರೆ. ಯಕ್ಷಗಾನಾಸಕ್ತರು ಈ ಪ್ರಯತ್ನಕ್ಕೆ ಯಥೋಚಿತವಾಗಿ ಪ್ರತಿಸ್ಪಂದಿಸಿದರೆ ಅದು ಸಾರ್ಥಕವೆನಿಸೀತು.
- ಎಂ.ಎ. ಹೆಗಡೆ
ಶಿರಸಿ
5-12-2013

'ಯಕ್ಷಗಾನ ಕೈಪಿಡಿ' ರಚಿಸಿದ ಕೃಷ್ಣ ಭಂಡಾರಿ ಸೋಂದಾ - - ಡಾ. ವಿಠ್ಠಲ ಭಂಡಾರಿ, ಕೆರೆಕೋಣ

                                           
       ಈಗಲೂ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಜನಪ್ರಿಯವಾದ ಮಾಧ್ಯಮ ಎನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಹವ್ಯಾಸಿ ತಂಡ, ವೃತ್ತಿ ಮೇಳ, ಹರಕೆಯ ಆಟಗಳ ಮೂಲಕ ಯಕ್ಷಗಾನ ಇಂದು ನೋಡುಗರನ್ನು ಪ್ರಭಾವಿಸಿದೆ. ಕಾಲದಿಂದ ಕಾಲಕ್ಕೆ ಹಲವು ಬದಲಾವಣೆಗೆ-ಪಠ್ಯದಲ್ಲಿಯೂ ಪ್ರದರ್ಶನದಲ್ಲಿಯೂ- ತೆರೆದುಕೊಂಡಿದೆ. ಯಕ್ಷಗಾನಕ್ಕೆ ವಿದ್ಯಾವಂತ ವರ್ಗದ ಪ್ರವೇಶದಿಂದಾಗಿ 'ಮಾತುಗಾರಿಕೆ' ಇನ್ನಷ್ಟು ಹೆಚ್ಚು ಚುರುಕುಗೊಂಡಿದೆ; ವಿಸ್ತಾರಗೊಂಡಿದೆ. ಕ್ವಚಿತ್ತಾದ ಉದಾಹರಣೆಯನ್ನು ಹೊರತುಪಡಿಸಿದರೆ ಇದು ಬಹುತೇಕ ಸಂದರ್ಭದಲ್ಲಿ ಸಾಂಪ್ರದಾಯಿಕ ಚೌಕಟ್ಟನ್ನು ದಾಟಿ ಹೋದಂತೇನೂ ಅನ್ನಿಸುವುದಿಲ್ಲ. ಆದರೆ ಭಾಗವತಿಕೆ ಕುಣಿತ ಮತ್ತು ಅಭಿನಯಗಳು ಭಿನ್ನ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಮುಖ್ಯ ರಾಗಗಳು, ಮುದ್ರೆಗಳು, ರಂಗಚಲನೆಗಳು ಮರೆಯಾಗಿ ಇತಿಹಾಸದ ಸಂಗತಿಯಾಗುತ್ತಿರುವದನ್ನು ಹಲವು ವಿದ್ವಾಂಸರು ಗುರುತಿಸಿದ್ದಾರೆ. ಈ ಚಹರೆ ಇಂದಿನದು ಮಾತ್ರವಲ್ಲ 1955ರಲ್ಲಿ 'ಯಕ್ಷಗಾನ ಕೈಪಿಡಿ' ರಚಿಸಿದ ಕೃಷ್ಣ ಭಂಡಾರಿ ಸೋಂದಾ ಅವರ ಕಲದ್ದೂ ಆಗಿತ್ತು. ....ಕನ್ನಡಿಗರ ಪ್ರಾಚೀನ ಕಲೆಯಾದ ಈ ಯಕ್ಷಗಾನವು ತನ್ನ ವೈಶಿಷ್ಟ್ಯವನ್ನೇ ಕಳೆದುಕೊಳ್ಳತೊಡಗಿ ಕಾಲಾನಂತರದಲ್ಲಿ ಇದರ ಅಸ್ತಿತ್ವಕ್ಕೂ ಲೋಪ ಬರಬಹುದೆಂಬ ಭ್ರಾಂತಿ ಅನೇಕ ಶ್ರದ್ಧಾವಂತ ಯಕ್ಷಗಾನ ಭಕ್ತರಲ್ಲಿ ಉಂಟಾಗತೊಡಗಿತು. ಎನ್ನುವ ಆತಂಕ ಭಂಡಾರಿಯವರನ್ನು ಅಂದು ಕಾಡಿತ್ತು. ಇದರ ಫಲವೇ ಈ ಕೃತಿ ರಚನೆ ಎನ್ನುವುದು ಸ್ಪಷ್ಟವಾಗಿದೆ. 
                                                       
ಚಾರಿತ್ರಿಕ ಮಹತ್ವ :
ಸುಮಾರು 1955ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡು ಜನಮಾನಸದಿಂದ ದೂರವಾದ 'ಯಕ್ಷಗಾನ ಕೈಪಿಡಿ' ಒಂದು ಚಾರಿತ್ರಿಕ ಮಹತ್ವದ ಕೃತಿಯಾಗಿರುವುದರಿಂದ ಬಂಡಾಯ ಪ್ರಕಾಶನ ಇದನ್ನು ಪ್ರಕಟಿಸಲು ಮುಂದಾಗಿದೆ. ನಿದರ್ಿಷ್ಟ ಚಾರಿತ್ರಿಕ ಘಟ್ಟದಲ್ಲಿ 'ಯಕ್ಷಗಾನ', ಸಾಹಿತ್ಯಿಕ ಮೌಲ್ಯದ ದೃಷ್ಟಿಯಿಂದ ಹಾಗೂ ರಂಗ ಪ್ರದರ್ಶನದ ದೃಷ್ಟಿಯಿಂದಲೂ ಹೊರಳಿಕೊಳ್ಳುತ್ತಿರುವ ಸಂಧಿಕಾಲವನ್ನು ಇದು ದಾಖಲಿಸುತ್ತದೆ. ಈಗಿತ್ತ ಸಂಗೀತ ನಾಟಕ-ಚಲಚ್ಚಿತ್ರಗಳ ಯುಗಾರಂಭವಾದ ಮೇಲೆ ಅದರ ಥಳುಕು-ಸೆಳಕುಗಳ ಸಂಸರ್ಗ ಈ ಕಲೆಯ ಸೇವಕರಲ್ಲಿಯೂ ಆಗತೊಡಗಿ ಮುಖ್ಯತಃ ನಟರ ವೇಷ, ಭೂಷಣ, ನೃತ್ಯ ಮತ್ತು ಅಭಿನಯ, ಹಾಡುಗಾರಿಕೆಯಲ್ಲಿಯೂ ಅವುಗಳ ಪ್ರಭಾವ ಕಂಡುಬರುತ್ತಿದ್ದುದು ಎಲ್ಲರೂ ಅರಿತ ಮಾತಾಗಿದೆ. ಎಂದು ಯಕ್ಷಗಾನ ತನ್ನ ಮೂಲಸ್ವರೂಪ ಕಳೆದು ಕೊಳ್ಳುವುದಕ್ಕೆ ಕಾರಣವಾದ ಅನ್ಯ ಪ್ರಭಾವದ ಕುರಿತು ಗಮನ ಸೆಳೆಯುತ್ತಾರೆ. ತಾನು ಈ ಕೃತಿ ರಚನೆ ಮಾಡುವ ಕಾಲದಲ್ಲಿ ಹಲವು ಹಳೆಯ ರಾಗಗಳು, ಹೆಜ್ಜೆಗಳು ಮಾಯವಾಗಿವೆ ಎಂದು ಲೇಖಕರು ಹೇಳುತ್ತಾರೆ. ಆದರೆ ಅವೆಲ್ಲವನ್ನೂ ಇಲ್ಲಿ ದಾಖಲಿಸಿದ್ದಾಗಿಯೂ ಹೇಳಿದ್ದಾರೆ. ಈ ಕೃತಿ ರಚನೇ ಆದ ಎರಡು ವರ್ಷದ ನಂತರ ಅಂದರೆ 1957 ರಲ್ಲಿ ರಚಿಸಲ್ಪಟ್ಟ 'ಯಕ್ಷಗಾನ ಬಯಲಾಟ' ಕೃತಿಯಲ್ಲಿ ಕೋಟ ಶಿವರಾಮ ಕಾರಂತರು ಕೂಡ  ಯಕ್ಷಗಾನದ ಪಾಲಿಗೆ ಈಗ ಒಂದು ಸಂಧಿ ಕಾಲವೇ ಬಂದಂತಿದೆ. ಅದನ್ನು ಜನರು ಪ್ರೋತ್ಸಾಹಿಸದೇ ಬೀಳುಬಿಡುತ್ತಿದ್ದಾರೆ-ಎಂಬುದಕ್ಕಿಂತಲೂ ಹೆಚ್ಚಿನ ದು:ಖ ಆ ಕಲೆಯ ಆಳ, ಶಕ್ತಿಯನ್ನರಿಯದೆ ಅದಕ್ಕೆ ಅಪಚಾರ ಮಾಡುತ್ತಿದ್ದಾರಲ್ಲ ಎಂಬುದು. ಇದನ್ನು ತಡೆಯುವ ದಾರಿ ಯಾವುದು-ಎಂದು ನಾವು ಯೋಚಿಸಬೇಕಾದ ಕಾಲ ಬಂದಿದೆ. ನಾವಿನ್ಯತೆಯ ಮೋಹ ಈ ದೇಶೀಯ ಕಲೆಗೆ ಮೃತ್ಯುವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದನ್ನು ಕಾಣಬಹುದು( 1957;ಪುಟ:22-23, ಹರ್ಷ ಮುದ್ರಣ, ಪ್ರಕಟನಾಲಯ; ಪುತ್ತೂರು, ದ. ಕ). ಬಹುಶಃ ಈಗ ಇವುಗಳಲ್ಲಿ ಇನ್ನಷ್ಟು ಇತಿಹಾಸದ ಪುಟ ಸೇರಿರಬೇಕು. ಆದ್ದರಿಂದ ಕಾಲಕಾಲಕ್ಕೆ ನಡೆದ ಬದಲಾವಣೆಯ ಅಧ್ಯಯನಕ್ಕೆ ಸಂಶೋಧಕರಿಗೆ ಇದೊಂದು ಆಕರ ಗ್ರಂಥವಾಗಬಹುದು ಎನ್ನುವುದು ಪ್ರಕಾಶನದ ಆಶಯ. 
ಪುಸ್ತಕದ ಮೊದಲ ಭಾಗದಲ್ಲಿ ಕಲೆಯ ಉಗಮ ಮತ್ತು ಸ್ವರೂಪದ ಚಚರ್ೆಗೆ - ನಾದೋತ್ಪತ್ತಿಯ ಲಕ್ಷಣ, ನಾದಲಕ್ಷಣದಿಂದ ಪ್ರಾರಂಭಿಸಿ ಸೂತ್ರಧಾರಿಯ ಲಕ್ಷಣದವರೆಗೆ- ಸಂಬಂಧಿಸಿದಂತೆ ಭರತನ ನಾಟ್ಯಶಾಸ್ತ್ರದ ಹಲವು ಶ್ಲೋಕಗಳನ್ನು ಅರ್ಥ ಸಹಿತವಾಗಿ ವಿವರಿಸಲಾಗಿದೆ. ಹೀಗೆ ಮಾಡುವಾಗೆಲ್ಲಾ ನಾಟ್ಯ, ತಾಳ, ನಾದ, ಭಾಷೆ ಇತ್ಯಾದಿಗಳನ್ನೆಲ್ಲಾ ದೈವದ ಕೊಡುಗೆಯಾಗಿಯೇ ನೋಡುವ ಸಾಂಪ್ರದಾಯಿಕ ನೋಟವಿದೆ.  ಕಲೆಯ ಉಗಮದ ಕುರಿತು ಭರತನ 'ನಾಟ್ಯ ಶಾಸ್ತ್ರ'ದ ನಿಲುವುಗಳನ್ನು (ನಾಟ್ಯ ಶಾಸ್ತ್ರದ ಚಾರಿತ್ರಿ ಮಹತ್ವವನ್ನು ಒಪ್ಪಿಕೊಳ್ಳುತ್ತಲೇ) ಒಪ್ಪಲು ಸಾಧ್ಯವಿಲ್ಲ ಎನ್ನುವುದು ಬೇರೆ ಮಾತು. ಆದರೆ ಕೃಷ್ಣ ಭಂಡಾರಿಯವರು ಭರತನ ನಾಟ್ಯಶಾಸ್ತ್ರವನ್ನು ಉತ್ತರ ಕನ್ನಡಕ್ಕೆ ವಿಶಿಷ್ಟವಾದ ಯಕ್ಷಗಾನದೊಂದಿಗೆ ಅನುಸಂಧಾನ ಮಾಡುತ್ತಿರುವುದು ತೀರಾ ಮುಖ್ಯವಾದುದು. ಬಹುವಿಸ್ತಾರವಾದ ಭೂಮಿಕೆ ಉಳ್ಳ ಭರತನ ಸಿದ್ಧಾಂತವನ್ನು ಸ್ಥಳೀಯತೆಯೊಂದಿಗೆ ಇಟ್ಟು ನೋಡುವ ಆ ಮೂಲಕ ಯಕ್ಷಗಾನಕ್ಕೊಂದು ಶಾಸ್ತ್ರೀಯ ಚೌಕಟ್ಟನ್ನು ರೂಪಿಸಲು ಅವರು ನಡೆಸಿದ ಪ್ರಯತ್ನವನ್ನು ಇಲ್ಲಿ ಚಾರಿತ್ರಿಕವಾಗಿ ಗಮನಿಸಬಹುದು. ದಕ್ಷಿಣೋತ್ತರ ಜಿಲ್ಲೆಯಲ್ಲಿ ಮಾತ್ರ ಪ್ರಚಲಿತವಿದ್ದ ಈ ಕಲೆಯನ್ನು ಅವರು ಕನ್ನಡದ ಕಲೆಯೆಂದೇ ಒತ್ತು ಕೊಡುತ್ತಿರುವುದನ್ನ್ನೂ ಗಮನಿಸಬಹುದು.
ಶೈಕ್ಷಣಿಕ ಮಹತ್ವ :
 ಯಕ್ಷಗಾನದ ಭಾಗವತಿಕೆ, ಕುಣಿತ ಮತ್ತು ಮದ್ದಲೆಯನ್ನು ಕಲಿಯುವ ಆಸಕ್ತಿರಿಗೆ ಇದೊಂದು ಮಹತ್ವದ ಶೈಕ್ಷಣಿಕ ಕೃತಿ ಕೂಡ. ಸಂಪ್ರದಾಯ ಬದ್ಧವಾಗಿ ಒಂದು ಕಲೆಯನ್ನು ಕಲಿಸುವ ಪಠ್ಯಗಳು ನಮ್ಮಲ್ಲಿ ತೀರಾ ಅಪರೂಪ. ಈ ನಿಟ್ಟಿನನಲ್ಲಿ ಐವತ್ತರ ದಶಕದಲ್ಲಿಯೇ ಭಂಡಾರಿಯವರಿಂದ ಈ ಶ್ಲಾಘನೀಯ ಕೆಲಸ ನಡೆಯಿತು. ರಾಗದ ಆರೋಹಣ, ಅವರೋಹಣಗಳನ್ನು, ಮೃದಂಗದ ಬಿಡ್ತಿಗೆಯನ್ನು ಬಹುಶಃ ಮೌಖಿಕವಾಗಿ ಅಥವಾ ಪ್ರಾಯೋಗಿಕವಾಗಿ ಹೇಳುವುದು ಸುಲಭವಾಗಬಹುದು. ಆದರೆ ಬರವಣಿಗೆಗೆ ಇಳಿಸುವುದು ತೀರಾ ಕಷ್ಟ ಸಾಧ್ಯವಾದದ್ದು. ಯಾವುದೇ ಸಾಂಪ್ರದಾಯಿಕ ಶಿಕ್ಷಣ ಪದವಿ ಹೊಂದಿರದ ಕೃಷ್ಣ ಭಂಡಾರಿಯವರು ಒಂದು ಶಾಸ್ತ್ರ ಗ್ರಂಥವನ್ನು ಎಲ್ಲೂ ಸಂಶಯಕ್ಕೆ ಎಡೆಯಿಲ್ಲದಂತೆ ಇಲ್ಲಿ ನಿರೂಪಿಸಿದ್ದು ಮೆಚ್ಚುವಂತದ್ದು. ಇಷ್ಟೊಂದು ಸರಳವಾಗಿ ಮತ್ತು ಸಮಗ್ರವಾಗಿ ವಿವರಿಸುವ ಇಂಥದ್ದೊಂದು ಕೃತಿ ಈವರೆಗೂ ಇರಲಾರದು. ರಾಗ-ತಾಳಗಳ ಸ್ಪಷ್ಟತೆ, ಖಚಿತತೆ ಮತ್ತು ಈ ಕ್ಷೇತ್ರದಲ್ಲಿರುವ ಪ್ರಾಯೋಗಿಕ ಅನುಭವದಿಂದಾಗಿ ಇದು ಒಂದು 'ಮಾದರಿ ಬರವಣಿಗೆ' ಕೂಡ. ಹಾಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಯಕ್ಷಗಾನ ಶಾಲೆಗಳಿಗೆ ಈ ಕೃತಿ ಶೈಕ್ಷಣಿಕ ಪಠ್ಯವಾಗಿ ವರದಾನವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಗೃಂಥಕರ್ತರ ಪರಿಚಯ : 
ಕೃಷ್ಣ ತಾಯಿಲಕ್ಷ್ಮೀ ಭಂಡಾರಿಯವರು ಶಿರಸಿ ತಾಲೂಕಿನ ಸೋಂದಾ ಗ್ರಾಮದವರು. ಶಿರಸಿ-ಯಲ್ಲಾಪುರ ಮಾರ್ಗದಲ್ಲಿ ಮುಖ್ಯರಸ್ತೆಯಿಂದ ಸುಮಾರು 12 ಕಿ.ಮಿ. ದೂರದಲ್ಲಿದೆ ಇವರ ಮನೆ. ತೀರಾ ಬಡ ಕುಟುಂಬದಿಂದಲೂ ಹಿಂದುಳಿದ ಸಮುದಾಯದಿಂದಲೂ ಬಂದಿರುವ ಇವರು ಸೋಂದಾದ ಮಠದಲ್ಲಿ 'ಕರ್ನೆ' ಭಾರಿಸುತ್ತಿದ್ದರು. ದೇವರ ಹೆಸರಿನಲ್ಲಿ ಅವರು ನೀಡುವ ಅಕ್ಕಿಗಾಗಿಯೋ ಊಟಕ್ಕಾಗಿಯೋ ವಾದ್ಯ ಮಾಡುವ ಬಿಟ್ಟಿ ಕಾಯಕ ಇವರದು. ಒಳ್ಳೆಯ ಪಂಚವಾದ್ಯ ಕಲಾವಿದರಾಗಿ (ಅದರಲ್ಲಿ 'ಮೋವ್ರಿ' ವಾದಕರಾಗಿ) ಆ ಕಾಲದಲ್ಲಿ ಹೆಸರು ಮಾಡಿದವರು. ಚಿಕ್ಕಂದಿನಿಂದಲೂ ತಾಯಿಯ ಆರೈಕೆಯಲ್ಲಿಯೇ ಬೆಳೆದ ಇವರು ಮಠದ ಗೇಣಿದಾರರಾಗಿ ಅಲ್ಲಿಯೇ ಊಳಿಗಮಾಡಿಕೊಂಡು ಬಡತನದಲ್ಲಿಯೇ ಬೆಳೆದರು. ಪಾರಂಪರಿಕವಾಗಿ ಬಂದ ಪಂಚವಾದ್ಯ ಕಲಾವಿದರಾದ್ದರಿಂದ ಸಹಜವಾಗಿಯೇ ಇವರಿಗೆ ರಾಗ ಮತ್ತು ತಾಳದ ಖಚಿತ ಜ್ಞಾನ ಅವರಿಗೆ ಇತ್ತು. ಇದರೊಂದಿಗೆ ಬಾಲ್ಯದಿಂದಲೇ ಸುತ್ತ ನಡೆಯುತ್ತಿರುವ ಆಟ, ತಾಳಮದ್ದಲೆಯನ್ನು ನೋಡುತ್ತಿದ್ದ ಇವರು ಸಾವಕಾಶ ಅದರ ಕಡೆಗೇ ಒಲಿದರು. 
krishna bhandari, sonda

ಎತ್ತರದ ನಿಲುವು, ತಲೆಗೊಂದು ಕಪ್ಪು ಟೊಪ್ಪಿ, ಬಿಳಿ ಪಂಜೆ, ಮೇಲೆ ಒಂದು ಜುಬ್ಬಾ ಹಾಕಿಕೊಂಡು ಬದುಕಿನ ತುಂಬಾ ಯಕ್ಷಗಾನಕ್ಕಾಗಿಯೇ ನಡೆದರು. ಮದ್ದಲೆ ವಾದಕರಾಗಿ ಭಾಗವತರಾಗಿ, ವೇಷಧಾರಿಯಾಗಿ ಮತ್ತು ತಾಳಮದ್ದಲೆಯ ಅರ್ಥಧಾರಿಯಾಗಿಯೂ ಅವರು ಆ ಕಾಲದಲ್ಲಿ ಹೆಸರು ಮಾಡಿದ್ದರು. ಇವೆಲ್ಲದರಲ್ಲಿಯೂ ಅವರಿಗೆ ಅಪಾರವಾದ ಗತಿ ಇರುವುದರಿಂದ ಯಕ್ಷಗಾನದ ಮಾಸ್ತರರಾಗಿಯೂ ಯಶಸ್ವಿಯಾದರು. ಸುತ್ತಮುತ್ತಲಿನ ಊರುಗಳಿಗೆ ಹೋಗಿ ಹದಿನೈದು-ಇಪ್ಪತ್ತು ದಿವಸ ಅಲ್ಲೇ ಉಳಿದು ಸ್ಥಳೀಯ ಕಲಾವಿದರಿಗೆ ಯಕ್ಷಗಾನವನ್ನು ಕಲಿಸಿ ಬರುತ್ತಿದ್ದರು. ಅಲ್ಲಿ ಅವರಿಗೆ ಸಂಭಾವನೆ ಸಿಗುತ್ತದೆಂಬ ಯಾವ ಭರವಸೆಯೂ ಇಲ್ಲ. ಆಹೊತ್ತಿನ ಊಟಕ್ಕೆ-ಚಹಾಕ್ಕೇನೂ ಕೊರತೆ ಇರಲಿಲ್ಲ. ಮನೆಯಲ್ಲಿ ಹೆಂಡತಿ ಲಲಿತಾ ಮತ್ತು ಮಹಾಬಲೇಶ್ವರ, ದೇವರು ಎನ್ನುವ ಎರಡು ಮಕ್ಕಳು. ಹೇಗೋ ಸಂಸಾರ ನಡೆಯುತ್ತಿತ್ತು. ಈಗಲೂ ಅವರ ಮೂಲ ಮನೆ ಸೋಂದಾ ಮಠದ ಪಕ್ಕದಲ್ಲಿಯೇ ಇದೆ. ಅದರಲ್ಲಿ ಈಗ ಅವರ ಮೊಮ್ಮಗ ಶಹನಾಯಿ ವಾದಕ ದತ್ತಾತ್ರೆಯ ಭಂಡಾರಿ ವಾಸವಾಗಿದ್ದಾರೆ.
ಆ ಕಾಲದಲ್ಲಿ ತ್ಯಾಗಲಿ, ಸೋಂದಾ, ಶಿರಸಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ ಭಾಗವಹಿಸಿದ ಉಲ್ಲೇಖ ಮಾಡುತ್ತಾರೆ. ಅಲ್ಲಿ ನಡೆದ ಗಂಭೀರ ಚಚರ್ೆಯೇ ಅವರಿಗೆ  ಈ ಕೃತಿ ಬರೆಯಲು ಹುಮ್ಮಸ್ಸು ನೀಡಿತು. ಯಕ್ಷಗಾನ ರಂಗದಲ್ಲಿ ಆಗುತ್ತಿರುವ ಅನುಚಿತ ಬೆಳವಣಿಗೆಯನ್ನು ಸ್ವಲ್ಪಮಟ್ಟಿಗಾದರೂ ತಡೆಹಿಡಿಯುವ ಮಾರ್ಗವಾಗಿ ಇರುವ ಸೋಗೆಮನೆಯಲ್ಲಿಯೇ  ಯಕ್ಷಗಾನ ಶಾಲೆಯನ್ನು ತೆರೆದರು. ಕೃಷ್ಣ ಭಂಡಾರಿಯವರ ಯಕ್ಷಶಾಲೆಯಲ್ಲಿ 15 ರಿಂದ 25 ಜನರ ವರೆಗೂ ವಿದ್ಯಾಥರ್ಿಗಳಿದ್ದರೆಂದು ಅವರ ಆಪ್ತರು ಹೇಳುತ್ತಾರೆ. ಎಲ್ಲಾ ಜಾತಿ, ಪಂಗಡಗಳ ಆಸಕ್ತರಿಗೆ ಈ ಶಾಲೆ ತೆರೆದುಕೊಂಡಿತ್ತು. ಅವಶ್ಯವಿದ್ದಲ್ಲಿ ವಿದ್ಯಾಥರ್ಿಗಳಿಗೆ ಊಟ-ತಿಂಡಿಯ ವ್ಯವಸ್ಥೆಯನ್ನೂ ಮಾಡಿದ ಕುರಿತು ಹೇಳಲಾಗುತ್ತದೆ. ಯಕ್ಷಗಾನ ಪ್ರದರ್ಶನಕ್ಕೆ ಅಗತ್ಯವಿದ್ದ ಕುಣಿತ, ಭಾಗವತಿಕೆ, ಮೃದಂಗ, ಚಂಡೆ (ಕೆಲವು ಬಾರಿ ಚಂಡೆಯ ಬದಲು ತಾಸ್ಮೋರನ್ನು ಬಳಸುತ್ತಿದ್ದರು.) ಮುಂತಾದ ಎಲ್ಲಾ ವಿಭಾಗದಲ್ಲಿಯೂ  ಶಾಸ್ತ್ರೀಯವಾಗಿ ಕಲಿಸಲಾಗುತ್ತಿತ್ತು. ಯಕ್ಷಗಾನ ವಿದ್ವಾಂಸರ ನಡುವೆ ಗೌರವಾನ್ವಿತ ಸ್ಥಾನ ಪಡೆದ ಸೋಂದಾ ಕೃಷ್ಣ ಭಂಡಾರಿಯವರು ಸ್ವತ: ಬಡತನದ ಬೇಗೆಯಲ್ಲಿ ಬೆಂದರೂ ತಾವು ಕಲಿತದ್ದನ್ನು, ಕಲಿಸಿದ್ದನ್ನು ಈ ಪುಸ್ತಕದಲ್ಲಿ ದಾಖಲಿಸುವ ಮೂಲಕ ಯಕ್ಷಗಾನ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. 
ನನ್ನ ತಂದೆ (ಆರ್. ವಿ. ಭಂಡಾರಿ) ಈ ಪುಸ್ತಕದ ಕುರಿತು ಮೊದಲು ನನ್ನ ಗಮನ ಸೆಳೆದವರು. 'ಯಕ್ಷಗಾನ ಬಯಲಾಟ' ಪುಸ್ತಕ ಬರೆದ ಶಿವರಾಮ ಕಾರಂತರೂ ಕೃಷ್ಣ ಭಂಡಾರಿಯವರನ್ನು ಉಲ್ಲೇಖಿಸಿದ್ದನ್ನು ನೆನಪಿಸಿಕೊಂಡಿದ್ದ ಅವರು(ಕಾರಂತರ ಬರಹದಲ್ಲೋ ಅಥವಾ ಭಾಷಣದಲ್ಲೋ ಗೊತ್ತಿಲ್ಲ.)ಇಂತಹ ಮಹತ್ವದ ಪುಸ್ತಕವನ್ನು ಮರುಮುದ್ರಿಸುವ ಕಾಳಜಿಯನ್ನು ವ್ಯಕ್ತಪಡಿಸಿದ್ದರು. ಈಗ ಅವರ ನೆನಪಿನ ಪುಸ್ತಕ ಮಾಲೆಯಾಗಿ ಪ್ರಕಟಿಸುತ್ತಿದ್ದೇವೆ.


ಈ ಕೃತಿಯನ್ನು ಸಂಪಾದಿಸುವಾಗ ಮೂಲದಲ್ಲಿ ಬಳಸಲಾದ ಕೆಲವು ಶಬ್ದಗಳು ಮತ್ತು ವಾಕ್ಯಗಳ ರಚನೆ ಈಗಿಲ್ಲದಿದ್ದರೂ ಅದನ್ನು ಬದಲಾಯಿಸದೇ ಹಾಗೇ ಇಟ್ಟುಕೊಳ್ಳಲಾಗಿದೆ. ಯಾಕೆಂದರೆ ಇದು ಆಕಾಲದ ಭಾಷಾ ಬಳಕೆಯ ಬಗ್ಗೆ ಕೂಡ ಮಹತ್ವದ ದಾಖಲೆಯಾಗಬಹುದು ಎನ್ನುವ ಕಾರಣದಿಂದ.
ಈ ಪುಸ್ತಕದಲ್ಲಿ ಪ್ರಸ್ತಾಪಿತವಾದ ಹಲವು ಸಂಗತಿಯು ನನಗೆ ಹೊಸತಾಗಿದ್ದರಿಂದ  ನಾನು ಯಕ್ಷಗಾನದ ವಿದ್ವಾಂಸರೂ ಪ್ರಸಂಗಕರ್ತರೂ ಆದ ಪ್ರೋ. ಎಂ.ಎ.ಹೆಗಡೆಯವರ ಸಹಾಯ ಕೋರಿದೆ. ಪುಸ್ತಕ ಪ್ರಕಟಿಸುವ ಯೋಜನೆ ಮುಂದಿಟ್ಟಾಗ ಅವರು ಸಂತೋಷದಿಂದಲೇ ಅನುಮೋದಿಸಿದರು ಮಾತ್ರವಲ್ಲ ಎರಡೆರಡು ಬಾರಿ ಪುಸ್ತಕದ ಪ್ರೂಫ್ ತಿದ್ದಿಕೊಟ್ಟರು. ಉಪಯುಕ್ತವಾದ ಒಂದು ಮುನ್ನುಡಿಯನ್ನೂ ಬರೆದುಕೊಟ್ಟು ಪ್ರೋತ್ಸಾಹಿಸಿದರು. ಅವರಿಗೆ ಪ್ರಕಾಶನವು ಕೃತಜ್ಞವಾಗಿದೆ. 
ಈ ಪುಸ್ತಕ ತರುವಲ್ಲಿ ಕೃಷ್ಣ ಭಂಡಾರಿಯವರ ಮೊಮ್ಮಗ ದತ್ತಾತ್ರೆಯ ಭಂಡಾರಿಯವರ ನೆರವನ್ನು ನೆನೆಯಲೆ ಬೇಕು. ನನಗೆ ಸಿಕ್ಕಿರುವ 'ಯಕ್ಷಗಾನ ಕೈಪಿಡಿ' ಪುಸ್ತಕಗಳಿಗೆಲ್ಲಾ ಒಂದೋ ಹಿಂಬದಿಯ ಪುಟಗಳಿರಲಿಲ್ಲ ಅಥವಾ ಮುಂಬದಿಯ ಪುಟಗಳಿರಲಿಲ್ಲ. ಅಂತಹ ಸಂದರ್ಭದಲ್ಲಿ ದತ್ತಾತ್ರೆಯ ಅವರು ಅಜ್ಜನ ಕುರಿತ ಹೆಮ್ಮೆಯಿಂದ ಪೂರ್ಣರೂಪದ ಪುಸ್ತಕ ಒದಗಿಸಿದರು; ಫೋಟೋ ಒದಗಿಸಿದರು; ಪ್ರೀತಿಯಿಂದ ಅಜ್ಜನ ಕುರಿತು ಅಗತ್ಯವಾದ ಮಾಹಿತಿ ಒದಗಿಸಿದರು. ದತ್ತಾತ್ರೇಯ ಭಂಡಾರಿ ಕೂಡ ಜಿಲ್ಲೆಯಾದ್ಯಂತ ಹಲವು ಕಾರ್ಯಕ್ರಮ ನೀಡಿದ ಒಳ್ಳೆಯ ಶಹನಾಯಿ ವಾದಕರು. ದೂರದ ಕಾಶಿಗೆ ಹೋಗಿ ಶಹನಾಯಿಯ ದಂತಕತೆ ಬಿಸ್ಮಿಲ್ಲಾಖಾನರೊಂದಿಗೆ ಇದ್ದು ಶಹನಾಯಿ ನುಡಿಸುವ ಸೂಕ್ಷ್ಮವನ್ನು ಕಲಿತು ಬಂದವರು. ಅವರು ಮತ್ತು ಅವರ ಮಡದಿ ಪ್ರಫುಲ್ಲಾ ಅವರ ಸಹಾಯಕ್ಕೆ ಕೃತಜ್ಞತೆಗಳು. 
ಇದನ್ನು ಪ್ರಕಟಿಸಲು ಅಗತ್ಯವಾದ ಆಥರ್ಿಕ ನೆರವನ್ನೂ ನೀಡಿದ ಸಹಯಾನ (ಡಾ. ಆರ್.ವಿ. ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ), ಚಿಂತನ ರಂಗ ಅಧ್ಯಯನ ಕೇಂದ್ರ, ಉತ್ತರ ಕನ್ನಡ, ಯಕ್ಷಕಿರೀಟ ಕೆರೆಕೋಣ, ಮುಂತಾದ ಸಂಸ್ಥೆಗಳ ಗೆಳೆಯರಿಗೆ ಅನಂತ ಕೃತಜ್ಞತೆಗಳು. 


ಈ ಹಿಂದೆ ಮೊಳೆ ಜೋಡಿಸಿ ಮುದ್ರಿಸಿದ ಕೆಲಸವನ್ನು ಈಗ ಕಂಪ್ಯೂಟರನಲ್ಲಿ ಮಾಡುವುದು ಸಾಹಸದ ಕೆಲಸ. ಇದನ್ನು ತಾಳ್ಮೆಯಿಂದ ಮಾಡಿದ ಮತ್ತು ಸುಂದರವಾಗಿ ಮುಖಪುಟ ವಿನ್ಯಾಸ ಮಾಡಿದ ರಾಮು.ಎಂ ಅವರಿಗೆ,
ಮುಖಪುಟದ ರೇಖಾಚಿತ್ರ ಬಿಡಿಸಿಕೊಟ್ಟ ಗೆಳೆಯ ಸತೀಶ ಯಲ್ಲಾಪುರ ಅವರಿಗೆ,
ಸುಂದರವಾಗಿ ಮುದ್ರಿಸಿಕೊಟ್ಟ ಚಂದ್ರು ಮತ್ತು ಉಳಿದ ಸಿಬ್ಬಂದಿಗಳಿಗೆ,
ಓದುಗರಾದ ತಮಗೆ
ಅನಂತ ಕೃತಜ್ಞತೆಗಳು.
- ಡಾ. ವಿಠ್ಠಲ ಭಂಡಾರಿ, ಕೆರೆಕೋಣ
  ಸಂಪಾದಕ

Thursday 5 February 2015

ಪ್ರೊ. ಆರ್.ಕೆ. ಹುಡಗಿ ...........

rk hudagi foto (2)
ಪ್ರೊ. ಆರ್.ಕೆ. ಹುಡಗಿ

ಪ್ರೊ. ಆರ್.ಕೆ. ಹುಡಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಹಲವು ಸಾಮಾಜಿಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ದುಡಿದಿದ್ದು, ಅವಿತರತ ಓದು ಬರಹಗಳಲ್ಲಿ ತೊಡಗಿಸಿಕೊಂಡವರು. ರಾಜ್ಯ ವ್ಯಾಪಿ ಹರಡಿರುವ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸ್ಥಾಪಕ ಸದಸ್ಯರಾಗಿದ್ದ ಅವರು ಅದರ ಹೆಚ್ಚು ಕಡಿಮೆ ಎಲ್ಲಾ ರಂಗ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜಾಥಾಗಳಲ್ಲಿ ತೊಡಗಿಸಿಕೊಂಡಿದ್ದು,  2006ರಿಂದ ಅದರ ರಾಜ್ಯಾದ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಮುದಾಯ ಅಲ್ಲದೆ, – 1976 ರಲ್ಲಿ ಕಲಬುರ್ಗಿಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯ.  ಪೀಪಲ್ಸ್ ಸೋಸಿಯೋ ಕಲ್ಚುರಲ್ ಆರ್ಗನೈಜೆಶನ್ (ಅಧ್ಯಕ್ಷ),  ಇಂಡೋ-ಸೋವಿಯತ್ ಕಲ್ಚುರಲ್ ಸೋಸೈಟಿ (ಗುಲ್ಬರ್ಗ ವಿಭಾಗದ ಅಧ್ಯಕ್ಷ : 1984-1990ರ ವರೆಗೆ) , ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸೆಂಟ್ರಲ್ ಯುನಿಯನ್ನಿನ ಕಾರ್ಯದರ್ಶಿ, ಉಪಾಧ್ಯಕ್ಷ ಹಾಗೂ ಅಧ್ಯಕ್ಷನಾಗಿ 27 ವರ್ಷ,  ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ (ಉಪಾಧ್ಯಕ್ಷ), ಭಾರತ ಜ್ಞಾನ ವಿಜ್ಞಾನ ಸಮಿತಿ, ಗುಲಬರ್ಗದ ಅಧ್ಯಕ್ಷ (1985-1990ರ ವರೆಗೆ), ಗುಲಬರ್ಗವಿಶ್ವವಿದ್ಯಾಲಯದ ಶುದ್ಧಿಕರಣ ಸಮಿತಿ (ಅಧ್ಯಕ್ಷ), ಬಂಡಾಯ ಸಾಹಿತ್ಯ ಸಂಘಟನೆಯ 1979-80ರಲ್ಲಿ ಗುಲಬುರ್ಗ ಘಟಕ ದ ಸಂಸ್ಥಾಪಕ ಸದಸ್ಯ, ಗುಲಬರ್ಗ ರಾಜಕೀಯ ಶಾಂತಿ ಸಮಿತಿ (ಅಧ್ಯಕ್ಷ) – ಮುಂತಾದ ಹತ್ತು ಹಲವು ಸಾಮಾಜಿಕ ಸಂಸ್ಥೆಗಳಲ್ಲಿ ನಾಯಕತ್ವದ ಪಾತ್ರ ವಹಿಸಿದ್ದಾರೆ.
ಹಲವು ಜಾಥಾ ಚಳುವಳಿಗಳಲ್ಲಿ ನಾಯಕತ್ವದ ಪಾತ್ರ ವಹಿಸಿದ್ದಾರೆ.   1979ರ ಸಮುದಾಯದ ರಾಜ್ಯ ಮಟ್ಟದ ಸಾಂಸ್ಕೃತಿಕ ಜಾಥಾದಲ್ಲಿ  ಸಂಘಟಕನಾಗಿ,  1980ರ ರೈತನತ್ತ ಸಾಂಸ್ಕೃತಿಕ ಜಾಥಾ ಮುಖಂಡನಾಗಿ,  1985ರ ಬರಗಾಲದಲ್ಲಿ ಸಮುದಾಯದ ಜಾಥಾ ಮುಖ್ಯ ಸಂಘಟಕನಾಗಿ. 1986ರ 100 ಅಡಿಗಳ ಬಣ್ಣದ ಜಾಥಾದಲ್ಲಿ ಸಂಘಟಕನಾಗಿ,  1991ರ ಸಾಕ್ಷರತ ಜಾಥಾದಲ್ಲಿ ಲೇಖಕ ಮತ್ತು ಸಂಘಟಕನಾಗಿ, 1992ರ ಜನ ವಿಜ್ಞಾನ ಜಾಥಾದಲ್ಲಿ ಲೇಖಕ ಮತ್ತು ಸಂಘಟಕನಾಗಿ.
2005ರ ಭ್ರೂಣ ಹತ್ಯದ ವಿರುದ್ಧ ಪ್ರಚಾರ ಆಂದೋಲನಾ ಜಾಥಾ, ಲೇಖಕ ಮತ್ತು ಸಂಘಟಕನಾಗಿ,  2009ರಲ್ಲಿ ರೈತಪರ ಜಾಥಾದಲ್ಲಿ ಸಂಘಟಕ ಹಾಗೂ ಮುಖಂಡನಾಗಿ.,  2011ರಲ್ಲಿ ಬೀದರದಿಂದ ಬಳ್ಳಾರಿವರೆಗೆ ನಾಡಿನ ನೆಲ-ಜಲ ಉಳಿಸಲು ಲೇಖಕ ಮತ್ತು ಕಲಾವಿದರ ಜಾಥಾ ಸಂಘಟಕನಾಗಿ,  ಕೋಮು ಸೌಹಾರ್ದತೆಗಾಗಿ ರಂಗೋತ್ಸವಗಳು (1985, 1993, 1998, 2005ರಲ್ಲಿ) ರಂಗ ಸಂಘಟಕನಾಗಿ. ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ವಿರುದ್ಧ ಕಾರ್ಟೂನ್  ಜಾಥಾ,    ಡಾ. ಅಂಬೇಡ್ಕರ್ ಶತಮಾನೋತ್ಸವ ಸಂದರ್ಭದಲ್ಲಿ 117 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಪನ್ಯಾಸ., ಸಮುದಾಯ ಜಾಥಾಗಳ ಅಂಗವಾಗಿ 1265 ಊರುಗಳಲ್ಲಿ ನಾಟಕ ಪ್ರದರ್ಶನ ಹಾಗೂ ಉಪನ್ಯಾಸಗಳು, 1987ರಲ್ಲಿ ಬಿಜಾಪೂರ ಜಿಲ್ಲೆಯಲ್ಲಿಯ ದೇವದಾಸಿ ಪದ್ಧತಿಯ ವಿರುದ್ಧ ಒಂದು ತಿಂಗಳ ಕಾಲ ಜೋಗುತಿ ನಾಟಕದ ಜಾಥಾದಲ್ಲಿ ರಂಗ ಸಂಘಟಕನಾಗಿ ಹಾಗೂ ಉಪನ್ಯಾಸಕನಾಗಿ, ಮೂಢ ನಂಬಿಕೆಗಳ ವಿರುದ್ಧ ಬೀದಿ ನಾಟಕಗಳ ಜಾಥಾ – ಮುಂತಾದ ಹತ್ತು ಹಲವು ಜಾಥಾಗಳಲ್ಲಿ ಅವರು ನಾಯಕತ್ವ ವಹಿಸಿದ್ದಾರೆ.
ವೃತ್ತಿಯಲ್ಲಿ ಅವರು 33ವರ್ಷಗಳ ಕಾಲ ಇಂಗ್ಲೀಷ  ಉಪನ್ಯಾಸಕ ಹಾಗೂ ಪ್ರಾಧ್ಯಾಪಕರಾಗಿದ್ದು,  2007ರಲ್ಲಿ ನಿವೃತ್ತಿ ಹೊಂದಿದರು.
ಅವರ ಓದಿನ ಹರವು, ಆಳ ವಿಸ್ಮಯ ಹುಟ್ಟಿಸುವಂತಹುದು. ಅದೇ ರೀತಿ ಅವರ ಬರಹಗಳ ವಿಸ್ತಾರ. ಅವರ ಬರಹಗಳಲ್ಲಿ ಸ್ವಂತದ್ದೂ ಇವೆ.  ಅನುವಾದಗಳೂ ಇವೆ.  ಅವರ ಸ್ವತಂತ್ರ ಪುಸ್ತಕಗಳ ಸಂಖ್ಯೆ 18. ಅನುವಾದಿತ ಪುಸ್ತಕಗಳ ಸಂಖ್ಯೆ 24. ಅವರ ಬರಹಗಳ ಪಟ್ಟಿಯನ್ನು ಇಲ್ಲಿ ಕೆಳಗೆ ಕೊಡಲಾಗಿದೆ.
ಸ್ವತಂತ್ರ ಕೃತಿಗಳು :
1) ಈರೋಬಿ (ಗೀತರೂಪಕ)
2) ಬರದ ಬಯಲಾಟ (ಬೀದಿನಾಟಕ)
3) ಅಕ್ಷರ (ಬೀದಿನಾಟಕ)
4) ಒರೆಗಲ್ಲು (ಬೀದಿನಾಟಕ)
5) ಸಂಸ್ಥಾ (ರಂಗನಾಟಕ)
6) ಬಾಯಿ ಬಂದ್ ಬಾದಶಹಾ ಪುರಾಣ, (ರಂಗನಾಟಕ)
7) ಹೆಮ್ಮಾರಿಯ ರಸ ಪುರಾಣ (ರಂಗನಾಟಕ)
8) ಉಸ್ತುವಾರಿ ಸಚಿವರ ಬಸ್ತಾನಿ (ರಂಗನಾಟಕ)
9) ಪಾದಚಾರಿಯ ಪುರಾಣ (ಬೀದಿನಾಟಕ)
10) ಸಾಕುನಾಯಿ (ಬೀದಿನಾಟಕ)
11) ಜೊಲ್ಲ್ಯಾನಾಯಿ (ಬೀದಿನಾಟಕ)
12) ಬತ್ತಲೆ ಎಲ್ಲವ್ವನ ವಸ್ತ್ರಾಪಹರಣ (ಬೀದಿನಾಟಕ)
13) ಅನಾಮಿ ಪಿಂಡದ ಆರ್ತನಾದ (ಬೀದಿನಾಟಕ)
14) ಅನ್ನದಾತನ ಆರ್ತನಾದ (ಬೀದಿನಾಟಕ)
15) ನರಗುಂದ ರೈತನ ಬಂಡಾಯ (ಬೀದಿನಾಟಕ)
16) ಪ್ರಳಯಾಂತಕ ಪ್ರತೀಕಾರ (ರಂಗನಾಟಕ)
17) ಅಸಮಾನತೆಯ ಆಸುರಿ ಮುಖಗಳು
18) ಗುರು ಸಾರಥಿ-ಶಿಷ್ಯ ಅತಿರಥ (ಬೀದಿನಾಟಕ)
ಅನುವಾದ ಕೃತಿಗಳು :
1) ನಾನೇಕೆ ನಾಸ್ತಿಕ ಭಗತ್ಸಿಂಗ್
2) ವಿಮೋಚನೆಯ ದಾರಿ (ಇ.ಎಮ್.ಎಸ್.ಎನ್)
3) ವಿಮೋಚನೆಯೆಡೆಗೆ (ಮೈಥಿಲಿ ಶಿವರಾಮನ್)
4) ಸಮರ್ಥ ಸಾಮ್ಯವಾದಿ (ಲಿವು-ಶಾವೋಕಿ)
5) ಜೋತಿಬಸ್ಸು (ಸುರಭಿ ಬ್ಯಾನರ್ಜಿ)
6) ದಲಿತ ಸಂಘರ್ಷ : ದಾರಿ-ದಿಕ್ಕು (ಆನಂದ ತೇಲತುಂಬ್ಡೆ)
7) ದಲಿತರು :ಭೂತ-ಭವಿಷ್ಯ (ಆನಂದ ತೇಲತುಂಬ್ಡೆ)
8) ಜಾತಿ ವ್ಯವಸ್ಥೆ : ಸಮಸ್ಯೆ ಸವಾಲುಗಳು (ಜಗಜೀವನರಾಮ)
9) ಜಾತಿ ವ್ಯವಸ್ಥೆ : ಉಗಮ-ವಿಕಾಶ-ವಿನಾಶ (ಡಾ. ಬಿ.ಆರ್. ಅಂಬೇಡ್ಕರ್)
10) ಡಾ. ಬಿ.ಆರ್. ಅಂಬೇಡ್ಕರ್ : ಪ್ರಭುದ್ಧ ಭಾರತದ ದೃಷ್ಟಾರ  (ಗೇಲ್ ಅಮ್ವೆಡ್ಸ್)
11) ಕಾಮರಸಾಯನ (ತರುಣ ತೇಜಪಾಲ್)
12) ಅಮ್ಮಿ (ಸೈಯಿದ್ ಅಕ್ತರ್ ಮಿರ್ಜಾ)
13) ಮೇ ಡೇ ಹುತಾತ್ಮರ ಮಹಾನ್ ಗಾಥೆ (ಆ್ಯಡಲ್ಮನ್)
14) ಆರನೇ ಹೆಂಡತಿಯ ಆತ್ಮಕಥೆ (ತೆಹಮಿನಾ ದುರ್ರಾನಿ)
15) ಪೀಠಾಧಿಪತಿಯ ಪತ್ನಿ (ತೆಹಮಿನಾ ದುರ್ರಾನಿ)
16) ಸೆಕ್ಯುಲರ್ವಾದ: ಬುಡ-ಬೇರು (ಮಣಿಶಂಕರ್ ಅಯ್ಯರ್)
17) ಭಾರತೀಯ ಮಹಿಳೆಯರ ಹೋರಾಟ (ಕನಕ ಮುಖರ್ಜಿ)
18) ಪ್ರೀತಿಯಿಂದ ಅಪ್ಪನಿಗೆ (ಶಬಾನ ಅಜ್ಮಿ)
19) ಧರೆ ಹೊತ್ತಿ ಉರಿದಾಗ : ಭಾರತದ ವಿಭಜನೆಯ ದುರಂತ  ಕತೆಗಳು (ಅಲೋಕ್ ಭಲ್ಲಾ)
20) ಜಪಾನ್ (ಯಾಮಾಗುಜಿ ಹಿರೋಯಿಚಿ)
21) ಭಾರತದ ಬಡತನ : ಸಂವಿಧಾನಕ್ಕೊಂದು ಕಳಂಕ
22) ಅಭಿವೃದ್ಧಿ ಆತ್ಮಘನತೆ (ಅಮಿತ್ ಬಹದ್ದೂರಿ)
23) ಕಾರ್ಪೊರೇಟ್ ಕಾಲದಲ್ಲಿಯೂ ಕಾರ್ಲ್ ಮಾರ್ಕ ಪ್ರಸ್ತುತ  (ಟೆರ್ರಿ ಈಗಲ್ಟನ್)
24) ಭಯೋತ್ಪಾದಕ (ಮೋಶಿನ್ ಹಮೀದ್)