Monday 1 July 2013

ಮರೆತೇನೆಂದರು ಮರೆಯಲಿ ಹ್ಯಾಂಗ? yamuna gaonkar



       ನಮ್ಮ ಜಿಲ್ಲೆಯಲ್ಲಿ 'ಸಾಮ್ರಾಜ್ಯಶಾಹಿಯೇ ಭಾರತ ಬಿಟ್ಟು ತೊಲಗು; ಸಾಮ್ರಾಜ್ಯ ಶಾಹಿಗೆ ಆಶ್ರಯ ಕೊಟ್ಟ ಬಂಡವಾಳಶಾಹಿ-ಭೂಮಾಲಿಕರೇ ದುಡಿಯುವ ವರ್ಗಕ್ಕೆ ಸ್ವತಂತ್ರವಾಗಿ ಬಾಳಲು ಬಿಡಿ' ಎಂದು ಏಕಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ, ರೈತಾಬಿ ಜನತೆಯ ಒಳಿತಿಗಾಗಿ ಹಾಗೂ ಕಾಮರ್ಿಕ ವರ್ಗಕ್ಕೆ ನ್ಯಾಯ ಕೊಡಿಸಲು ನಡೆದ ಕಳೆದ ಶತಮಾನದ ಹೋರಾಟಗಳಲ್ಲಿ, ಬಂಧನ, ಜೈಲುವಾಸದ ಅನುಭವಗಳಲ್ಲಿ, ಗಡಿಪಾರಿನ ಶಿಕ್ಷೆಗೊಳಗಾದವರಲ್ಲಿ ಕಮ್ಯುನಿಷ್ಟರೇ ಅಧಿಕ. ಅವರು ಜನತೆಯ ಹಿತಚಿಂತಕರಾಗಿ ರಾಜಕೀಯ ಜೀವನ ಸಾಗಿಸಿದ್ದು ಮಾತ್ರ ಅವಿಸ್ಮರಣೀಯ. 

     ಇಂದಿನ ಅಸಹ್ಯಭರಿತ, ದ್ವೇಶಪೂರಿತ, ಭ್ರಷ್ಟಾಚಾರ-ಅನಾಚಾರ-ದುರಾಚಾರದಿಂದ ಮೇಳೈಸಿದ ಅಪವಿತ್ರಗೊಂಡ ರಾಜಕೀಯ ವಾತಾವರಣವು ವ್ಯಕ್ತಿತ್ವಹೀನ   ಮುಂದಾಳುಗಳನ್ನು ಸೃಷ್ಟಿಸುತ್ತಿದೆ ಎಂಬ ಭಯ ಕಾಡುತ್ತಿದೆ. 

    ಕಾ. ಜಿ.ವಿ.ಪವಾರ ಉತ್ತರ ಕನ್ನಡ ಜಿಲ್ಲೆ ಕಂಡ ಮೇರು ಕಮ್ಯುನಿಷ್ಟ ನಾಯಕ. ಸಾಮಾನ್ಯ ಜನತೆಯನ್ನು ತನ್ನ ಎದೆಗಪ್ಪಿಕೊಂಡು ಜಾತಿವಾದವನ್ನು ಬದಿಗಿಟ್ಟು ಬಂಡವಾಳಶಾಹಿಯೊಂದಿಗೆ ಕೊನೆತನಕ ಸೆಣಸಿದ ಧೀಮಂತ ಹೋರಾಟಗಾರ. ಸಮತಾವಾದದ ಸಿದ್ಧಾಂತಕ್ಕೆ ಚ್ಯುತಿ ಬರದಂತೆ ದುಡಿಯುವ ವರ್ಗದ ಒಳಿತಿನ ಚಳುವಳಿಗೆ ಬದ್ಧತೆ ಸೂಚಿಸಿದ ಕ್ರಾಂತಿಕಾರಿ ನಾಯಕ. ಅವರು ಬದುಕಿದ್ದರೆ ಈಗ ಅವರಿಗೆ 84 ತುಂಬುತ್ತಿತ್ತು. ಆದರೆ ನಿರಂತರ ಹೋರಾಟ, ಚಳುವಳಿ, ಜೈಲುವಾಸದ ರಾಜಕೀಯ ಜೀವನದಿಂದಾಗಿ 53ನೇ ವರ್ಷಕ್ಕೇ ಕೊನೆಯುಸಿರೆಳೆದರು. 

        ಕಾರವಾರ ತಾಲೂಕಿನ ಬಾಡದಲ್ಲಿ 1927ರಲ್ಲಿ ಜನಿಸಿದರು. ಇವರದೊಂದು ಮಧ್ಯಮ ವರ್ಗದ ಕುಟುಂಬವಾಗಿತ್ತು. 1947 ರಲ್ಲಿ ತಮ್ಮ 20 ನೇ ವರ್ಷದಲ್ಲಿ ಮುಂಬಯಿ ವಿದ್ಯಾಪೀಠದ ಮೂಲಕ ಮ್ಯಾಟ್ರಿಕ್ಯುಲೇಶನ್ ಮುಗಿಸಿದರು. ಅಂದಿನಿಂದಲೇ ಇವರ ಜೀವನವೊಂದು ಅಧ್ಯಯನ ಯೋಗ್ಯ ಅಧ್ಯಾಯವಾಗಿಯೇ ಇತಿಹಾಸದಲ್ಲಿ ದಾಖಲು ಮಾಡಲರ್ಹವಾಗಿದ್ದು ಹೆಮ್ಮೆಯ ಸಂಗತಿ. ಈ ಭಾಗದಲ್ಲಿ ಅಷ್ಟೊಂದು ತ್ಯಾಗಮಯ, ದುಡಿಯುವ ವರ್ಗದ ಅಪ್ಪಟ ಕ್ರಾಂತಿಕಾರಿ ವಿಚಾರಧಾರೆಗೆ ಸಮರ್ಪಣಾ ಮನೋಭಾವ ಅವರದಾಗಿತ್ತು. 

     1945-46ರಲ್ಲಿ ಕಮ್ಯುನಿಷ್ಟ ಮುಂದಾಳತ್ವದಲ್ಲಿ ಬೆಳೆದು ಬಂದ ರೈತ ಹೋರಾಟಗಳಲ್ಲಿ ಪವಾರರು ತೊಡಗಿಕೊಂಡರು. ಕುಟುಂಬದ ಮೂಲ ಉದ್ಯೋಗವಾದ ಗೆಣಸಿನ ಠೋಕ ವ್ಯಾಪಾರ ಹಾಗೂ ಉಪ್ಪಿನ ಆಗರದ ಕೆಲಸವನ್ನು ಬಿಟ್ಟುಕೊಟ್ಟರು. ತಾವು ಪಡೆದ ಅಕ್ಷರ ಜ್ಞಾನದಿಂದಾಗಿ ಅಪಾರ ಸಾಹಿತ್ಯ ಓದಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಹಾಗೂ ಶ್ರಮಿಕರ ಸಿದ್ಧಾಂತ ಮತ್ತು ಬಂಡವಾಳಶಾಹಿ ಸಿದ್ಧಾಂತಗಳೆರಡನ್ನು ತುಲನಾತ್ಮಕವಾಗಿ ಓದಿದರು. ಮಾತ್ರವಲ್ಲ ಕಾರವಾರದಲ್ಲಿ ನಡೆಯುತ್ತಿರುವ ರೈತ ಚಳುವಳಿಯಿಂದ ಸ್ಪೂತರ್ಿ ಹೊಂದಿದರು. ಅಂದು ತಾನು ಒಪ್ಪುವ ಸಿದ್ಧಾಂತದ ರಾಜಕೀಯ ಪಕ್ಷವಾದ ಭಾರತ ಕಮ್ಯುನಿಷ್ಟ ಪಕ್ಷವನ್ನು 1948ರಲ್ಲಿ ಸೇರಿದರು. 

       ಸರಿಸುಮಾರು ಅದೇ ವೇಳೆಯಲ್ಲಿ ಭಾಷಾವಾರು ಪ್ರಾಂತ ರಚನಾ  ಹೋರಾಟಗಳಲ್ಲಿ ಪಾಲ್ಗೊಂಡರು ಮತ್ತು ಎಲ್ಲ ವಿರೋಧಿ ಪಕ್ಷಗಳ ನೇತೃತ್ವದಲ್ಲಿ ರಚನೆ ಮಾಡಲ್ಪಟ್ಟ ಮಹಾರಾಷ್ಟ್ರ ಏಕೀಕರಣ ಸಮೀತಿಯ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಭಾಗಿಯಾದರು. ದೆಹಲಿಗೆ ತೆರಳಿದ ನಿಯೋಗದಲ್ಲಿ ಇವರೂ ಓರ್ವರಾಗಿದ್ದರು. ನಂತರ ಕಮ್ಯುನಿಷ್ಟ ಪಕ್ಷದ ಅಖಿಲ ಭಾರತ ಸಮಿತಿಯ ಮಾರ್ಗದರ್ಶನದ ಮೇರೆಗೆ ಕನರ್ಾಟಕ ಏಕೀಕರಣ ಹೋರಾಟಗಳಲ್ಲಿ ಹಾಗೂ 1962ರಲ್ಲಿ ಗೋವಾ ವಿಮೋಚನಾ ಹೋರಾಟಗಳಲ್ಲಿ ತೊಡಗಿಕೊಂಡರು. ಈ ಅವಧಿಯಲ್ಲಿ ಇವರ ಮೇಲೆ ಆಯಾ ರಾಜ್ಯ ಪ್ರಭುತ್ವ ಪ್ರೇರಿತ ದೌರ್ಜನ್ಯ ನಡೆಯಿತು. ಎಳೆ ವಯಸ್ಸಿನಲ್ಲಿ ಅದನ್ನೂ ಸಹಿಸಬೇಕಾಯಿತು. 
    1957ರಲ್ಲಿ ಕಾರವಾರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪಧರ್ಿಸಿದರು. ಕೇವಲ 200 ಮತಗಳ ಅಂತರದಲ್ಲಿ ಸೋಲನುಭವಿಸಿದರು. 1958ರಲ್ಲಿ ಕಾಮರ್ಿಕ ನಗರಿ ದಾಂಡೇಲಿಯತ್ತ ಗಮನಹರಿಸಿದರು. ರೈತ ಸಂಘಟನೆಯ ಜೊತೆಜೊತೆಗೆ ಕಾಮರ್ಿಕರ ದಿನನಿತ್ಯದ ಹೋರಾಟಗಳಲ್ಲಿ ಸಕ್ರಿಯರಾದರು. ಜೈಹಿಂದ್ ಸಾಮಿಲ್ ಕಾಮರ್ಿಕರನ್ನೂ ಒಳಗೊಂಡು ಅಲಾಯ್ಡ ಇಂಡಸ್ಟ್ರೀ(ಹಳಿಯಾಳ) ಮುಂದಾಳತ್ವ ವಹಿಸಿದರು.  ತೀರಾ ಹಿಂದುಳಿದ ಗೌಳಿ ಜನಾಂಗದ ಒಳಿತಿಗಾಗಿ ಅವರು ಅನುಭವಿಸುತ್ತಿರುವ ಕಷ್ಟಗಳಿಗೆ ಧ್ವನಿಯಾಗಿ ಸಂಘಟನೆ ಕಟ್ಟಿ, ಹೋರಾಟಗಳಿಗೆ ನೇತೃತ್ವ ನೀಡಿದರು. 
ಕಾಗದ ಕಾಖರ್ಾನೆ, ಪ್ಲೈವುಡ್ ಕಾಖರ್ಾನೆ, ಲಾಲ್ಭಾಯ್ ಉದ್ಯಮ, ಸಾ ಮಿಲ್ ಮುಂತಾದ ಕಾಮರ್ಿಕರನ್ನು ಸಂಘಟನಾತ್ಮಕವಾಗಿ ತಯಾರು ಮಾಡುವಲ್ಲಿ ಮುಂದಾದರು. ಹೋರಾಟಗಳಲ್ಲಿ ಎಡೆಬಿಡದೆ ಪಾಲ್ಗೊಂಡರು. ದಾಂಡೇಲಿ ಟೌನ್ ಮುನ್ಸಿಪಲ್ ಕಾಪರ್ೋರೇಶನ್ನಲ್ಲಿ 1974ರಿಂದ ನಿರಂತರವಾಗಿ ಸದಸ್ಯರಾಗಿದ್ದರು. ಅಂದರೆ ಜನೇವರಿ 19, 1981ರಂದು ಕೊನೆಯುಸಿರು ಎಳೆಯುವ ತನಕವೂ ಈ ಸ್ಥಾನದಲ್ಲಿದ್ದರು. ದಾಂಡೇಲಿಯಲ್ಲಿ ಕಮ್ಯುನಿಷ್ಟ ಚಳುವಳಿಗೆ ಬುನಾದಿ ಹಾಕಿದವರಲ್ಲಿ ಇವರು ಪ್ರಮುಖರು. 

        ಕಾ. ಜಿ.ವಿ.ಪವಾರ್ ಸ್ಮರಣಾರ್ಥ ಅವರ ಕುಟುಂಬಕ್ಕೆ ಸಹಾಯ ಸಂಗ್ರಹಿಸಿಕೊಡಲು ಕಾ. ಆರ್.ಜಿ.ಸ್ಥಳೇಕರ್ ಅಧ್ಯಕ್ಷತೆಯಲ್ಲಿ 123 ಜನರ ಕಮಿಟಿ ರಚಿಸಿಕೊಳ್ಳಲಾಯಿತು. ತನ್ನ ಜೀವಮಾನವಿಡೀ ಪೂಣರ್ಾವಧಿಯಾಗಿ ದುಡಿಯುವ  ವರ್ಗಕ್ಕೆ ಮೀಸಲಾಗಿಟ್ಟ ಪ್ರೀತಿಯ ನಾಯಕನಿಗೆ ದಾಂಡೇಲಿಯ ವಿವಿಧ ವಿಭಾಗದ ಕಾಮರ್ಿಕರು ತಮ್ಮ ಒಂದು ದಿನದ ವೇತನವನ್ನು ಸಹಾಯ ನಿಧಿಗೆ ದೇಣಿಗೆಯಾಗಿ ನೀಡಲು ತೀಮರ್ಾನಿಸಿದರು. ಕಿರಿಯ ವಯಸ್ಸಿನಲ್ಲಿ ಹಿರಿದಾದ ಸಾಧನೆಗೆ ನಾಂದಿ ಹಾಡಿದ ಕಾಮ್ರೇಡ್ ಜಿ. ವಿ. ಪವಾರ್ ಇಂದಿನ ಚಳುವಳಿಯ ಕಾರ್ಯಕರ್ತರಾದವರಿಗೆ ಸ್ಪೂತರ್ಿ ಮಾತ್ರವಲ್ಲ ಅವರ ಜೀವನ ಮಾರ್ಗದರ್ಶಕವೂ ಹೌದು. 

       ಕಾಮ್ರೇಡ್ ಜಿ. ವಿ. ಪವಾರ್ ಎಂದರೆ ಹೋರಾಟಕ್ಕೆ ಮತ್ತೊಂದು ಹೆಸರು. ಉತ್ತರ ಕನ್ನಡದಲ್ಲಿ ಅವರ ಹೋರಾಟದ ಸಂಗಾತಿಗಳಾದ ಕಾ. ಎನ್. ಎಲ್. ಉಪಾಧ್ಯಾಯ, ಕಾ. ಎನ್. ಕೆ. ಉಪಾಧ್ಯಾಯ, ಕಾ. ಗಿರಿ ಪಿಕಳೆ(ಶೇಷಗಿರಿ ಪಿಕಳೆ, ಅಂಕೋಲಾ) ಕಾ. ಎನ್. ಜಿ. ಮ್ಹಾಳ್ಸೇಕರ್, ಕಾ. ಎಂ. ಎಸ್. ಧಾರೇಶ್ವರ್, ಕಾ. ಡಿ. ವಿ. ಸಿಂಗ್, ಕಾ. ಆರ್. ಜಿ.ಸ್ಥಳೇಕರ್, ಕಾ. ಜೀವಾಜಿ ಪುರುಷೋತ್ತಮ ನಾಯ್ಕ, ಕಾ. ಡೋಂಗಾ ಲಾಡು ಚಿಂಚನಕರ್,  ಆ ತಲೆಮಾರು ಇಂದಿಲ್ಲ. ಆದರೆ ಅವರ ಆದರ್ಶಗಳಿವೆ. 
                                                                        ಯಮುನಾ ಗಾಂವ್ಕರ, ಕಾರವಾರ

No comments:

Post a Comment