Monday 1 July 2013

ಆಟೋ ಚಾಲಕರ ಸ್ಥಿತಿ-ಸಮಸ್ಯೆ ಮತ್ತು ಪರಿಹಾರದ ದಾರಿ - ಯಮುನಾ ಗಾಂವ್ಕಾರ್, ಕಾರವಾರ.


  ಆತ 60 ವರ್ಷ ದಾಟಿದ ಆಟೋ ಡ್ರೈವರ್. 35-40 ವರ್ಷದಿಂದ ಆಟೋ ಓಡಿಸುತ್ತಿದ್ದಾನೆ. ಪ್ರಯಾಣಿಕರನ್ನು ಹತ್ತಿಸಿ ಬಾಡಿಗೆಗೆ ಹೊರಟಿದ್ದ. ದಿಢೀರ್ ಆಟೊ ಬಂದ್ ಆಯ್ತು. ಸ್ಟಾರ್ಟ ಮಾಡಲಿಕ್ಕೆ ರಾಚೆಟ್ ಎಳೆದು ಎಳೆದು ಎಳೆದು ಸುಸ್ತಾಗಿ ಬಿದ್ದ. ಸಾವರಿಸಿಕೊಂಡು ಪ್ಲಗ್ ಕ್ಲೀನ್ ಮಾಡಿದ. ಗಾಡಿ ಚಾಲೂ ಆಗಿಲ್ಲ. ಕಾರ್ಪೇಟರ್ ಕ್ಲೀನ್ ಮಾಡಿದ. ಆದರೂ ಚಾಲೂ ಆಗಿಲ್ಲ. ಪ್ರಯಾಣಿಕರು ಸಿಟ್ಟು ಬಂದು ಅರ್ಧ ದಾರಿಯ ಹಣವನ್ನೂ ಕೊಡದೇ ಕಾಲುಕಿತ್ತರು. ಆತನ ವೇದನೆ ನೋಡಿ ವಿಚಾರಿಸಿದೆ. ಆತ ನಡೆದ ಘಟನೆ ಹೇಳಿದ. ಇನ್ನು ಮೂರು ದಿನ ದುರಸ್ತಿಗೆ ಬೇಕು. ಅಲ್ಲಿತನ್ಕ ಮನೆಯಲ್ಲಿ ಉಪವಾಸವೇ ಗತಿ! ವರ್ಷವೊಂದಕ್ಕೆ 50ರಿಂದ60 ಸಾವಿರ ರೂಪಾಯಿ ಮೆಂಟೆನೆನ್ಸ್ಗೆ ಖಚರ್ು ಬೀಳ್ತದೆ. ಟಾಪ್ ರೂಪಿಂಗ್ ಮಾಡಿ, ಪೇಂಟ್ ಮಾಡಿಸಿ, ಇಂಜಿನ್ ಕೈಕೊಟ್ಟಾಗೆಲ್ಲ ಸರಿಮಾಡಿಸಿ, ಆಗಾಗ ಸೈಲೆನ್ಸರ್  ಕ್ಲೀನಿಂಗ್, ಬೋರ್ ಕ್ಲೀನಿಂಗ್ ಮಾಡಿಸಲಿಕ್ಕೆ, ಫಿಟ್ನೆಸ್ ಸಟರ್ಿಫಿಕೇಟ್ ಮಾಡುವ ತನಕ ಹೈರಾಣಾಗಿ ಹೋಗ್ತೇವೆ. ಒಂದು ಟೈರು ಹೊಸದು ಇದ್ದರೆ ಮಾತ್ರವೇ ಸುಮಾರು 35 ಸಾವಿರ ಕಿ.ಮಿ. ಓಡಿಸಬಹುದು. ದುರಸ್ತಿ ಆದ ನಂತರ ಅಂದರೆ ಪಂಕ್ಚರ್ ತೆಗೆದ ನಂತರ ಕೇವಲ 10 ಸಾವಿರ ಕಿ.ಮಿ. ಮಾತ್ರ ತಾಳಿಕೆ ಬರುತ್ತದೆ. ರಸ್ತೆನೂ ಸರಿಯಿಲ್ಲ. ಎಲ್ಲ ಬಿಡಿ ಭಾಗಗಳಿಗೂ ದುಬಾರಿ ಬೆಲೆ ತೆರಬೇಕು. ಆತನ ದು:ಖ ಮುಂದುವರಿದಿತ್ತು. 
             ಹಲವಾರು ಊರುಗಳಲ್ಲಿ ಆಟೋ ಸ್ಟ್ಯಾಂಡ್ ಇಲ್ಲ. ಇಕ್ಕಟ್ಟಾದ ರಸ್ತೆಯ ಮಗ್ಗುಲಲ್ಲಿ ನಿಲ್ಲಿಸಬೇಕು. ಜನ ಸಿಗುವ ದಾರಿಗುಂಟ ಹೋಗುತ್ತಿರುವುದೊಂದು ನಷ್ಟದ ಕೆಲಸ. ಅಲ್ಲಲ್ಲಿ ಆರಕ್ಷಕರ ಅಡೆ-ತಡೆ. ಹೊಸ ಡ್ರೈವರ್ ಗಳು ಬಂದಾಗ ಹಳಬರ ಅಸಹಕಾರ. ಪ್ರಯಾಣಿಕರು ಸಿಗದಿದ್ರೆ ಸಾಲದ ಬಾಧೆ ನೀಗಿಸೋರು ಯಾರು ಎಂಬ ಪ್ರಶ್ನೆ. 
ಹೌದು. ಆಟೊ ಚಾಲಕರು ಸಮಾಜದ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರು. ತನ್ನ ಜೀವಕ್ಕೆ ಸೌಕ್ಯವಿಲ್ಲದಿದ್ದರೂ  ಬೇರೆಯವರಿಗಾಗಿ ದುಡಿಯಲೇ ಬೇಕು. ಆ ದುಡಿತದಲ್ಲಿ ಅಲ್ಪ-ಸ್ವಲ್ಪ ಆದಾಯ ತರದಿದ್ದರೆ ಮನೆಮಂದಿಯೆಲ್ಲ ಉಪವಾಸ! ಅದರಲ್ಲೂ ಇಂದಿನ ಜೀವನಾವಶ್ಯಕ ವಸ್ತುಗಳ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ವಿಪರೀತ ಬೆಲೆ ಏರಿಕೆಯಿಂದಾಗಿ ತತ್ತರಿಸಿದ ವಿಭಾಗಗಳಲ್ಲಿ ಆಟೋ ರಿಕ್ಷಾ ಚಾಲಕರು-ಅವರ ಕುಟುಂಬದವರು ಮೊದಲಿಗರು. ಆದರೆ ಇವರ ನೂರಾರು ಸಮಸ್ಯೆಗಳಿಗೆ ಉತ್ತರ ಹುಡುಕುವ ಅಥವಾ ಕ್ಷೇಮಾಭಿವೃದ್ಧಿಗೆ ಯೋಜನೆ ರೂಪಿಸಲು ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ಮುಂದಾಗುತ್ತಿಲ್ಲ.  
       ಥ್ರೀ ಟೈರ್ ಗೆ ಅರವತ್ತು ವರ್ಷಗಳ ಇತಿಹಾಸವಿದೆ. ರಾಜ್ಯದಲ್ಲಿ ಸುಮಾರು 3 ಲಕ್ಷ ಆಟೋರಿಕ್ಷಾಗಳು ಸುಮಾರು 8 ಲಕ್ಷ ಆಟೋ ಚಾಲಕರು ಕೆಲಸನಿರತರಾಗಿದ್ದಾರೆ. ಆಟೊಕ್ಕೆ ಪೆಟ್ತೋಲಿಯಂ ಉತ್ಪನ್ನ ಬಳಸುವುದರಿಂದ  ತೆರಿಗೆ ರೂಪದಲ್ಲಿ 1642 ಕೊಟಿ ರುಪಾಯಿ ಆದಾಯ ಬರುತ್ತಿದೆ. ಆಟೋದ ಬಿಡಿ ಭಾಗಗಳು ತುಟ್ಟಿಯಾಗಿವೆ. ಅಪ್ರತ್ಯಕ್ಷ ತೆರಿಗೆಯಿಂದ ಸಕಾರದ ಬೊಕ್ಕಸ ತುಂಬುತ್ತಿದ್ದಾರೆ. ಆದರೆ ಈ ಕಾಮರ್ಿಕರಿಗೆ ನಿವೃತ್ತಿ ವೇತನ, ಆರೋಗ್ಯ ಸಂರಕ್ಷಣಾ ಯೋಜನೆಗಳು, ಈ.ಎಸ್.ಐ ಸೌಲಭ್ಯಗಳನ್ನು ನೀಡಬೇಕೆಂದು ಸಕರ್ಾರದೆದುರು ಹಲವು ಬಾರಿ ಹೋರಾಟಗಳು ಜರುಗಿವೆ. ಕೆಲವು ರಾಜ್ಯಗಳು ಮಾತ್ರವೇ ಆಟೋ ಚಾಲಕರಿಗೆ ಸೌಲಭ್ಯ ಒದಗಿಸಲು ಮುಂದಾಗಿವೆ. ನಮ್ಮ ರಾಜ್ಯದಲ್ಲಿ ಜಾಣ ಕಿವುಡು-ಮೂಕ ಧೋರಣೆ ಮುಂದುವರಿದಿದೆ. 
          ವಿದೇಶಿ ಬಹುರಾಷ್ಟ್ರೀಯ ಕಂಪನಿಗಳಿಗೆ, ದೊಡ್ಡದೊಡ್ಡ ಬಂಡವಾಳಗಾರರಿಗೆ ವಿವಿಧ ರೀತಿಯ ತೆರಿಗೆ ವಿನಾಯಿತಿಯನ್ನು ನೀಡುತ್ತಿರುವ ನಮ್ಮ ಸಕರ್ಾರಗಳು ಸಾಮಾನ್ಯ ಜನರ ಸಲುವಾಗಿ ಶಿಕ್ಷಣ, ಆರೋಗ್ಯದಂಥ ಸೇವಾ ಸೌಲಭ್ಯಗಳನ್ನು ತೀರಾ ದುಬಾರಿಗೊಳಿಸಿವೆ. ಆಟೋ ವಾಹನವಿದೆ ಎಂಬ ಒಂದೇ ಕಾರಣಕ್ಕೆ ಬಿಪಿಎಲ್ ರೇಷನ್ ಕಾರ್ಡ ನೀಡಲಾಗಿಲ್ಲ. ಹಣವಂತರಿಗೆ ಬದುಕುವ ಹಕ್ಕು ಕಲ್ಪಿಸಿ ಬಡ ಆಟೋದವರಿಂದ ಗಂಜಿಯನ್ನೂ ಕಸಿಯಲಾಗಿದೆ. ಹೋರಾಟದ ಹಾದಿ ತುಳಿದವರಿಗೆ ಲಾಠಿ ಚಾರ್ಜ ಮಾಡಿ ಮೊಕದ್ದಮೆ ದಾಖಲಿಸುವ ಕಾಯಕದಲ್ಲಿ ಸಕರ್ಾರ ನಿರತವಾಗಿದೆ! 
          ಹಾಗಾಗಿ 1) ಸಕರ್ಾರ ಈ ಹಿಂದಿನ ಹೋರಾಟಗಳ ಸಂದರ್ಭದಲ್ಲಿ ಭರವಸೆ ನೀಡಿದಂತೆ ಹಾಗೂ ಬಜೆಟ್ನಲ್ಲಿ ಮೀಸಲಿರಿಸಿದ 20 ಕೋಟಿ ರೂಪಾಯಿಗಳನ್ನು ಆಟೋ ಚಾಲಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚನೆಗಾಗಿ ಮೀಸಲಿರಿಸಬೇಕು. ಆಮೂಲಕ ಜೀವನ ಸಂದ್ಯಾಕಾಲದಲ್ಲಿ ನಿವೃತ್ತಿ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾಥರ್ಿ ವೇತನಗಳೇ ಮುಂತಾದ ಸೇವಾ ಸೌಲಭ್ಯಗಳನ್ನು ಒದಗಿಸುವುದು ಪ್ರಾಥಮಿಕ ಕರ್ತವ್ಯವಾಗಿದೆ. 2) ಆಟೋ ಚಾಲನ ಪತ್ರ ನೀಡುವಾಗ ವಿದ್ಯಾರ್ಹತೆಯನ್ನು ಕಡ್ಡಾಯ ಮಾಡಬಾರದು. 3) ಮನೆಗಳನ್ನು ನಿಮರ್ಿಸಿ ರಿಯಾಯಿತಿ ದರದಲ್ಲಿ ಕಂತುಗಳ ಮೂಲಕ ನೀಡಬೇಕು. 4) ಆಟೋ ರಿಕ್ಷಾ ಚಾಲಕರಿಗೆ ಸಕರ್ಾರದಿಂದ ನೀಡುತ್ತಿರುವ ಅಪಘಾತ ಪರಿಹಾರ ನಿಧಿ ಯ ನೊಂದಾವಣಿಯನ್ನು ಸರಳಗೊಳಿಸಬೇಕು. ಅಪಘಾತದಲ್ಲಿ ಮೃತರಾದವರಿಗೆ ನೀಡುವ ಪರಿಹಾರದ ಮೊತ್ತವನ್ನು ಒಂದು ಲಕ್ಷ ರೂಪಾಯಿಗೆ ಏರಿಸಬೇಕು. ಸಹಜ ಮರಣ ಸಂಭವಿಸಿದಲ್ಲಿ ಐವತ್ತು ಸಾವಿರ ರೂ. ನೀಡಬೇಕು. 5) ಹೊಸ ಅಥವಾ ಹಳೇ ವಾಹನ ಖರೀದಿಸುವಾಗ ಖಾಸಗಿ ಲೇವಾ ದೇವಿದಾರರಿಂದ ಮೋಸ ಹೋಗುವುದನ್ನು ತಪ್ಪಿಸಲು ಎಲ್ಲ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ನೀಡಬೇಕು. 6) 1989 ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿದ ಸಕರ್ಾರವು ಆಟೋ ಅಪಘಾತವಾಗಿ ಪ್ರಯಾಣಿಕರ ಮರಣ ಸಂಭವಿಸಿದಲ್ಲಿ ಜಾಮೀನು ಸಿಗದಂತೆ ಮಾಡಿದೆ. ಆದರೆ ಈ ತಿದ್ದುಪಡಿಯಿಂದ ಆಟೋಚಾಲಕರು ಅಕಸ್ಮಾತ್ತಾಗಿ ಆಗುವ ಅಪಘಾತಗಳಿಗೆ ಜಾಮೀನು ಸಿಗದೆ ನೇರವಾಗಿ ಜೈಲಿಗೆ ಹೋಗುವಂತಾಗಿ ಇವರ ಮತ್ತು ಅವಲಂಬಿತರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಕಾರಣ ಸದ್ರಿ ತಿದ್ದುಪಡಿಯನ್ನು ವಜಾಗೊಳಿಸಬೇಕು. 7) ಮನೆ-ನಿವೇಶನ ರಹಿತ ಆಟೋ ಚಾಲಕರಿಗೆ ವಸತಿ ಸಂಕೀರ್ಣ ನಿಮರ್ಿಸಬೇಕು. 8) ಕೇರಳ, ತಮಿಳುನಾಡು ರಾಜ್ಯಗಳಲ್ಲಿರುವಂತೆ 2 ರೂ.ಗೆ 35 ಕೆ.ಜಿ. ಅಕ್ಕಿ ಹಾಗೂ 14 ಜೀವನಾವಶ್ಯಕ ಪದಾರ್ಥಗಳನ್ನು ನೀಡುವಂತಾಗಬೇಕು. 9) ಆಟೋ ಚಾಲಕರ ಮತ್ತು ಅವರ ಮಕ್ಕಳ ಮದುವೆಗೆ ಸಹಾಯ ನಿಧಿ, ಆರೋಗ್ಯ ನಿಧಿ, ಮರಣ ಪರಿಹಾರ ನಿಧಿ, ಶವ ಸಂಸ್ಕಾರ ನಿಧಿಗಳನ್ನೂ ಒದಗಿಸಲು ಸಕರ್ಾರಗಳು ಮುಂದಾಗಬೇಕು. 
           ನಮ್ಮ ರಾಜ್ಯದಲ್ಲಿ ಆಟೋ ರಿಕ್ಷಾ ಚಾಲಕರದ್ದೇ ಆದ ಸಂಘಗಳೂ ಇವೆ. ಆಟೋಚಾಲಕ-ಮಾಲಕರ ಸಂಘಗಳೂ ಇವೆ. ಕೆಲವು ಸಂಘಗಳು ಹಬ್ಬ-ಹುಣ್ಣಿಮೆ ಮಾಡಲಿಕ್ಕೆ ಮಾತ್ರ ಸೀಮಿತವಾಗಿವೆ. ಇನ್ನೂ ಕೆಲವು ಚಳುವಳಿಯನ್ನೂ ಮಾಡುತ್ತಿವೆ. ಆದರೆ ಈ ಚಳುವಳಿ ನಿರತರೊಂದಿಗೆ ಉಳಿದವರೂ ಸೇರಿ ಒಂದು ವೇದಿಕೆ ರಚಿಸಿ ಆಟೋ ರಿಕ್ಷಾ ಕಲ್ಯಾಣ ಮಂಡಳಿ ರಚನೆಗೆ ಒತ್ತಡ ಹಾಕುವಂತಾದರೆ ಅಂತಿಮ ಜಯ ಇವರದ್ದೇ. 
           ಬಾಯುಪಚಾರದ ಜನಕಲ್ಯಾಣದ ಮಾತುಬಿಟ್ಟು ನಿಜವಾದ ರಾಜಕೀಯ ಇಚ್ಛಾ ಶಕ್ತಿ ಇದ್ದರೆ! . . . ಸಕರ್ಾರಗಳಿಗೆ ಮನಸ್ಸಿದ್ದರೆ ಆಟೊ ಚಾಲಕರ ಜೀವನವನ್ನು ಸುಧಾರಿಸಲು ಮಾಗರ್ೋಪಾಯಗಳಿವೆ. 
 

                                                                                                            ಯಮುನಾ ಗಾಂವ್ಕಾರ್, ಕಾರವಾರ.
 

No comments:

Post a Comment